ಸಾರಾಂಶ
ಪ್ರತಿಯೊಬ್ಬರು ಗಿಡಮರ ನೆಟ್ಟು ಹಸಿರನ್ನು ಉಳಿಸಿ ಬೆಳೆಸುವ ಮೂಲಕ ಪರಿಸರದ ಜಾಗೃತಿ ಮತ್ತು ರಕ್ಷಣೆ ಮಾಡುವುದು ಅತಿ ಅವಶ್ಯಕವಾಗಿದೆ ಎಂದು ಶಿರೂರ ಪ್ರಾಥಮಿಕ ಆರೋಗ್ಯ ಕೇಂದ್ರ ಆರೋಗ್ಯ ನಿರೀಕ್ಷಣಾಧಿಕಾರಿ ಕೆ.ಎಫ್. ಮಾಯಾಚಾರಿ ಹೇಳಿದರು.
ಕನ್ನಡಪ್ರಭ ವಾರ್ತೆ ಕಮತಗಿ
ಪ್ರತಿಯೊಬ್ಬರು ಗಿಡಮರ ನೆಟ್ಟು ಹಸಿರನ್ನು ಉಳಿಸಿ ಬೆಳೆಸುವ ಮೂಲಕ ಪರಿಸರದ ಜಾಗೃತಿ ಮತ್ತು ರಕ್ಷಣೆ ಮಾಡುವುದು ಅತಿ ಅವಶ್ಯಕವಾಗಿದೆ ಎಂದು ಶಿರೂರ ಪ್ರಾಥಮಿಕ ಆರೋಗ್ಯ ಕೇಂದ್ರ ಆರೋಗ್ಯ ನಿರೀಕ್ಷಣಾಧಿಕಾರಿ ಕೆ.ಎಫ್. ಮಾಯಾಚಾರಿ ಹೇಳಿದರು.ಸಮೀಪದ ನೀಲಾನಗದರದ ಅಂಗನವಾಡಿ ಕೇಂದ್ರದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಇಲಾಖೆ ಬಾಗಲಕೋಟೆ ಹಾಗೂ ಶಿರೂರ ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ವಿಶ್ವರ ಪರಿಸರ ದಿನಾಚರಣೆ ನಿಮತ್ತ ಸಸಿ ನೆಡುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಪ್ರಾಥಮಿಕ ಆರೋಗ್ಯ ಕೇಂದ್ರ ಸುರಕ್ಷಣಾಧಿಕಾರಿ ಎಸ್.ಎಸ್. ಮೆಣಸಗಿ, ಲಕ್ಷ್ಮೀಬಾಯಿ ಪೂಜಾರಿ, ಸೋನವ್ವ ಪೂಜಾರಿ, ಅಂಗನವಾಡಿ ಕಾರ್ಯಕರ್ತೆಯರಾದ ಕವಿತಾ ಕಟ್ಟಿಮನಿ, ಸರೋಜಾ ಜಾಧವ, ಈರಮ್ಮ ಕಟ್ಟಿಮನಿ, ಸಕೀಲಾ ದೊಡ್ಡಮನಿ, ಆಶಾ ಕಾರ್ಯಕರ್ತೆಯರಾದ ಸುಮಿತ್ರಾ ಪೂಜಾರಿ, ಸುಮಿತ್ರಾ ಲಮಾಣಿ, ಅನುಷಾ ಖಂಡೋಬಾ ಹಾಗೂ ಗ್ರಾಮ ಮಹಿಳೆಯರು, ಹಿರಿಯರು ಇದ್ದರು.