ಉಡುಪಿ: ಮೊಗವೀರ ಯುವ ಸಂಘಟನೆಯ ಬ್ರಹ್ಮಾವರ ಘಟಕದ ವತಿಯಿಂದ ಹಾಗೂ ಗ್ರಾಮಪಂಚಾಯಿತಿ ಸಹಯೋಗದೊಂದಿಗೆ ಬೈಕಾಡಿ ಗಾಂಧಿನಗರದ ಸ್ಮಶಾನದ ಸುತ್ತಮುತ್ತ ಪರಿಸರದ ಸ್ವಚ್ಛತೆ ನಡೆಸಿ ವಿಶ್ವ ಪರಿಸರ ದಿನವನ್ನು ವಿಶಿಷ್ಟವಾಗಿ ಆಚರಿಸಲಾಯಿತು. ಇದೇ ಸಂದರ್ಭದಲ್ಲಿ ಫಲ ನೀಡುವ ಹಣ್ಣಿನ ಗಿಡಗಳನ್ನು ನೆಡಲಾಯಿತು. ಜಿಲ್ಲಾ ಘಟಕದ ಅಧ್ಯಕ್ಷರು ರವೀಶ್ ಕೊರವಡಿ ಹಾಗೂ ಕಾರ್ಯದರ್ಶಿ ಶೇಖರ್ ತೋಳಾರ್, ಗ್ರಾಪಂ ಉಪಾಧ್ಯಕ್ಷ ಕುಮಾರ್ ಸುವರ್ಣ, ಸಂಘಟನೆಯ ಮಾರ್ಗದರ್ಶಕ ಕಿಟ್ಟಪ್ಪ ಅಮೀನ್, ಮಾಜಿ ಜಿಲ್ಲಾ ಅಧ್ಯಕ್ಷ ರಾಜೇಂದ್ರ ಹಿರಿಯಡ್ಕ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬ್ರಹ್ಮಾವರ ಘಟಕದ ಅಧ್ಯಕ್ಷ ಮಹೇಶ್ ಕುಂದರ್, ಕಾರ್ಯದರ್ಶಿ ಜಸ್ವಂತ್ ಪ್ರದೀಪ್ ಪೇತ್ರಿ, ಬೈಕಾಡಿ ಮೊಗವೀರ ಗ್ರಾಮಸಭೆ ಅಧ್ಯಕ್ಷ ಭಾಸ್ಕರ್ ಕಾಂಚನ್, ಸ್ಥಳೀಯರಾದ ರಾಜೇಶ್ ತಿಂಗಳಾಯ, ಮೋಹನ್ ಹೊನ್ನಾಳ ಮಂಜುನಾಥ ಸುವರ್ಣ, ಅಶೋಕ್ ಹೊನ್ನಾಳ, ವಿಶ್ವನಾಥ್, ರತ್ನಾಕರ, ಸುಧಾಕರ್ ಮತ್ತಿತರರು ಇದ್ದರು.