ಭಾರತದಲ್ಲಿ ಹಿಂದುಗಳು ಸಂಘಟನೆಯಾಗಿ ಒಗ್ಗಟ್ಟಿನಿಂದ ಗಟ್ಟಿಯಾಗಬೇಕು. ನಾವು ಹಿಂದುತ್ವವನ್ನು ಉಳಿಸಿಕೊಳ್ಳಲು ಆಚಾರ- ವಿಚಾರದಲ್ಲಿ ಹಾಗೂ ಮನೆಯಲ್ಲಿ ಸನಾತನ ಧರ್ಮದ ಹಿಂದುತ್ವದ ಬಗ್ಗೆ ಮಾತನಾಡಬೇಕು. ಇದರ ಬಗ್ಗೆ ಯುವಕರು ಹೆಚ್ಚು ಜನರಲ್ಲಿ ಜಾಗೃತಿ ಮೂಡಿಸಬೇಕು.
ಕನ್ನಡಪ್ರಭ ವಾರ್ತೆ ಮದ್ದೂರು
ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿರುವುದರಿಂದ ಆ ರಾಜ್ಯ ಸೇರಿ ಭಾರತದಲ್ಲಿರುವ ವಲಸಿಗ 5 ಕೋಟಿ ಮುಸ್ಲೀಮರನ್ನು ಕೇಂದ್ರ ಸರ್ಕಾರ ಕೂಡಲೇ ದೇಶದಿಂದ ಹೊರ ಹಾಕಬೇಕು ಎಂದು ಶ್ರೀರಾಮ ಸೇನಾ ಸಂಘಟನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆಗ್ರಹಿಸಿದರು.ಪಟ್ಟಣದ ಎಳನೀರು ಮಾರುಕಟ್ಟೆಯಲ್ಲಿ ಬೆಂಗಳೂರಿನಿಂದ ಮೈಸೂರು ಕಡೆಗೆ ಹೋಗುವಾಗ ಅಭಿಮಾನಿಗಳ ಒತ್ತಾಯಕ್ಕೆ ಇಳಿದು ಅಭಿನಂದನೆ ಸ್ವೀಕರಿಸಿದ ನಂತರ ಎಳನೀರನ್ನು ಸ್ವೀಕರಿಸಿ ಮಾತನಾಡಿ, ದೇಶದಲ್ಲಿ ಪಾಕಿಸ್ತಾನಿಗಳು, ಬಾಂಗ್ಲಾದೇಶಿಕರು ಸೇರಿ 5 ಕೋಟಿಗೂ ಹೆಚ್ಚು ಮಂದಿ ಭಾರತಕ್ಕೆ ಬಂದು ಸೇರಿಕೊಂಡಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿರುವುದರಿಂದ ತಕ್ಷಣದಲ್ಲಿ ಕೇಂದ್ರ ಸರ್ಕಾರ ಇವರನ್ನೆಲ್ಲ ಭಾರತದಿಂದ ಹೊರಗೆ ಕಳಿಸುವ ಕೆಲಸವನ್ನು ಮೊದಲು ಮಾಡುತ್ತದೆ ಎಂದರು.
ಭಾರತದಲ್ಲಿ ಹಿಂದುಗಳು ಸಂಘಟನೆಯಾಗಿ ಒಗ್ಗಟ್ಟಿನಿಂದ ಗಟ್ಟಿಯಾಗಬೇಕು. ನಾವು ಹಿಂದುತ್ವವನ್ನು ಉಳಿಸಿಕೊಳ್ಳಲು ಆಚಾರ- ವಿಚಾರದಲ್ಲಿ ಹಾಗೂ ಮನೆಯಲ್ಲಿ ಸನಾತನ ಧರ್ಮದ ಹಿಂದುತ್ವದ ಬಗ್ಗೆ ಮಾತನಾಡಬೇಕು. ಇದರ ಬಗ್ಗೆ ಯುವಕರು ಹೆಚ್ಚು ಜನರಲ್ಲಿ ಜಾಗೃತಿ ಮೂಡಿಸಬೇಕು, ಹಿಂದುತ್ವ ಉಳಿಸಿಕೊಳ್ಳಲು ಸದಾ ಹೋರಾಟ ಮಾಡಿದಾಗ ಮಾತ್ರ ಅದು ಸಾಧ್ಯವಾಗುತ್ತದೆ ಎಂದರು.ಗೋ ಹತ್ಯೆ ಹಾಗೂ ಗೋವುಗಳನ್ನು ಸಾಗಿಸುವ, ಖಸಾಯಿಖಾನೆಗಳಿಗೆ ಕಳಿಸುವುದನ್ನು ತಡೆಯುವುದು ಬಿಜೆಪಿ ಸರ್ಕಾರದಿಂದ ಮಾತ್ರ ಸಾಧ್ಯ. ಹಿಂದೂ ಸಂಘಟನೆಗಳು ಜಾಗೃತರಾಗಿ ಗೋಮಾತೆಯನ್ನು ಉಳಿಸಿಕೊಳ್ಳಲು ಮುಂದಾಗಬೇಕು ಎಂದರು.
ಈ ವೇಳೆ ಹಿಂದೂ ಸಂಘಟನೆ ಪ್ರಮುಖರಾದ ಕದಲೂರು ನವೀನ್, ಸುನಿಲ್, ವೀರಭದ್ರಸ್ವಾಮಿ, ಶಿವಣ್ಣ ಸೇರಿ ಹಲವರು ಉಪಸ್ಥಿತರಿದ್ದರು.-------------
4ಕೆಎಂಎನ್ ಡಿ21ಮದ್ದೂರು ಎಳನೀರು ಮಾರುಕಟ್ಟೆ ಬಳಿ ಅಭಿಮಾನಿಗಳ ಒತ್ತಾಯಕ್ಕೆ ಇಳಿದು ಹಿಂದೂ ಸಂಘಟನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅಭಿನಂದನೆ ಸ್ವೀಕರಿಸಿದರು.