ಸಾರಾಂಶ
ಕೆಲಸದ ನಿಮಿತ್ತ ಬೈಕ್‌ನಲ್ಲಿ ತೆರಳುತಿದ್ದ. ಬೈಕ್ ನಲ್ಲಿ ಮಿರರ್ ಇಲ್ಲದಿದ್ದರಿಂದ ಸ್ಪಾಟ್ ಫೈನ್‌ಗೆ ಪೊಲೀಸರು ಮುಂದಾದರು. ಈ ವೇಳೆ ನನ್ನ ಬಳಿ ಹಣವಿಲ್ಲ, ರಸೀದಿ ಕೊಡಿ ಕೋರ್ಟ್ ನಲ್ಲಿ ಫೈನ್ ಕಟ್ಟುತ್ತೇನೆಂದ.
ಕನ್ನಡಪ್ರಭ ವಾರ್ತೆ ತುಮಕೂರು
ಮಿರರ್ ಇಲ್ಲದೆ ವಾಹನ ಚಲಾಯಿಸುತ್ತಿದ್ದ ಸವಾರನನ್ನು ಸಂಚಾರಿ ಪೊಲೀಸರು ತಡೆದಿದ್ದಕ್ಕೆ ಸವಾರ ರಸ್ತೆಯಲ್ಲೇ ಬೈಕ್ ನಿಲ್ಲಿಸಿ ಪ್ರತಿಭಟಿಸಿದ ಘಟನೆ ನಗರದ ಔಟರ್ ರಿಂಗ್ ರಸ್ತೆಯಲ್ಲಿ ನಡೆದಿದೆ.ಬಿಎಂಟಿಸಿ ಗುತ್ತಿಗೆ ನೌಕರರ ಹರ್ಷ ಎಂಬಾತನೇ ಪ್ರತಿಭಟಿಸಿದ ವ್ಯಕ್ತಿ. ಮಿರರ್ ಇಲ್ಲದೆ ಬಂದ ಬೈಕ್ ಸವಾರರನ್ನು ಸಂಚಾರಿ ಪೊಲೀಸರು ತಡೆಯಲು ಮುಂದಾದಾಗ ರಸ್ತೆಯಲ್ಲೇ ಪ್ರತಿಭಟಿಸಿದ್ದಾರೆ. ಬಳಿಕ ಬೈಕ್ ಸವಾರನನ್ನುಜಯನಗರ ಪೊಲೀಸರು ವಶಕ್ಕೆ ಪಡೆದರು. ತುಮಕೂರು ನಗರ ಪೂರ್ವ ಸಂಚಾರಿ ಸಬ್ ಇನ್ ಸ್ಪೆಕ್ಟರ್ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.
ಕೆಲಸದ ನಿಮಿತ್ತ ಬೈಕ್‌ನಲ್ಲಿ ತೆರಳುತಿದ್ದ. ಬೈಕ್ ನಲ್ಲಿ ಮಿರರ್ ಇಲ್ಲದಿದ್ದರಿಂದ ಸ್ಪಾಟ್ ಫೈನ್‌ಗೆ ಪೊಲೀಸರು ಮುಂದಾದರು. ಈ ವೇಳೆ ನನ್ನ ಬಳಿ ಹಣವಿಲ್ಲ, ರಸೀದಿ ಕೊಡಿ ಕೋರ್ಟ್ ನಲ್ಲಿ ಫೈನ್ ಕಟ್ಟುತ್ತೇನೆಂದ. ಆದರೇ ಫೈನ್ ಹಾಕಿದ ಸಂಚಾರಿ ಪೊಲೀಸರು ಸ್ಪಾಟ್ ಫೈನ್ ಕಟ್ಟುವಂತೆ ಒತ್ತಾಯ ಮಾಡಿದರು. ಅಲ್ಲದೆ ಬೈಕ್ ಟಯರ್ ಗೆ ಕ್ಲ್ಯಾಂಪ್ ಹಾಕಿ ಸೀಜ್ ಮಾಡಿ ಹಣ ಕಟ್ಟುವಂತೆ ಒತ್ತಾಯ ಮಾಡಿದರು ಎಂದು ಹರ್ಷ ಆರೋಪಿಸಿದ್ದಾನೆ.ರಸ್ತೆಗೆ ಅಡ್ಡಲಾಗಿ ಬೈಕ್ ನಿಲ್ಲಿಸಿ ತಾನೂ ರಸ್ತೆಯಲ್ಲಿ ಕುಳಿತು ಪ್ರತಿಭಟನೆಗೆ ಮುಂದಾದ. ರಸ್ತೆ ತಡೆ ಹಿನ್ನೆಲೆ ಟ್ರಾಫಿಕ್ ಹೆಚ್ಚಾದ ಹಿನ್ನೆಲೆ ಸ್ಥಳಕ್ಕೆ ಬಂದ ಜಯನಗರ ಪೊಲೀಸರು ಬೈಕ್ ಸವಾರನನ್ನುವಶಕ್ಕೆ ಪಡೆದರು.
ಪೂರ್ವ ಸಂಚಾರಿ ಪಿಎಸ್ಐ ದೂರು ಹಿನ್ನೆಲೆ ಜಯನಗರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಬೈಕ್ ದಾಖಲೆ ತೋರಿಸದೆ ಇರುವುದರ ಜೊತೆಗೆ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಿನ್ನೆಲೆ ಎಫ್.ಐ.ಆರ್ ದಾಖಲಾಗಿದೆ.;Resize=(128,128))
;Resize=(128,128))