ರಿತ್ತಿ ಕುಟುಂಬವು ಕಡುಬಡವರಾಗಿದ್ದಾರೆ. ಸಾಕಷ್ಟು ಸಂಪತ್ತು ಸಿಕ್ಕಿದ್ದರೂ ಸಹಿತ ಯಾವುದೇ ಫಲಾಪೇಕ್ಷೆಯಿಲ್ಲದೆ ಸರ್ಕಾರಕ್ಕೆ ಮರಳಿ ನೀಡಿರುವ ಕಾರ್ಯ ಶ್ಲಾಘನೀಯ.
ಗದಗ: ಪ್ರಾಮಾಣಿಕತೆಯಿಂದ ನಿಧಿಯನ್ನು ಸರ್ಕಾರಕ್ಕೆ ಮರಳಿ ನೀಡಿರುವ ಪ್ರಜ್ವಲ್ ರಿತ್ತಿ ಕುಟುಂಬಕ್ಕೆ ನಿಧಿಯ ಬಂಗಾರದ ಸಮಾನಾಂತರ ಸಹಾಯಧನ ನೀಡುವ ಕುರಿತಂತೆ ಗ್ರಾಮಸ್ಥರ ಒತ್ತಾಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ತಂದು ಸೂಕ್ತ ಪರಿಹಾರ ದೊರಕಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಮಾಜಿ ಸಚಿವ ಬಿ.ಆರ್. ಯಾವಗಲ್ ಭರವಸೆ ನೀಡಿದರು.ಮಂಗಳವಾರ ಗ್ರಾಮದ ಪ್ರಜ್ವಲ್ ರಿತ್ತಿ ಅವರ ಕುಟುಂಬವನ್ನು ಭೇಟಿ ಮಾಡಿ ನಂತರ ಮಾತನಾಡಿ, ರಿತ್ತಿ ಕುಟುಂಬವು ಕಡುಬಡವರಾಗಿದ್ದಾರೆ. ಸಾಕಷ್ಟು ಸಂಪತ್ತು ಸಿಕ್ಕಿದ್ದರೂ ಸಹಿತ ಯಾವುದೇ ಫಲಾಪೇಕ್ಷೆಯಿಲ್ಲದೆ ಸರ್ಕಾರಕ್ಕೆ ಮರಳಿ ನೀಡಿರುವ ಕಾರ್ಯ ಶ್ಲಾಘನೀಯ. ಪ್ರಜ್ವಲ್‌ನಿಗೆ ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ವಿವಿಧ ವಿಭಾಗಗಳ ಪ್ರಶಸ್ತಿಗೆ ಪರಿಗಣಿಸುವುದರ ಮೂಲಕ ಸಹಾಯಧನದ ನೆರವಿನ ಹಸ್ತವನ್ನು ಹೆಚ್ಚಿಸುವಂಥ ಮನವಿಯನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಗುವುದು. ರಿತ್ತಿ ಕುಟುಂಬಕ್ಕೆ ಪರ್ಯಾಯ ವಸತಿ ಸೌಕರ್ಯ, ಶಿಕ್ಷಣ ಸೌಲಭ್ಯ ಸೇರಿದಂತೆ ಅನೇಕ ಸಹಾಯ ದೊರಕುವಂತೆ ಮಾಡುವ ಕಾರ್ಯವನ್ನು ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಮಂತ್ರಿಗಳು, ಸರ್ಕಾರ ಮಾಡಲಿದೆ ಎಂದರು.
ಈ ಸಂದರ್ಭದಲ್ಲಿ ಹಾಲುಮತ ಮಹಾಸಭಾ ರಾಜ್ಯಾಧ್ಯಕ್ಷ ರುದ್ರಣ್ಣ ಗುಳಗಳಿ, ರಾಷ್ಟ್ರೀಯ ಯುವ ಕಾಂಗ್ರೆಸ್ ಕಾರ್ಯದರ್ಶಿ ವಿವೇಕ ಯಾವಗಲ್, ಗ್ರಾಪಂ ಅಧ್ಯಕ್ಷ ಕೆ.ಎಸ್. ಪೂಜಾರ, ಸದಸ್ಯರಾದ ಪೀರಸಾಬ ನದಾಫ, ಶ್ರೇಯಾ ಕಟಿಗ್ಗಾರ, ಚಂದ್ರವ್ವ ರಿತ್ತಿ, ಅನ್ನಪೂರ್ಣ ರಿತ್ತಿ, ಫಕ್ಕೀರಮ್ಮ ಬೇಲೇರಿ, ಶಾಂತವ್ವ ಮಣಕವಾಡ, ರಜೀಯಾ ಬೇಗಂ ತಹಶೀಲ್ದಾರ, ಮುಖಂಡರಾದ ವೀರಯ್ಯ ಗಂಧದ, ನಿಂಗಪ್ಪ ಗುಂಜಳ, ಅಂದಾನಪ್ಪ ಕಣವಿ, ಮಂಜುನಾಥ ಕಟಿಗ್ಗಾರ, ವಾಸಿಂ ಮಸೂತಿಮನಿ, ಮರದಾನಲಿ ದೊಡ್ಡಮನಿ, ರಸೂಲಸಾಬ ದೌಲತ್ತರ, ಸರ್ಫರಾಜ್, ರಾಘವೇಂದ್ರ ವಿಠೋಜಿ, ಫಾರೂಕ್ ಮುಲ್ಲಾ, ಮಲ್ಲಪ್ಪ ಸೊರಟೂರ ರಿಯಾಜ್ ಮಸೂತಿಮನಿ ಇದ್ದರು.