ಸಾರಾಂಶ
ಶೃಂಗೇರಿ ಗ್ರಾಮೀಣ ಪ್ರದೇಶಗಳಲ್ಲಿ ಸ್ಥಳೀಯವಾಗಿ ಉತ್ಪಾದಿಸಿದ ಗೃಹೋಪಯೋಗಿ ಉತ್ಪನ್ನಗಳನ್ನು ಖರೀದಿಸಿ ಪ್ರೋತ್ಸಾಹಿಸಬೇಕು ಎಂದು ಧರೆಕೊಪ್ಪ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಪ್ರಭಾವತಿ ಹೇಳಿದರು.
ಕನ್ನಡಪ್ರಭ ವಾರ್ತೆ, ಶೃಂಗೇರಿ
ಗ್ರಾಮೀಣ ಪ್ರದೇಶಗಳಲ್ಲಿ ಸ್ಥಳೀಯವಾಗಿ ಉತ್ಪಾದಿಸಿದ ಗೃಹೋಪಯೋಗಿ ಉತ್ಪನ್ನಗಳನ್ನು ಖರೀದಿಸಿ ಪ್ರೋತ್ಸಾಹಿಸಬೇಕು ಎಂದು ಧರೆಕೊಪ್ಪ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಪ್ರಭಾವತಿ ಹೇಳಿದರು.ತಾಲೂಕಿನ ಧರೆಕೊಪ್ಪ ಪಂಚಾಯಿತಿ ವ್ಯಾಪ್ತಿಯ ಧರೆಕೊಪ್ಪದಲ್ಲಿ ಸಂಜೀವಿನಿ ಒಕ್ಕೂಟದ ಮಾಸಿಕ ಸಂತೆ, ವಸ್ತು ಪ್ರದರ್ಶನ ಮಾರಾಟ ಮೇಳ ಉದ್ಘಾಟಿಸಿ ಮಾತನಾಡಿದರು. ಗ್ರಾಮೀಣ ಪ್ರದೇಶಗಳಲ್ಲಿ ತಲೆಮಾರಿ ನಿಂದಲೂ ನಡೆದುಕೊಂಡು ಬಂದ ಕುಲಕಸುಬು, ಗೃಹಪೋಯೋಗಿ ಉಪ ಉತ್ಪನ್ನಗಳನ್ನು ನಂಬಿ ಬಹುತೇಕ ಕುಟುಂಬಗಳಿದ್ದು, ಅವುಗಳ ಆದಾಯವನ್ನೇ ಅವಲಂಬಿಸಿದೆ. ನಾವು ಇಂತಹ ವಸ್ತುಗಳನ್ನು ಖರೀದಿಸಿ ಪ್ರೋತ್ಸಾಹಿಸುವುದರಿಂದ ಅಂತಹ ಕುಟುಂಬಗಳಿಗೆ ಆದಾಯ ತಂದುಕೊಟ್ಟಂತಾಗುತ್ತದೆ ಎಂದರು.
ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಆದರ್ಶ ಮಾತನಾಡಿ ಸ್ವಸಹಾಯ ಸಂಘದ ಸದಸ್ಯರು ತಯಾರಿಸಿದ ಉತ್ಪನ್ನಗಳಿಗೆ ವಸ್ತು ಪ್ರದರ್ಶನ, ಮಾರಾಟ, ತ್ರೈಮಾಸಿಕ ಸಂತೆಯಲ್ಲದೇ ರಾಜ್ಯ ಮತ್ತು ಜಿಲ್ಲೆಯಾದ್ಯಾಂತ ನಡೆಯುವ ಸರಸ್ ಮೇಳಗಳಲ್ಲಿಯೂ ಭಾಗವಹಿಸಬಹುದಾಗಿದೆ ಎಂದರು.ಕೃಷಿಯೇತರ ತಾಲೂಕು ವ್ಯವಸ್ಥಾಪಕರಾದ ಚೈತ್ರ ಮಾತನಾಡಿ ಮಹಿಳೆಯರು ತಾವುಗಳು ಕೌಶಾಲ್ಯಾ ಭಿವೃದ್ಧಿ ತರಬೇತಿ ಪಡೆದುಕೊಂಡು ಸಂಜೀವಿನಿ ಉತ್ಪನ್ನಗಳನ್ನು ಅಸ್ಮಿತೆ ಮತ್ತು ಅಕ್ಕ ಬ್ರಾಂಡಿಂಗ್ ನೊಂದಿಗೆ ಮಾರುಕಟ್ಟೆಗೆ ಪರಿಚಯಿಸಬೇಕು. ಪ್ರತೀ ಮನೆ ಮನೆಗಳಲ್ಲಿಯೂ ಸಂಜೀವಿನಿ ಉತ್ಪನ್ನಗಳನ್ನು ಬಳಸಬೇಕು ಎಂದರು.
ಕಾರ್ಯಕ್ರಮದಲ್ಲಿ ಒಕ್ಕೂಟದ ಕಾರ್ಯದರ್ಶಿ ಉಷಾ, ಜಂಟೀ ಕಾರ್ಯದರ್ಶಿ ಕವನ, ಗ್ರಾಪಂ ಉಪಾಧ್ಯಕ್ಷ ಭಾನುಪ್ರಕಾಶ್, ರವಿಶಂಕರ್,ಮತ್ತಿತರರು ಉಪಸ್ಥಿತರಿದ್ದರು.27 ಶ್ರೀ ಚಿತ್ರ 1-
ಶೃಂಗೇರಿ ತಾಲೂಕಿನ ಧರೆಕೊಪ್ಪದಲ್ಲಿ ನಡೆದ ಸಂಜೀವಿನಿ ಒಕ್ಕೂಟದ ಮಾಸಿಕ ಸಂತೆ,ವಸ್ತು ಪ್ರದರ್ಶನ,ಮಾರಾಯ ಮೇಳವನ್ನು ಪ್ರಭಾವತಿ ಉದ್ಘಾಟಿಸಿದರು.;Resize=(128,128))
;Resize=(128,128))
;Resize=(128,128))