ಹೋಟೆಲ್‌, ಅಂಗಡಿಗಳ ಮೇಲೆ ಆಹಾರ ಗುಣಮಟ್ಟ ಪರೀಕ್ಷಾ ತಂಡ ದಾಳಿ

| Published : Jun 28 2024, 12:58 AM IST

ಹೋಟೆಲ್‌, ಅಂಗಡಿಗಳ ಮೇಲೆ ಆಹಾರ ಗುಣಮಟ್ಟ ಪರೀಕ್ಷಾ ತಂಡ ದಾಳಿ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲಾ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಜಿಲ್ಲಾ ಪರಿಶೀಲನೆ ತಂಡ ಬಾಗಲಕೋಟೆ ನಗರದ ವಿವಿಧ ಹೋಟೆಲ್‌ ಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಜಿಲ್ಲಾ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಜಿಲ್ಲಾ ಪರಿಶೀಲನೆ ತಂಡ ಬುಧವಾರ ನಗರದ ವಿವಿಧ ಹೋಟೆಲ್‌ಗಳ ಮೇಲೆ ದಾಳಿ ನಡೆಸಿ, ಆಹಾರ ಪದಾರ್ಥ ತಯಾರಿ ವೇಳೆ ಸುರಕ್ಷತಾ ರಕ್ಷಾ ಕವಚಗಳನ್ನು ಧರಿಸರದ ಹೋಟೆಲ್ ಮತ್ತು ಬೇಕರಿ ಅಂಗಡಿ ಮಾಲೀಕರಿಗೆ ನೋಟಿಸ್ ನೀಡಿದರು.

ತಹಸೀಲ್ದಾರ್‌ ಮುಂದಾಳತ್ವದಲ್ಲಿ ಆರೋಗ್ಯ ಇಲಾಖೆ, ಕಾರ್ಮಿಕ ಇಲಾಖೆ, ನಗರಸಭೆ ಅಧಿಕಾರಿಗಳು ಜಂಟಿಯಾಗಿ ನಗರದ ಬೀದಿ ಬದಿ ಅಂಗಡಿಗಳು ಮತ್ತು ಹೋಟಲ್‌ಗಳ ಮೇಲೆ ದಾಳಿ ನಡೆಸಲಾಯಿತು. ಟೆಸ್ಟಿಂಗ್ ಪೌಡರ್‌ ಬಸಳದಂತೆ, ಆಹಾರ ಪರವಾನಗಿ ಪಡೆದಿರುವ ಬಗ್ಗೆ ಪರಿಶೀಲಿಸಲಾಯಿತು. ಕೆಲಸಗಾರರ ವೈದ್ಯಕೀಯ ಪ್ರಮಾಣ ಪತ್ರ, ಆಹಾರ ಸುರಕ್ಷತೆ ಮತ್ತು ಗುಣಮಟ್ಟವನ್ನು ತಂಡ ಪರಿಶೀಲಿಸಿತು. ಸ್ವಚ್ಛತೆಗೆ ಗಮನ ಹರಿಸದೆ ಇರುವ ಬಗ್ಗೆ ತಟ್ಟೆ ಮತ್ತು ಚಮಚೆಗಳನ್ನು ತೊಳೆದು ಬಿಸಿ ನೀರಿನಿಂದ ಸ್ವಚ್ಛಗೊಳಿಸಲು ಸೂಚಿಸಿದರು.

ಕಾರ್ಯಾಚರಣೆಯಲ್ಲಿ ತಹಸೀಲ್ದಾರ್ ಅಮರೇಶ ಪಮ್ಮಾರ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಜಿಲ್ಲಾ ಅಂಕಿತ ಅಧಿಕಾರಿ ಡಾ.ವಿಜಯ ಕಂಠಿ, ಶಿರಸ್ತೆದಾರ ಶ್ರೀಶೈಲ ಗಯ್ಯಾಳಿ, ಆಹಾರ ನಿರೀಕ್ಷಕ ಎ.ಡಿ. ಸಾರವಾಡ, ನಗರಸಭೆ ಅಧಿಕಾರಿ ಸತೀಶ ಚವಡಿ, ಜಿಲ್ಲಾ ಬಾಲ ಕಾರ್ಮಿಕ ಸಂಸ್ಥೆಯ ಯೋಜನಾ ನಿರ್ದೇಶಕ ಸುಧಾಕರ ಬಡಿಗೇರ, ಆರೋಗ್ಯ ಇಲಾಖೆಯ ನೀಲಕಂಠ ನೀಲನಾಯಕ, ತಾಲೂಕು ಆಹಾರ ಸುರಕ್ಷತಾ ಅಧಿಕಾರಿ ರಾಜಶೇಖರ ಸಾಳಗುಂದಿ ಹಾಗೂ ಶರಣು ರೇವಡಿ ಇದ್ದರು.