ಸಾರಾಂಶ
ಜಿಪಂ ಅಧಿಕಾರಿ ಜಯಲಕ್ಷ್ಮೀ ಅವರು ಹೋರಾಟಗಾರ ಸ್ಥಳಕ್ಕೆ ಭೇಟಿ ನೀಡಿ ಮನವಿ ಸ್ವೀಕರಿಸಿದರು.
ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳವುದಾಗಿ ಅಧಿಕಾರಿಗಳ ಭರವಸೆಕನ್ನಡಪ್ರಭ ವಾರ್ತೆ ಭದ್ರಾವತಿ
ಸಿಂಗನಮನೆ ಗ್ರಾಪಂ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ(ನರೇಗಾ)ಯಡಿ ಭ್ರಷ್ಟಾಚಾರ, ಅಕ್ರಮ ನಡೆದಿದ್ದು, ಇದರ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ ಬಣ) ವತಿಯಿಂದ ಕಳೆದ 5 ದಿನಗಳಿಂದ ನಡೆಯುತ್ತಿದ್ದ ಹೋರಾಟ ಭಾನುವಾರ ಅಂತ್ಯಗೊಂಡಿದೆ.ಉದ್ಯೋಗ ಖಾತ್ರಿ ಯೋಜನೆಯಡಿ ನಡೆದಿರುವ ಭ್ರಷ್ಟಾಚಾರ, ಅಕ್ರಮ ಕುರಿತು ತನಿಖೆ ಕೈಗೊಳ್ಳುವುದು ಹಾಗೂ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ನ.5ರಿಂದ ಅನಿರ್ಧಿಷ್ಟಾವಧಿ ಹೋರಾಟ ಕೈಗೊಳ್ಳಲಾಗಿದ್ದು, ಶುಕ್ರವಾರ ಮತ್ತು ಶನಿವಾರ ಎರಡು ದಿನಗಳ ಕಾಲ ಉಪವಾಸ ಸತ್ಯಾಗ್ರಹ ನಡೆಸಲಾಯಿತು.
ಸ್ಥಳಕ್ಕೆ ಜಿಪಂ ಅಧಿಕಾರಿ ಜಯಲಕ್ಷ್ಮೀ, ತಾಪಂ ಕಾರ್ಯನಿರ್ವಹಣಾಧಿಕಾರಿ ಎಂ. ಗಂಗಣ್ಣ, ಅಧಿಕಾರಿಗಳಾದ ಉಪೇಂದ್ರ ಬಾಬು, ಚೇತನ್ ಹಾಗೂ ಇತರರು ಆಗಮಿಸಿ ಹೋರಾಟಗಾರ ದೂರುಗಳನ್ನು ಆಲಿಸಿ ಮನವಿ ಸ್ವೀಕರಿಸಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳವುದಾಗಿ ಭರವಸೆ ನೀಡಿದ ಈ ಹಿನ್ನಲೆಯಲ್ಲಿ ಹೋರಾಟ ಅಂತ್ಯಗೊಂಡಿತು.ಕರ್ನಾಟಕ ರಕ್ಷಣಾ ವೇದಿಕೆ ಶಿವರಾಮೇಗೌಡ ಬಣದ ಜಿಲ್ಲಾಧ್ಯಕ್ಷರಾದ ರಾಘವೇಂದ್ರ ಹೆಬ್ಬಾರ್, ಉಪಾಧ್ಯಕ್ಷರಾದ ಈಶ್ವರ್, ಕಾರ್ಯಕರ್ತರಾದ ನರಸಿಂಹ ರಾಜು, ಎಸ್.ಆರ್ ರವಿಕುಮಾರ್, ಮೋಹನ್ ಕುಮಾರ್, ಆಟೋ ಆನಂದ್, ಯೋಗ ಮಾಸ್ಟರ್ ಗಣೇಶ್, ಮುರುಗೇಶ್ ಸೇರಿದಂತೆ ಇತರರು ಪಾಲ್ಗೊಂಡಿದ್ದರು.