ಪೊನ್ನಾಚಿಯಲ್ಲಿ ಜಾನುವಾರುಗಳಿಗೆಚರ್ಮ ಗಂಟುರೋಗ ಮತ್ತೆ ಉಲ್ಬಣ

| Published : Jan 26 2024, 01:45 AM IST

ಪೊನ್ನಾಚಿಯಲ್ಲಿ ಜಾನುವಾರುಗಳಿಗೆಚರ್ಮ ಗಂಟುರೋಗ ಮತ್ತೆ ಉಲ್ಬಣ
Share this Article
  • FB
  • TW
  • Linkdin
  • Email

ಸಾರಾಂಶ

ಹನೂರುಚರ್ಮ ಗಂಟು ರೋಗದ ಭೀತಿಯಿಂದ ರೈತರು ಪುನಃ ಆತಂಕಕ್ಕೆ ಈಡಾಗಿರುವ ಘಟನೆ ಪೊನ್ನಾಚಿ ಗ್ರಾಪಂ ವ್ಯಾಪ್ತಿಯಲ್ಲಿ ನಡೆಯುತ್ತಿದೆ. ತಾಲೂಕಿನ ಪೊನ್ನಾಚಿ ಗ್ರಾಪಂ ವ್ಯಾಪ್ತಿಯ ಕಕ್ಕೆಹೊಲ, ಮರೂರು ಗ್ರಾಮದಲ್ಲಿ ಎರಡನೇ ಬಾರಿ ಚರ್ಮ ಗಂಟು ರೋಗ ಜಾನುವಾರುಗಳಲ್ಲಿ ಉಲ್ಬಣವಾಗುತ್ತಿದೆ.

ಕನ್ನಡಪ್ರಭ ವಾರ್ತೆ ಹನೂರುಚರ್ಮ ಗಂಟು ರೋಗದ ಭೀತಿಯಿಂದ ರೈತರು ಪುನಃ ಆತಂಕಕ್ಕೆ ಈಡಾಗಿರುವ ಘಟನೆ ಪೊನ್ನಾಚಿ ಗ್ರಾಪಂ ವ್ಯಾಪ್ತಿಯಲ್ಲಿ ನಡೆಯುತ್ತಿದೆ. ತಾಲೂಕಿನ ಪೊನ್ನಾಚಿ ಗ್ರಾಪಂ ವ್ಯಾಪ್ತಿಯ ಕಕ್ಕೆಹೊಲ, ಮರೂರು ಗ್ರಾಮದಲ್ಲಿ ಎರಡನೇ ಬಾರಿ ಚರ್ಮ ಗಂಟು ರೋಗ ಜಾನುವಾರುಗಳಲ್ಲಿ ಉಲ್ಬಣವಾಗುತ್ತಿದೆ.

ಈಗಾಗಲೇ ಪೊನ್ನಾಚಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಮ್ಮೆ ಚರ್ಮಗಂಟು ರೋಗ ಬಂದು ಜಾನುವಾರುಗಳು ಸಾವನ್ನಪ್ಪಿದ್ದು ಇದೀಗ ಮತ್ತೆ ಅದೇ ರೋಗ ಜಾನುವಾರುಗಳಿಗೆ ಕಾಣಿಸುಕೊಳ್ಳುತ್ತಿದೆ ಹೀಗಾಗಿ ರೈತರು ಆತಂಕಕ್ಕೆ ಈಡಾಗಿದ್ದಾರೆ ಈಗಾಗಲೇ ನಷ್ಟದಲ್ಲಿರುವ ರೈತರು ಮತ್ತೆ ಚಿಂತಾಕ್ರಾಂತರಾಗಿದ್ದಾರೆ. ಕಳೆದ ಬಾರಿ ಈ ಚರ್ಮಗಂಟು ರೋಗ ಕಾಣಿಸಿಕೊಂಡು ಈಗಷ್ಟೇ ಚೇತರಿಕೆ ಕಂಡಿದ್ದು ಅಷ್ಟರಲ್ಲಿ ಮತ್ತೆ ಜಾನುವಾರುಗಳಿಗೆ ಚರ್ಮ ಗಂಟುರೋಗ ಕಾಣಿಸುತ್ತಿದ್ದು ಗಾಯದ ಮೇಲೆ ಬರೆ ಎಳೆದಂತಿದೆ. ಆದಷ್ಟು ಬೇಗ ಚಿಕಿತ್ಸೆ ಸಿಗುವಂತಾಗಲಿ ಎನ್ನುತ್ತಿದ್ದಾರೆ ರೈತರು.ವೈದ್ಯಾಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಲಿ: ಜಾನುವಾರುಗಳಿಗೆ ಚರ್ಮ ಗಂಟು ರೋಗ ಕಾಣಿಸಿಕೊಂಡಿದ್ದು ಆದಷ್ಟು ಬೇಗ ಹರಡುವ ಮುನ್ನ ಚಿಕಿತ್ಸೆ ನೀಡಲು ಗ್ರಾಮಕ್ಕೆ ಪಶು ವೈದ್ಯಾಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ನಮ್ಮ ಜಾನುವಾರುಗಳನ್ನು ಉಳಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.