ಜಾತ್ರೆ, ಉರೂಸ್‌ಗಳು ಶಾಂತಿ, ಸಹಬಾಳ್ವೆ ಹಾಗೂ ಮಾನವೀಯ ಮೌಲ್ಯಗಳ ಸಂದೇಶ ಸಾರಲಿದ್ದು, ಎಲ್ಲರೂ ಇಂಥ ಆಚರಣೆಗಳ ನೆಪದಲ್ಲಿ ಒಂದೆಡೆ ಸೇರಿ ಬೆರೆಯುವುದು ಸೌಹಾರ್ದತೆ, ಸಹೋದರತೆ ನೆಲೆಸಲು ಸಹಕಾರಿ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.

ಹಾನಗಲ್ಲ: ಜಾತ್ರೆ, ಉರೂಸ್‌ಗಳು ಶಾಂತಿ, ಸಹಬಾಳ್ವೆ ಹಾಗೂ ಮಾನವೀಯ ಮೌಲ್ಯಗಳ ಸಂದೇಶ ಸಾರಲಿದ್ದು, ಎಲ್ಲರೂ ಇಂಥ ಆಚರಣೆಗಳ ನೆಪದಲ್ಲಿ ಒಂದೆಡೆ ಸೇರಿ ಬೆರೆಯುವುದು ಸೌಹಾರ್ದತೆ, ಸಹೋದರತೆ ನೆಲೆಸಲು ಸಹಕಾರಿ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.ಹಾನಗಲ್ಲಿನ ದರ್ಗಾ ಓಣಿಯ ಹಜರತ್ ಸೈಯ್ಯದ್ ಮರ್ದಾನ್-ಏ-ಗೈಬ್ ದರ್ಗಾ ಉರೂಸ್‌ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಸಮಾಜದಲ್ಲಿ ಭಾವೈಕ್ಯತೆ ಬಲಪಡಿಸುವ ಅಗತ್ಯ ಹೆಚ್ಚಿದೆ. ಭಾರತ ದೇಶದ ಇತಿಹಾಸಕ್ಕೆ ತನ್ನದೇ ಆದ ಪರಂಪರೆ ಇದೆ. ಇದು ಸರ್ವ ಜನಾಂಗದ ಶಾಂತಿಯ ತೋಟ. ಎಲ್ಲರೂ ಪರಸ್ಪರ ಪ್ರೀತಿ, ವಿಶ್ವಾಸ, ಅನ್ಯೋನ್ಯತೆಯಿಂದ ಬದುಕಲು ಮುಂದಾಗಬೇಕಿದೆ. ದ್ವೇಷ, ಅಸೂಯೆಯಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ ಎನ್ನುವ ಸತ್ಯವನ್ನು ಪ್ರತಿಯೊಬ್ಬರೂ ಅರಿಯಬೇಕಿದೆ. ಜಾತಿ, ಧರ್ಮಗಳ ಮಧ್ಯೆ ವಿಷಬೀಜ ಬಿತ್ತಿ ಸ್ವಾರ್ಥ ಸಾಧನೆಗೆ ಹವಣಿಸುವರಿಂದ ಅಂತರ ಕಾಯ್ದುಕೊಳ್ಳಬೇಕಿದೆ. ಪ್ರೀತಿಗೆ ಜಗತ್ತನ್ನು ಗೆಲ್ಲುವ ಶಕ್ತಿ ಇದೆ ಎನ್ನುವುದು ಇತಿಹಾಸದಿಂದ ತಿಳಿಯುತ್ತದೆ. ಆದರೆ ದ್ವೇಷ ಎಲ್ಲವನ್ನೂ ಅಳಿಸಿ ಹಾಕಲಿದೆ ಎಂದು ಹೇಳಿದ ಅವರು ಮರ್ದಾನ್-ಏ-ಗೈಬ್ ದರ್ಗಾಕ್ಕೆ ತನ್ನದೇ ಆದ ಪರಂಪರೆ ಇದೆ. ಹಿಂದೂ-ಮುಸ್ಲಿಂ ಧರ್ಮೀಯರು ಬೇಧಭಾವವಿಲ್ಲದೇ ಇಲ್ಲಿಗೆ ನಡೆದುಕೊಳ್ಳುವುದು ಸಂತಸದ ಸಂಗತಿ ಎಂದರು. ಪ್ರಮುಖರಾದ ಖ್ವಾಜಾಮೊಹಿದ್ದೀನ್ ಜಮಾದಾರ, ಮತೀನ್ ಶಿರಬಡಗಿ, ಫೈರೋಜ್ ಶಿರಬಡಗಿ, ಜಾಫರ್ ಬಾಳೂರ, ರೆಹಾನ್ ಸರ್ವಿಕೇರಿ, ಇಸ್ಮಾಯಿಲ್ ರೆಹೆಮಾನಖಾನವರ, ಸಿಕಂದರ್ ವಾಲಿಕಾರ, ರವಿ ದೇಶಪಾಂಡೆ, ಆದರ್ಶ ಶೆಟ್ಟಿ, ಮೆಹಬೂಬಅಲಿ ಹರವಿ, ಅಜಮದರಜಾ ಗುಲಾಮಅಲಿಶಾ, ನನ್ನೇಸಾಬ ಕಲೈಗಾರ, ಅಹ್ಮದ್‌ರಜಾ ಭಂಡಾರಿ, ರಫೀಕ್‌ಅಹ್ಮದ್ ಶಿರಸಿ, ಅಬಿದಿನ್ ಮುಲ್ಲಾ, ಸರ್ವರಭಾಷಾ ಮಕಾನದಾರ, ಅನ್ವರಭಾಷಾ ಮಕಾನದಾರ, ಸದ್ದಾಂಹುಸೇನ್ ಮಕಾನದಾರ, ಅಲ್ತಾಫ್‌ಅಹ್ಮದ್ ಮಕಾನದಾರ, ಅಬ್ದುಲ್ ಹೊಸೂರ, ನಿಯಾಜ್ ಸರ್ವಿಕೇರಿ, ಖುರ್ಷಿದ್ ಹುಲ್ಲತ್ತಿ ಇದ್ದರು.