ಸಾರಾಂಶ
ಜನನ, ಮರಣ ನೋಂದಣಿ ಕುರಿತು ತರಬೇತಿ ಕಾರ್ಯಾಗಾರದಲ್ಲಿ ಅಪರ ಡೀಸಿ ಡಾ.ತಿಪ್ಪೇಸ್ವಾಮಿ ಸೂಚನೆ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರಜನನ ಮತ್ತು ಮರಣ ನೋಂದಣಿ ಪ್ರಕ್ರಿಯೆಯು ಆಡಳಿತ ವ್ಯವಸ್ಥೆಯಲ್ಲಿ ಅತಿ ಮುಖ್ಯ ಕಾರ್ಯವಾಗಿದ್ದು, ಸರ್ಕಾರದ ಯೋಜನೆಗಳು, ಕಾರ್ಯಕ್ರಮಗಳನ್ನು ರೂಪಿಸುವಲ್ಲಿ ಈ ದತ್ತಾಂಶವು ಅತಿ ಉಪಯುಕ್ತಕಾರಿಯಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ.ಎನ್. ತಿಪೇಸ್ವಾಮಿ ತಿಳಿಸಿದರು ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ ಮತ್ತು ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ವತಿಯಿಂದ ಮಂಗಳವಾರ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ “ಜನನ ಮತ್ತು ಮರಣ ನಾಗರಿಕ ನೋಂದಣಿ ಪದ್ದತಿ” ಕುರಿತು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರಿಗೆ ಒಂದು ದಿನದ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಸಮರ್ಪಕವಾಗಿ ನಮೂದಿಸಿಸಾರ್ವಜನಿಕರು ಹಲವು ದಾಖಲೆಗಳನ್ನು ಪಡೆಯಲು ಈ ಪ್ರಮಾಣ ಪತ್ರಗಳು ಸಹಾಯಕಾರಿಯಾಗಿವೆ. ಈ ಹಿನ್ನೆಲೆಯಲ್ಲಿ ನೋಂದಣಿ ಪ್ರಕ್ರಿಯೆಲ್ಲಿ ಪಾಲ್ಗೊಳ್ಳುವ ಸಕ್ಷಮದ ಅಧಿಕಾರಿಗಳು ಮತ್ತು ಸಿಬ್ಬಂದಿ ತರಬೇತಿ ಕಾರ್ಯಾಗಾರವನ್ನು ಸದುಪಯೋಗಪಡಿಸಿಕೋಳ್ಳಬೇಕು ಹಾಗೂ ತಮ್ಮ ಕಾರ್ಯ ಕ್ಷೇತ್ರದಲ್ಲಿ ಸಮರ್ಪಕವಾಗಿ ಜನನ ಮತ್ತು ಮರಣ ಪ್ರಕರಣಗಳನ್ನು ನಮೂದಿಸುವ ಕಾರ್ಯವನ್ನು ಮಾಡಬೇಕು ಎಂದರು. ಬೆಂಗಳೂರು ಕೇಂದ್ರ ಕಚೇರಿಯ ಮಾಸ್ಟರ್ ಟ್ರೈನರ್ ಮಧುಸೂಧನ್ ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಜನನ ಮತ್ತು ಮರಣ ಇವುಗಳು ಎರಡು ಪ್ರಮುಖ ಘಟನೆಗಳಾಗಿವೆ. ನಾಗರಿಕ ನೋಂದಣಿಯನ್ನು ಪ್ರಮುಖ ಘಟನೆಗಳಾದ ಜನನ, ಮರಣ, ವಿವಾಹ, ಭ್ರೂಣ ಮರಣ ಮತ್ತು ವಿವಾಹ ವಿಚ್ಛೇದನೆಗಳು ಹಾಗೂ ಅಂಕಿ ಅಂಶಗಳ ಸಂಭವನೀಯತೆ ಹಾಗೂ ಗುಣಲಕ್ಷಣಗಳ ನಿರಂತರ, ಶಾಶ್ವತ ಮತ್ತು ಕಡ್ಡಾಯ ನೋಂದಣಿ ಎಂದು ಹೇಳಿದರಲ್ಲದೇ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರಿಗೆ ತರಬೇತಿ ನೀಡಿದರು. ಈ ಸಂದರ್ಭದಲ್ಲಿ ಅಪರ ಮುಖ್ಯ ಜನನ ಮತ್ತು ಮರಣ ನೋಂದಾಣಿ ಹಾಗೂ ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯದ ಜಂಟಿ ನಿರ್ದೆಶಕ ಡಾ. ವಿ.ಮುನಿರಾಜು, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಡಾ.ಎನ್.ಭಾಸ್ಕರ್, ಮುಖ್ಯ ಯೋಜನಾಧಿಕಾರಿ ವಿ.ಧನುರೇಣುಕ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಸಿ.ಎಲ್. ಶಿವಕುಮಾರ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಸಿಕೆಬಿ-3......ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದಲ್ಲಿ ನಡೆದ ಜನನ, ಮರಣ ನೋಂದಣಿ ಪದ್ದತಿ ಕುರಿತು ತರಬೇತಿ ಕಾರ್ಯಾಗಾರವನ್ನು ಅಪರ ಅಪರ ಜಿಲ್ಲಾಧಿಕಾರಿ ಡಾ.ಎನ್. ತಿಪೇಸ್ವಾಮಿ ಉದ್ಘಾಟಿಸಿದರು.