ಕನ್ನಡ ಸಾಹಿತ್ಯಕ್ಕೆ ಲಿಗಾಡೆಯವರ ಕೊಡುಗೆ ಅಪಾರ

| Published : Jun 28 2024, 12:57 AM IST

ಕನ್ನಡ ಸಾಹಿತ್ಯಕ್ಕೆ ಲಿಗಾಡೆಯವರ ಕೊಡುಗೆ ಅಪಾರ
Share this Article
  • FB
  • TW
  • Linkdin
  • Email

ಸಾರಾಂಶ

ಹೊಳಲ್ಕೆರೆಯ ಸರ್ಕಾರಿ ನೌಕರರ ಭವನಲ್ಲಿ ಜಯದೇವಿ ತಾಯಿ ಲಿಗಾಡೆ ಅವರ ಜಯಂತಿ ಆಚರಿಸಲಾಯಿತು.

ಕನ್ನಡಪ್ರಭ ವಾರ್ತೆ ಹೊಳಲ್ಕೆರೆ

ಕನ್ನಡ ಭಾಷೆ ಬಗ್ಗೆ ಅಪಾರ ಕಾಳಜಿ ಅಭಿಮಾನ ಹೊಂದಿದ್ದ ಜಯದೇವಿ ತಾಯಿ ಲಿಗಾಡೆ, ಕನ್ನಡದ ವಚನ ಸಾಹಿತ್ಯಕ್ಕೆ ಅವರ ಕೊಡುಗೆ ಅಪಾರ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಸ್‌ .ಶಿವಮೂತೀ ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಸರ್ಕಾರಿ ನೌಕರರ ಭವನದಲ್ಲಿ ಅಯೋಜಿಸಿದ್ದ ಜಯದೇವಿ ತಾಯಿ ಲಿಗಾಡೆಯವರ 112ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕರ್ನಾಟಕ ಏಕೀಕರಣ ಹೋರಾಟದಲ್ಲಿ ಪಾಲ್ಗೊಂಡ ಈಗಿನ ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯನ್ನು ಕರ್ನಾಟಕಕ್ಕೆ ಸೇರಿಸಬೇಕೆಂದು ಹೇಳಿದ ಧೀಮಂತ ಮಹಿಳೆ ಜಯದೇವಿ ತಾಯಿ ಲಿಗಾಡೆಯವರು. ಇವತ್ತು ಅಂತ ಮಹಾನ್ ಕನ್ನಡ ಪ್ರೇಮಿ ಹೋರಾಟಗಾರ್ತಿಗೆ ನಮ್ಮ ಕನ್ನಡ ಸಮಾಜ ಯಾವ ರೀತಿಯಿಂದ ಸ್ಪಂದಿಸುತ್ತಿದೆ ಎನ್ನುವುದೇ ದೊಡ್ಡ ಸೋಜಿಗವಾಗಿದೆ.

ಜಯದೇವಿತಾಯಿ ಲಿಗಾಡೆ ಮೂಲತ: ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯವರಾದ ಇವರು ಕನ್ನಡದೊಳಗೆ ಶರಣ ಬಸವಣ್ಣನವರ ದಾರಿಯಲ್ಲಿ ತಮ್ಮ ಬದುಕನ್ನು ಸವೆಸಿದ್ದಾರೆ. ಬಸವತಿ ಶರಣರ ಅನೇಕ ವಚನಗಳನ್ನು ಮರಾಠಿಕೆ ತರ್ಜುಮೆ ಮಾಡಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ ಎಂದರು.

ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಥಮ ಮಹಿಳಾ ಅಧ್ಯಕ್ಷರು ಎನ್ನುವ ಹಿರಿಮೆ ಅವರದು. ಕನ್ನಡ ನಾಡು ನುಡಿ ಬಗೆಗಿನ ಪ್ರೇಮ ಎಷ್ಟು ಎಂದರೆ ಕರ್ನಾಟಕದ ಏಕೀಕರಣದ ನಂತರ ಸೊಲ್ಲಾಪುರ ಕನ್ನಡ ನಾಡಿಗೆ ಸೇರದೆ ಇರುವುದಕ್ಕೆ ಮನನೊಂದು ತಮ್ಮ ಕೊನೆಗಾಲವನ್ನು ಕನ್ನಡದ ನೆಲದಲ್ಲಿಯೇ ಕಳೆಯಬೇಕು ಎನ್ನುವ ಇಚ್ಛೆಯೊಂದಿಗೆ ಶರಣರ ನಾಡಾದ ಬಸವಕಲ್ಯಾಣವನ್ನೇ ತಮ್ಮ ಸಾಹಿತ್ಯ ಹಾಗೂ ಹೋರಾಟದ ಕ್ಷೇತ್ರವನ್ನಾಗಿಸಿಕೊಂಡು 4 ಎಕರೆ ಜಮೀನು ಖರೀದಿಸಿ ಭಕ್ತಿ ಭವನ ಮನೆ ನಿರ್ಮಿಸಿ ವಾಸವಾಗಿದ್ದರು ಎಂದರು.

ಈ ಸಂದರ್ಭದಲ್ಲಿ ಹಿರಿಯ ಸಾಹಿತಿ ನಾಡೋಜ ಕಮಲ ಹಂಪನಾ ಅವರ ಅಗಲಿಕೆಗೆ ಸಾಹಿತ್ಯ ಪರಿಷತ್ತು ವತಿಯಿಂದ ಸಂತಾಪ ಸೂಚಿಸಲಾಯಿತು. ತಾಳ್ಯ ಹೋಬಳಿ ಕಸಾಪ ಘಟಕದ ಅಧ್ಯಕ್ಷ ಬಿ.ಜಿ.ಹಳ್ಳಿ ವೆಂಕಟೇಶ್, ಪ್ರಗತಿ ಗ್ರಾಮೀಣ ಬ್ಯಾಂಕಿನ ಪರಪ್ಪ, ಭೂಮಾಪನ ಪಾವಗಡ ಶಿವಣ್ಣ, ಆರ್.ಶಶಿಕುಮಾರ್, ಕುಮಾರಿ ನಿಶಾ, ಸರ್ಕಾರಿ ನೌಕರ ಮನರಂಜನ ಕೇಂದ್ರದ ಶ್ರೀನಿವಾಸ, ವಿವಿಧ ಸಂಘ ಸಂಸ್ಥೆಯ ಮಹಿಳಾ ಪ್ರತಿನಿಧಿಗಳು ಇದ್ದರು.