ಮಹರ್ಷಿ ವಾಲ್ಮೀಕಿಯವರ ತತ್ವ ಮೈಗೂಡಿಸಿಕೊಳ್ಳಿ

| Published : Oct 11 2025, 01:00 AM IST

ಮಹರ್ಷಿ ವಾಲ್ಮೀಕಿಯವರ ತತ್ವ ಮೈಗೂಡಿಸಿಕೊಳ್ಳಿ
Share this Article
  • FB
  • TW
  • Linkdin
  • Email

ಸಾರಾಂಶ

ಮಹರ್ಷಿ ವಾಲ್ಮೀಕಿಯವರು ರಾಮಾಯಣದ ಮಹಾಗ್ರಂಥವನ್ನು ರಚಿಸಿ ಇಡೀ ಜಗತ್ತಿಗೆ ಭಾರತೀಯ ಸಾಂಸ್ಕೃತಿಕ ಪರಂಪರೆ ಎತ್ತಿ ತೋರಿಸಿದ್ದಾರೆ

ಕನ್ನಡಪ್ರಭ ವಾರ್ತೆ ಯಮಕನಮರಡಿ

ಮಹರ್ಷಿ ವಾಲ್ಮೀಕಿ ಅವರ ತತ್ವಾದರ್ಶಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಯುವ ಧುರೀಣ ರವೀಂದ್ರ ಜಿಂಡ್ರಾಳಿ ಹೇಳಿದರು.

ಹತ್ತರಗಿ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಯಮಕನಮರಡಿ ಆರ್.ಸಿ ಗ್ರಾಮದಲ್ಲಿ ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಪೂಜೆ ನೆರವೇರಿಸಿ ಮಾತನಾಡಿದ ಅವರು, ಮಹರ್ಷಿ ವಾಲ್ಮೀಕಿಯವರು ರಾಮಾಯಣದ ಮಹಾಗ್ರಂಥವನ್ನು ರಚಿಸಿ ಇಡೀ ಜಗತ್ತಿಗೆ ಭಾರತೀಯ ಸಾಂಸ್ಕೃತಿಕ ಪರಂಪರೆ ಎತ್ತಿ ತೋರಿಸಿದ್ದಾರೆ. ಇಂದು ಸಮಾಜವು ಮಹರ್ಷಿ ವಾಲ್ಮೀಕಿ ಅವರು ರಚಿಸಿದ ರಾಮಾಯಣ ಮಹಾ ಕಾವ್ಯದ ತಳಹದಿಯ ಮೇಲೆ ನಿಂತಿದೆ. ಯುವಕರು ವಾಲ್ಮೀಕಿಯರು ಹಾಕಿಕೊಟ್ಟ ಮಾರ್ಗದಲ್ಲಿ ನಡೆದು ಸಮಾಜದಲ್ಲಿ ಒಳ್ಳೆಯ ನಾಗರಿಕರಾಗಿ ಬದುಕಬೇಕು ಎಂದು ತಿಳಿಸಿದರು.

ಹಿರಿಯ ಜಾನಪದ ಗಾರುಡಿಗ ಗೋಪಾಲ ಚಿಪಣಿ ಮಾತನಾಡಿದರು. ಈ ಸಂದರ್ಭದಲ್ಲಿ ಹುಕ್ಕೇರಿ ತಾಲೂಕು ಪಂಚಾಯತಿ ಮಾಜಿ ಅಧ್ಯಕ್ಷ ದಸ್ತಗೀರ ಬಸ್ಸಾಪೂರಿ, ಸಮರ್ಥ ಜಿಂಡ್ರಾಳಿ, ರಾಜು ಹಿರೇಮಠ ಇದ್ದರು.

ಯಮಕನಮರಡಿ ಆರ್.ಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಿತು. ಕಾರ್ಯಕ್ರಮದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಯುವಕ ಮಂಡಲದ ಪದಾಧಿಕಾರಿಗಳಾದ ಸತೀಶ ತೇಗೂರಿ, ಅಜೀತ ಬಸರಗಿ, ಪರಶುರಾಮ ಮುಂಡಲಿ, ಆನಂದ ಕುಂಟಸತ್ತಿ, ಕೆಂಪಣ್ಣ ಮುಂಡಲಿ, ಮಂಜುನಾಥ ಹಿತ್ತಲಕಿ, ರಾಜು ಮುಂಡಲಿ, ಕುಮಾರ ಪೊಂಗ, ಬಾಳೇಶ ಮುಂಡಲಿ, ಅಮರ ನೌಕುಡಿ, ಈರಣ್ಣ ನೌಕುಡಿ, ಕಲ್ಲಪ್ಪ ಜಾರಕಿಹೊಳಿ, ನವೀನ ಪಾತ್ರೋಟ, ಸಂಪತ ಪೊಂಗ, ಶ್ರೀಧರ ತೇಗೂರಿ, ಶೇಖರ ನಾಯಿಕ, ಮಾರುತಿ ನಕೋಜಿ ಮುಂತಾದವರು ಉಪಸ್ಥಿತರಿದ್ದರು.