ಸಾರಾಂಶ
- 2,12,000 ಗಾಳಿಕೆರೆ , ನಾರಾಯಿಣಿ ತಳಿ ಸೇಲ್ । ಒಟ್ಟು 200 ರಾಸುಗಳು ಹರಾಜಿಗೆ । 1ಕೋಟಿ ಸರ್ಕಾರಕ್ಕೆ ಆದಾಯ ನಿರೀಕ್ಷೆ
ಕನ್ನಡಪ್ರಭ ವಾರ್ತೆ, ಬೀರೂರುಪಟ್ಟಣದ ಅಮೃತಮಹಲ್ ತಳಿ ಸಂವರ್ಧನ ಕೇಂದ್ರದಲ್ಲಿ ಬುಧವಾರ ರಾಸುಗಳ ಹರಾಜು ಪ್ರಕ್ರಿಯೆ ನಡೆಯಿತು.
ರಾಜ್ಯದ ಹಾವೇರಿ, ರಾಣಿಬೆನ್ನೂರು, ಶಿಕಾರಿಪುರ, ಚಿತ್ರದುರ್ಗ ಶಿವಮೊಗ್ಗ ಚಿಕ್ಕಮಗಳೂರು ಹಾಗೂ ಹಾಸನ ಮತ್ತಿತರ ಕಡಯಿಂದ ಆಗಮಿಸಿದ್ದ ನೂರಾರು ರೈತರು ಈ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಂಡರು.ಬೆಳಗಿನಿಂದ ಆರಂಭವಾದ ಈ ಹರಾಜು ಪ್ರಕ್ರಿಯೆಯಲ್ಲಿ ಅಜ್ಜಂಪುರ, ಲಿಂಗದಹಳ್ಳಿ ಬಾಸೂರು, ಚಿಕ್ಕಎಮಿಗನೂರು, ರಾಮಗಿರಿ, ಹಬ್ಬನಘಟ್ಟ, ಬಿಳುವಾಲ, ಬಿದರೆ ಕಾವಲು, ರಾಯಸಂದ್ರ ಈ 9 ಅಮೃತಮಹಲ್ ಕೇಂದ್ರಗಳಿಂದ ಇಲ್ಲಿಗೆ ಆಗಮಿಸಿದ್ದ ನೂರಾರು ರಾಸುಗಳನ್ನು ಕ್ರಮವಾಗಿ ವಿಂಗಡಿಸುವ ಮೂಲಕ ಹರಾಜು ಪ್ರಕ್ರಿಯೆಗೆ ಚಾಲನೆ ನೀಡಲಾಯಿತು.
ಅಜ್ಜಂಪುರ ಸಂವರ್ಧನ ಕೇಂದ್ರದಿಂದ ಬಂದಿದ್ದ ಎ-21/22 ಗಾಳಿಕೆರೆ ಮತ್ತು ನಾರಾಯಣಿ ಎಂಬ 2ವರ್ಷದ ರಾಸು 2,12,000 ಗರಿಷ್ಠ ಬೆಲೆಗೆ ಸೊರಬ ತಾಲೂಕಿನ ಯಲವಳ್ಳಿ ಗ್ರಾಮದ ರಾಮಚಂದ್ರಪ್ಪ ರವರಿಗೆ ಮಾರಾಟವಾಯಿತು.ಎಲ್19 ಮತ್ತು 15 ಎಂಬ ಬೀಜದ ಓಬಳಾದೇವಿ ಹೋರಿಕರು 1,52,000ಸಾವಿರಕ್ಕೆ ಸೊರಬ ತಾಲೂಕಿನ ಹಿರೇಚೌಟಿಯ ರಾಜುಗೌಡರು ಪಡೆದುಕೊಂಡರು. ಒಟ್ಟು ಈಬಾರಿ 200 ಹೋರಿ ಕರುಗಳು, 16 ಬೀಜದ ಹೋರಿ ಹಾಗೂ 4 ಎತ್ತುಗಳನ್ನು ಹರಾಜು ಮಾಡಲಾಯಿತು.
ಹರಾಜು ಪ್ರಕ್ರಿಯೆಯಲ್ಲಿ 450 ಜನ ರೈತರು ಪಾಲ್ಗೊಂಡು, ಒಟ್ಟು 200 ರಾಸುಗಳು ಬಿಕರಿಯಾಗಿದ್ದು 99,46000 ರು. ಈ ಹರಾಜು ಪ್ರಕ್ರಿಯೆಯಿಂದ ಅಮೃತ ಮಹಲ್ ತಳಿ ಸಂವರ್ಧನ ಕೆಂದ್ರಕ್ಕೆ ಸಂದಾಯವಾಯಿತು ಎಂದು ಕೇಂದ್ರದ ಡಾ.ಎ.ಬಿ.ಪ್ರಭಾಕರ್‌ತಿಳಿಸಿದರು.ಪತ್ರಿಕೆಯೊಂದಿಗೆ ಮಾತನಾಡಿದ ಬೆಂಗಳೂರಿನ ಪಶುವೈದ್ಯ ಇಲಾಖೆ ನಿರ್ದೇಶಕ ಪಿ.ಶ್ರೀನಿವಾಸ್ ಕಳೆದ ಬಾರಿ ಕೋವಿಡ್ ಸಂದರ್ಭದಲ್ಲಿ 3 ವರ್ಷದನ್ನು ಒಂದೇ ಬಾರಿ ಹರಾಜು ನಡೆಸಿದ್ದೆವು. ಅದರಲ್ಲಿ 406 ರಾಸುಗಳನ್ನು ಹರಾಜು ನಡೆಸಿದ್ದು ಅದರಲ್ಲಿ 2ಕೋಟಿ 6ಲಕ್ಷ ಆದಾಯ ಬಂತಿತ್ತು, ಈ ಬಾರಿ 200ರಾಸುಗಳನ್ನು ಹರಾಜು ನಡೆಸಲಾಗಿದ್ದು ಇದರಲ್ಲಿ 90ಲಕ್ಷದಿಂದ 1ಕೋಟಿ ವರೆಗೂ ಆದಾಯ ಬರುವ ನಿರೀಕ್ಷೆ ಇದೆ.
