ಸಾರಾಂಶ
- ಗುಣಮಟ್ಟದ ಭತ್ತವನ್ನು ಖರೀದಿ ಮಾಡದೆ ಅಧಿಕಾರಿಗಳ ನಿರ್ಲಕ್ಷ್ಯ
- ಸರ್ಕಾರಕ್ಕೆ ಅಪಾರ ನಷ್ಟ: ಆರೋಪಫೋಟೋ- 11ಎಂವೈಎಸ್ 59ಕನ್ನಡಪ್ರಭ ವಾರ್ತೆ ಕೆ.ಆರ್.ನಗರ
ಕಳೆದ ವರ್ಷ ಪಟ್ಟಣದ ಎಪಿಎಂಸಿ ಆವರಣದಲ್ಲಿ ತೆರೆಯಲಾಗಿದ್ದ ಭತ್ತ ಖರೀದಿ ಕೇಂದ್ರದಲ್ಲಿ ಗುಣಮಟ್ಟದ ಭತ್ತವನ್ನು ಖರೀದಿ ಮಾಡದೆ ಅಧಿಕಾರಿಗಳು ಕರ್ತವ್ಯ ಲೋಪವೆಸಗಿದ್ದು, ಇದರಿಂದ ಸರ್ಕಾರಕ್ಕೆ ಅಪಾರ ನಷ್ಟ ಉಂಟಾಗಿದೆ.ತಾಲೂಕಿನ ಹಂಪಾಪುರ ಶಾಂತಿನಾಥ ರೈಸ್ ಮೀಲ್ ಮಾಲೀಕರೂ ಆದ ಟಿಎಪಿಸಿಎಂಎಸ್ ನಿರ್ದೇಶಕ ಎಚ್.ಪಿ. ಪ್ರಶಾಂತ್ ಅವರಿಗೆ ಎರಡು ಲೋಡ್ ಭತ್ತವನ್ನು ಅಕ್ಕಿ ಮಾಡಲು ಕಳುಹಿಸಿದಾಗ ಕಳಪೆ ಕಂಡು ಬಂದ ಹಿನ್ನೆಲೆ ಅವರು ವಾಪಸ್ ಕಳುಹಿಸಿದ್ದಾರೆ.
ಈ ಹಿನ್ನೆಲೆ ಎಪಿಎಂಸಿ ಆವರಣದಲ್ಲಿರುವ ಕರ್ನಾಟಕ ರಾಜ್ಯ ಉಗ್ರಾಣ ನಿಗಮದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎಚ್.ಪಿ. ಪ್ರಶಾಂತ್ ಅಧಿಕಾರಿಗಳ ನಿರ್ಲಕ್ಷ್ಯದಿಂದ ಇಂತಹ ಲೋಪವಾಗಿದ್ದು, ಸರ್ಕಾರ ಈ ಬಗ್ಗೆ ಗಂಭೀರವಾಗಿ ಗಮನಹರಿಸಿ ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಇದರ ಜತೆಗೆ ನಮ್ಮ ರೈಸ್ ಮಿಲ್ ಗೆ ರಾಜ್ಯ ಉಗ್ರಾಣ ನಿಗಮದ ಗೋದಾಮಿನಲ್ಲಿರುವ ಭತ್ತವನ್ನು ಅಕ್ಕಿ ಮಾಡಲು ಕಳುಹಿಸುವಂತೆ ಸೂಚನೆ ಇದ್ದರು ಅಧಿಕಾರಿಗಳು ತಮ್ಮ ಬೇಜವಬ್ದಾರಿಯಿಂದ ಎಪಿಎಂಸಿ ಉಗ್ರಾಣದಿಂದ ಕಳುಹಿಸಿ ಬೇರೆ ರೈಸ್ ಮಿಲ್ ನವರು ಕಳಪೆ ಎಂದು ತಿರಸ್ಕರಿಸುವ ಭತ್ತವನ್ನು ನನ್ನಗೆ ಕಳುಹಿಸಿದ್ದು, ಪರಿಶೀಲನೆ ನಂತರ ಇದು ಸಾಬೀತಾಗಿದೆ ಎಂದು ಮಾಹಿತಿ ನೀಡಿದರು.
ಈ ಬಾರಿ ತೆರೆಯುವ ಭತ್ತ ಖರೀದಿ ಕೇಂದ್ರದಲ್ಲಿ ಗುಣಮಟ್ಟದ ಭತ್ತ ಖರೀದಿಸಲು ಪ್ರಾಮಾಣಿಕ ಅಧಿಕಾರಿಗಳನ್ನು ನೇಮಕ ಮಾಡಿ ಇಂತಹ ಅಕ್ರಮ ಮತ್ತು ಅವ್ಯವಹಾರಗಳನ್ನು ತಡೆಗಟ್ಟಬೇಕು ಎಂದು ಟಿಎಪಿಸಿಎಂಎಸ್ ನಿರ್ದೇಶಕರು ಸರ್ಕಾರವನ್ನು ಒತ್ತಾಯಿಸಿದ್ದಾರೆ.ಮತ್ತೋರ್ವ ನಿರ್ದೇಶಕ ರಾಮಕೃಷ್ಣೇಗೌಡ ಮಾತನಾಡಿ, ಖರೀದಿ ಕೇಂದ್ರ ತೆರೆದ ನಂತರ ಗೋದಾಮಿನಲ್ಲಿ ಸಂಗ್ರಹವಾಗುವ ಭತ್ತವನ್ನು ರೈಸ್ ಮಿಲ್ಗಳಿಗೆ ಅಕ್ಕಿ ಮಾಡಲು ಕಳುಹಿಸುವಾಗ ಯಾವುದೇ ನಿಯಮ ಪಾಲಿಸುವುದಿಲ್ಲ ಮತ್ತು ಇಲ್ಲಿನ ಏಜೆನ್ಸಿ ಮತ್ತು ಅಧಿಕಾರಿಗಳನ್ನು ಕೇಳುವವರೆ ಇಲ್ಲದಂತಾಗಿದ್ದು, ಜಿಲ್ಲಾಧಿಕಾರಿಗಳು ಗೋದಾಮಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ. ಕೋಟ್...
ಪಟ್ಟಣದ ಎಪಿಎಂಸಿ ಮತ್ತು ರಾಜ್ಯ ಉಗ್ರಾಣ ನಿಗಮದ ಗೋದಾಮಿನಲ್ಲಿ ಶೇಖರಿಸಿರುವ ಭತ್ತ ಕಳಪೆಯಾಗಿದೆ ಎಂದು ಟಿಎಪಿಸಿಎಂಎಸ್ ನಿರ್ದೇಶಕರು ದೂರಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಕನಿಷ್ಠ ಯೋಜನಾ ಬೆಂಬಲ ಬೆಲೆ ಇಲಾಖೆ ಪ್ರಧಾನ ವ್ಯವಸ್ಥಾಪಕ ನಿರ್ದೇಶಕರ ಗಮನಕ್ಕೆ ತಂದಿದ್ದು, ಅವರು ಮತ್ತು ನಾನು ಗೋದಾಮಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇವೆ.- ವಾಣಿಶ್ರೀ, ಜಿಲ್ಲಾ ವ್ಯವಸ್ಥಾಪಕರು, ಕನಿಷ್ಠ ಯೋಜನಾ ಬೆಂಬಲ ಬೆಲೆ ಇಲಾಖೆ
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))