ಸಾರಾಂಶ
ಮಾಗಡಿ: ಪಟ್ಟಣದ ಐತಿಹಾಸಿಕ ತಿರುಮಲೆ ಶ್ರೀ ರಂಗನಾಥ ಸ್ವಾಮಿಗೆ ದೇವಸ್ಥಾನದ ಮೂಲ ಪ್ರಧಾನ ಆಗಮಿಕರು ಹಾಗೂ ಪ್ರಧಾನ ಅರ್ಚಕ ಕಲ್ಯಾಣಿ ವೆಂಕಟ ರಂಗಾಚಾರ್ ಕುಟುಂಬದಿಂದ 1.20 ಕೋಟಿ ಮೌಲ್ಯದ ಚಿನ್ನದ ಅಭಯ ಹಸ್ತ ಗದ ಹಸ್ತ ದೇವಸ್ಥಾನದ ಅರ್ಚಕರ ಕುಟುಂಬದಿಂದ ಸಮರ್ಪಣೆ ಮಾಡಲಾಯಿತು.
ಮಾಗಡಿ: ಪಟ್ಟಣದ ಐತಿಹಾಸಿಕ ತಿರುಮಲೆ ಶ್ರೀ ರಂಗನಾಥ ಸ್ವಾಮಿಗೆ ದೇವಸ್ಥಾನದ ಮೂಲ ಪ್ರಧಾನ ಆಗಮಿಕರು ಹಾಗೂ ಪ್ರಧಾನ ಅರ್ಚಕ ಕಲ್ಯಾಣಿ ವೆಂಕಟ ರಂಗಾಚಾರ್ ಕುಟುಂಬದಿಂದ 1.20 ಕೋಟಿ ಮೌಲ್ಯದ ಚಿನ್ನದ ಅಭಯ ಹಸ್ತ ಗದ ಹಸ್ತ ದೇವಸ್ಥಾನದ ಅರ್ಚಕರ ಕುಟುಂಬದಿಂದ ಸಮರ್ಪಣೆ ಮಾಡಲಾಯಿತು.
ಯದುಗಿರಿ ಯತಿರಾಜ ಮಠದ ಶ್ರೀ ಯದುಗಿರಿ ಯತಿರಾಜ ನಾರಾಯಣ ರಾಮರಾಜ ಜೀಯರ್ ಸ್ವಾಮೀಜಿ ಪೂಜಾ ಕೈಂಕರ್ಯದಲ್ಲಿ ಪಾಲ್ಗೊಂಡಿದ್ದರು. ಸಮರ್ಪಣೆಗೊ ಮುನ್ನ ವಿಶೇಷ ಹೋಮ ನೆರವೇರಿಸಿ ದೇವಸ್ಥಾನದ ಸುತ್ತಲೂ ಪ್ರದಕ್ಷಿಣೆ ಹಾಕಿ, ಶ್ರೀ ರಂಗನಾಥ ಸ್ವಾಮಿಗೆ ಚಿನ್ನಾಭರಣ ಸಮರ್ಪಿಸಲಾಯಿತು.ಕಾರ್ಯಕ್ರಮದಲ್ಲಿ ಮಾಜಿ ಸಚಿವ ಎಚ್.ಎಂ.ರೇವಣ್ಣ ಮಾತನಾಡಿ, ರಂಗನಾಥಸ್ವಾಮಿಗೆ ಅಮೂಲ್ಯವಾದ ಚಿನ್ನದ ಆಭರಣ ಸಮರ್ಪಿಸಿರುವ ದೇವಸ್ಥಾನದ ಮೂಲ ಅರ್ಚಕರ ಕುಟುಂಬಕ್ಕೆ ಒಳಿತಾಗಲಿ ಎಂದು ಹಾರೈಸಿದರು.
ಅರ್ಚಕರ ಮೊಮ್ಮಗ ಸಂತೋಷ್ ಅಯ್ಯಂಗಾರ್ ಮಾತನಾಡಿ, ಶ್ರೀರಂಗನ ಕೃಪೆಯಿಂದ ನಮ್ಮ ಕುಟುಂಬ ಚಿನ್ನಾಭರಣ ಸಮರ್ಪಿಸುವ ಮಟ್ಟಕ್ಕೆ ಬೆಳೆದಿದೆ. ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎಂಬ ನೀತಿಯಡಿ ಲೋಕಕಲ್ಯಾಣಾರ್ಥ ಶ್ರೀರಂಗನಿಗೆ ನಮ್ಮ ಕುಟುಂಬ ಅಭಯ ಹಸ್ತ ಗದ ಹಸ್ತ ಸಮರ್ಪಿಸಿದೆ ಎಂದು ತಿಳಿಸಿದರು.ಮಾಗಡಿ ಶ್ರೀರಂಗನಾಥ ಸ್ವಾಮಿಗೆ ಭಕ್ತರಿಂದ ಚಿನ್ನದ ಕಾಣಿಕೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಜರಾಯಿ ಇಲಾಖೆ ದೇವಸ್ಥಾನದ ಭದ್ರತೆಯನ್ನು ಹೆಚ್ಚಿಸಬೇಕಾಗಿದೆ. ಸಾಕಷ್ಟು ಬಾರಿ ದೇವಸ್ಥಾನದಲ್ಲಿ ಹುಂಡಿ ಕಳ್ಳತನವಾಗಿದೆ. ಈಗ ದೇವಸ್ಥಾನದ ಮೂಲ ವಿಗ್ರಹಕ್ಕೆ ಕೋಟ್ಯಂತರ ಬೆಲೆಬಾಳುವ ವಜ್ರ ಖಚಿತ ಚಿನ್ನದ ಕಿರೀಟ, ಚಿನ್ನದ ಅಭಯ ಹಸ್ತ ಗದ ಹಸ್ತ, ಚಿನ್ನದ ಪಾದಕ್ಕೆ ಸೇರಿದಂತೆ ಕೋಟ್ಯಂತರ ಬೆಲೆಬಾಳುವ ಆಭರಣಗಳಿಗೆ ಭದ್ರತೆ ಹೆಚ್ಚಿಸಬೇಕೆಂದು ಭಕ್ತರು ಮನವಿ ಮಾಡಿದ್ದಾರೆ.
ಚಿನ್ನಾಭರಣ ಸಮರ್ಪಣೆ ವೇಳೆ ದೇವಸ್ಥಾನದ ಅರ್ಚಕರದ ವೆಂಕಟೇಶ ಅಯ್ಯಂಗಾರ್, ಉದ್ಯಮಿ ಸತೀಶ್ ಹಾಗೂ ಕಲ್ಯಾಣಿ ವೆಂಕಟ ರಂಗಾಚಾರ್ ಕುಟುಂಬಸ್ಥರು ಭಾಗವಹಿಸಿದ್ದರು.ಪೋಟೋ 12ಮಾಗಡಿ4: ಮಾಗಡಿಯ ತಿರುಮಲೆ ಶ್ರೀ ರಂಗನಾಥ ಸ್ವಾಮಿಗೆ ಅರ್ಚಕರ ಕುಟುಂಬದಿಂದ ಚಿನ್ನದ ಅಭಯ ಹಸ್ತ ಹಾಗೂ ಗದ ಹಸ್ತವನ್ನು ಸಮರ್ಪಣೆ ಮಾಡಲಾಯಿತು.