ಅಹಿಂದ ಚಳುವಳಿಯಿಂದ ಮಹಿಳೆಯರ ಸಬಲೀಕರಣ: ಕೆ.ವಿ.ಪದ್ಮ

| Published : Jun 17 2024, 01:32 AM IST

ಸಾರಾಂಶ

ತರೀಕೆರೆ, ರಾಜ್ಯದಲ್ಲಿ ಅಹಿಂದ ಚಳುವಳಿಯಿಂದ ಎಲ್ಲಾ ಜಾತಿ ಧರ್ಮದವರನ್ನು ಒಂದೇ ಸೂರಿನಡಿಗೆ ತಂದು ಸಂಘಟನೆ ಮಾಡಿ ಅಧಿಕಾರ ಹಿಡಿಯುವ ನಿಟ್ಟಿನಲ್ಲಿ ನಾವೆಲ್ಲರೂ ಒಂದಾಗಬೇಕು ಎಂದು ಅಹಿಂದ ಚಳುವಳಿ ಮಹಿಳಾ ಘಟಕದ ಸಮಿತಿ ಸದಸ್ಯೆ ಕೆ.ವಿ. ಪದ್ಮ ಹೇಳಿದರು.

ಇಂದಿರಾ ನಗರದಲ್ಲಿ ಸೇರಿದ್ದ ಅಹಿಂದ ಚಳುವಳಿ ಸಭೆ

ಕನ್ನಡಪ್ರಭ ವಾರ್ತೆ, ತರೀಕೆರೆ

ರಾಜ್ಯದಲ್ಲಿ ಅಹಿಂದ ಚಳುವಳಿಯಿಂದ ಎಲ್ಲಾ ಜಾತಿ ಧರ್ಮದವರನ್ನು ಒಂದೇ ಸೂರಿನಡಿಗೆ ತಂದು ಸಂಘಟನೆ ಮಾಡಿ ಅಧಿಕಾರ ಹಿಡಿಯುವ ನಿಟ್ಟಿನಲ್ಲಿ ನಾವೆಲ್ಲರೂ ಒಂದಾಗಬೇಕು ಎಂದು ಅಹಿಂದ ಚಳುವಳಿ ಮಹಿಳಾ ಘಟಕದ ಸಮಿತಿ ಸದಸ್ಯೆ ಕೆ.ವಿ. ಪದ್ಮ ಹೇಳಿದರು.ಪಟ್ಟಣದ ಇಂದಿರಾ ನಗರದಲ್ಲಿ ಸೇರಿದ್ದ ಅಹಿಂದ ಚಳುವಳಿ ಸಭೆಯಲ್ಲಿ ಮಾತನಾಡಿದರು. ಅಹಿಂದ ಚಳುವಳಿ ಭಗವಾನ್ ಬುದ್ಧ, ಬಾಬಾ ಸಾಹೇಬ್ ಅಂಬೇಡ್ಕರ್, ಜಗಜ್ಯೋತಿ ಬಸವಣ್ಣ ಹಾಗೂ ರಾಮಸ್ವಾಮಿ ಪೆರಿಯರ್ ರವರ ಆದರ್ಶಗಳನ್ನು ಹೊತ್ತು ದೇವರಾಜು ಅರಸು, ಬಸವಲಿಂಗಪ್ಪ ಹಾಗೂ ಮಹಾತ್ಮ ಪ್ರೋ. ಬಿ ಕೃಷ್ಣಪ್ಪ ರವರ ಹೋರಾಟಗಳ ಹಿನ್ನಲೆ ಹೊಂದಿದೆ. ಸಮ ಸಮಾಜ ನಿರ್ಮಾಣ ಮಾಡುವ ಉದ್ದೇಶದಿಂದ ರಾಜ್ಯದಲ್ಲಿ ಅಹಿಂದ ಚಳುವಳಿ ಸಂಘಟನೆ ಬಿರುಸಾಗಿ ನಡೆಯುತ್ತಿದೆ. ಈ ಚಳುವಳಿ ಅಹಿಂದ ಸಬಲೀಕರಣ ಸೌಹಾರ್ದ ಸಹಕಾರಿ ಸಂಘ ಸ್ಥಾಪನೆ ಮಾಡಿ ಮಹಿಳೆಯರ ಅಭಿವೃದ್ಧಿಗೆ ಸಬಲೀಕರಣಕ್ಕೆ ಮುಂದಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾಚೇನಹಳ್ಳಿ ಗ್ರಾಮಸ್ಥರು ಸಹ ಉಪಸ್ಥಿತರಿದ್ದರು.

16ಕೆಟಿಆರ್.ಕೆ.2ಃ

ತರೀಕೆರೆಯಲ್ಲಿ ಆಹಿಂದ ಚಳುವಳಿ ಸಭೆ ನಡೆಯಿತು.