ರೈತರು ಅಮೃತ್ ಮಹಲ್ ತಳಿಗಳ ಬಗ್ಗೆ ಹೆಚ್ಚು ಆಸಕ್ತಿ ಹೊಂದಿ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುತ್ತಿರುವುದು 512 ವರ್ಷ ಗಳ ಇತಿಹಾಸವಿರುವ ಈ ತಳಿ ಅಭಿವೃದ್ಧಿಗೆ ಇನ್ನಷ್ಟು ಉತ್ತೇಜನ ದೊರಕ್ಕುತ್ತಿದೆ. ಜೊತೆಗೆ ಅಮೃತ್ ಮಹಲ್ ದೇಶಿಯ ತಳಿಗಳನ್ನು ಉತ್ತಮವಾಗಿ ಸಾಕಣೆ ಮಾಡಿರುವ ಪರಿಣಾಮ ರಾಷ್ಟ್ರದಲ್ಲೇ ಉತ್ತಮ ತಳಿ ಎಂದು ಈಬಾರಿ ಪ್ರಥಮ ಪ್ರಶಸ್ತಿ ಗಳಿಸಿರುವುದು ಹೆಮ್ಮೆಯ ಸಂಗತಿ ಎಂದು ತಿಳಿಸಿದರು.ರೈತರು ಈ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಹೆಚ್ಚಿನ ದರಗಳಿಗೆ ತಮ್ಮ ನೆಚ್ಚಿನ ರಾಸುಗಳನ್ನು ಖರೀದಿಸುವ ಮೂಲಕ ಈ ತಳಿ ಮಹತ್ವ ಹಾಗೂ ಕೃಷಿ ಚಟುವಟಿಕೆಯಲ್ಲಿ ಈ ತಳಿ ನೀಡುವ ಹೆಚ್ಚಿನ ಸಹಕಾರದ ಬಗ್ಗೆ ಅಭಿಪ್ರಾಯ ತಿಳಿಸಿದರು.ಹರಾಜು ಪ್ರಕ್ರಿಯೆಯಲ್ಲಿ ಜಂಟಿ ನಿರ್ದೇಶಕ ಕೃಷ್ಣಪ್ಪ, ಸಹಾಯಕ ಅಧಿಕಾರಿ ಡಾ.ರಾಘವೇಂದ್ರ, ಕ್ಷೇತ್ರದ ಅಧಿಕಾರಿ ಡಾ.ಪ್ರಭಾಕರ್, ರಾಜ್ಯ ವಲಯ ಜಂಟಿ ನಿರ್ದೇಶಕ ಡಾ.ವೀರಭದ್ರಯ್ಯ, ಚಿಕ್ಕಮಗಳೂರು ಜಿಲ್ಲೆಯ ಡಾ.ಮೋಹನ್, ಕಡೂರು ತಾಲೂಕು ಸಹಾಯಕ ನಿರ್ದೇಶಕ ಎಸ್.ಬಿ.ಉಮೇಶ್, ಅಜ್ಜಂಪುರ-ಕಡೂರು ತಾಲೂಕಿನ ಪಶು ವೈದ್ಯಾಧಿಕಾರಿಗಳು ಭಾಗವಹಿಸಿದ್ದರು.
ಬೆಂಗಳೂರಿನ ಪಶುಪಾಲನ ಮತ್ತು ಪಶುವೈದ್ಯ ಸೇವ ಇಲಾಖೆ ಪ್ರಧಾನ ಕಾರ್ಯದರ್ಶಿ ತುಳಸಿ ಮದ್ದಿನೇನಿ ಹರಾಜು ಪ್ರಕ್ರಿಯೆಗೆ ಚಾಲನೆ ನೀಡಿದರು. ಮುಂದಿನ ದಿನಗಳಲ್ಲಿ ಪಶು ಇಲಾಖೆ ಉನ್ನತೀಕರಣದ ಬಗ್ಗೆ ಸರ್ಕಾರದ ಗಮನಕ್ಕೆ ತಂದು ಇನ್ನು ಹೆಚ್ಚಿನ ಸೌಲಭ್ಯ ನೀಡುವುದಾಗಿ ತಿಳಿಸಿದರು.24ಬೀರೂರು1
ಬೀರೂರಿನ ಅಮೃತಮಹಲ್ ತಳಿ ಸಂವರ್ಧನ ಕೇಂದ್ರದಲ್ಲಿ ಬುಧವಾರ 9 ಕೇಂದ್ರಗಳ ಅಮೃತಮಹಲ್ ತಳಿಯ ರಾಸುಗಳ ಹರಾಜು ಪ್ರಕ್ರಿಯೆ ನಡೆಯಿತು. ಉತ್ಸಾಹದಲ್ಲಿ ಪಾಲ್ಗೊಂಡಿದ್ದ ರೈತ ಸಮೂಹದ .