ಸಮಾಜದ ಏಳ್ಗೆಗಾಗಿ ವಿ.ಎಸ್. ಧನಂಜಯಕುಮಾರ್‌ ತಂಡ ಗೆಲ್ಲಿಸಿ: ರಾಜಶೇಖರ್

| Published : Jul 17 2024, 12:46 AM IST

ಸಮಾಜದ ಏಳ್ಗೆಗಾಗಿ ವಿ.ಎಸ್. ಧನಂಜಯಕುಮಾರ್‌ ತಂಡ ಗೆಲ್ಲಿಸಿ: ರಾಜಶೇಖರ್
Share this Article
  • FB
  • TW
  • Linkdin
  • Email

ಸಾರಾಂಶ

ವಿ.ಎಸ್.ಧನಂಜಯಕುಮಾರ್‌ ಅಧ್ಯಕ್ಷ ಸ್ಥಾನ ಅವಧಿಯಲ್ಲಿ ಸಾಕಷ್ಟು ಜನಪರ ಕೆಲಸ ಮಾಡಿದ್ದಾರೆ. ಮತ್ತೊಮ್ಮೆತಾಲೂಕು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದಾರೆ. ಕೋವಿಡ್ ವೇಳೆ ಆಹಾರಕಿಟ್, ಔಷಧಿಕಿಟ್ ನೀಡಿದ್ದಾರೆ. ಸಮಾಜದ ಮಕ್ಕಳಿಗೆ ಶಿಕ್ಷಣಕ್ಕಾಗಿ ಆರ್ಥಿಕ ನೆರವು, ದುರ್ಬಲರಿಗೆ ಸಹಾಯ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಕಿಕ್ಕೇರಿ

ವೀರಶೈವ ಸಮಾಜದ ಏಳ್ಗೆಗಾಗಿ ವಿ.ಎಸ್.ಧನಂಜಯಕುಮಾರ ತಂಡವನ್ನು ಗೆಲ್ಲಿಸುವಂತೆ ನಿರ್ದೇಶಕ ಸ್ಥಾನದ ಅಭ್ಯರ್ಥಿ ರಾಜಶೇಖರ್ ಮನವಿ ಮಾಡಿದರು.

ಹೋಬಳಿಯ ಗೋವಿಂದನಹಳ್ಳಿಯಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ತಾಲೂ ಘಟಕದ ನಿರ್ದೇಶಕರ ಚುನಾವಣೆಗಾಗಿ ವಿ.ಎಸ್.ಧನಂಜಯಕುಮಾರ್‌ ತಂಡ ಹೋಬಳಿಯ ಕೆಂಪಿಕೊಪ್ಪಲು, ಗೋವಿಂದನಹಳ್ಳಿ, ಗೋವಿಂದನಹಳ್ಳಿ ಕೊಪ್ಪಲು, ಜಯಪುರ ಮತ್ತಿತರ ಗ್ರಾಮಗಳಲ್ಲಿ ಮಂಗಳವಾರ ಮನೆ ಮನೆಗೆ ತೆರಳಿ ಬಿರುಸಿನ ಮತಯಾಚನೆ ನಡೆಸಿದರು.

ಈ ವೇಳೆ ಮಾತನಾಡಿದ ರಾಜಶೇಖರ್, ವಿ.ಎಸ್. ಧನಂಜಯಕುಮಾರ್ ಸಮಾಜಮುಖಿ ಸೇವೆ ಸಹಿಸದೆ ಹಲವರು ಅಪಪ್ರಚಾರ ಮಾಡುತ್ತಿದ್ದಾರೆ. ವದಂತಿಗೆ ಕಿವಿಗೊಡಬಾರದು. ಸಮಾಜದ ಅಭಿವೃದ್ಧಿಗಾಗಿ ನಮ್ಮ ತಂಡ ಶ್ರಮಿಸಲು ಬದ್ಧವಿದೆ ಎಂದರು.

ವಿ.ಎಸ್.ಧನಂಜಯಕುಮಾರ್‌ ಅಧ್ಯಕ್ಷ ಸ್ಥಾನ ಅವಧಿಯಲ್ಲಿ ಸಾಕಷ್ಟು ಜನಪರ ಕೆಲಸ ಮಾಡಿದ್ದಾರೆ. ಮತ್ತೊಮ್ಮೆತಾಲೂಕು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದಾರೆ. ಕೋವಿಡ್ ವೇಳೆ ಆಹಾರಕಿಟ್, ಔಷಧಿಕಿಟ್ ನೀಡಿದ್ದಾರೆ. ಸಮಾಜದ ಮಕ್ಕಳಿಗೆ ಶಿಕ್ಷಣಕ್ಕಾಗಿ ಆರ್ಥಿಕ ನೆರವು, ದುರ್ಬಲರಿಗೆ ಸಹಾಯ ಮಾಡಿದ್ದಾರೆ ಎಂದರು.

ಜುಲೈ 21 ರಂದು ನಡೆಯುವ ಚುನಾವಣೆಯಲ್ಲಿ ಧನಂಜಯ್ ಕುಮಾರ್ ನೇತೃತ್ವದಲ್ಲಿ ಸ್ಪರ್ಧಿಸಿರುವ ತಂಡದ ಸದಸ್ಯರಿಗೆ ಮತ ನೀಡಿ ಮತ್ತಷ್ಟು ಸಮಾಜದ ಏಳ್ಗೆ, ಸಮುದಾಯ ಭವನ, ವಿದ್ಯಾರ್ಥಿ ನಿಲಯ ನಿರ್ಮಾಣಕ್ಕೆ ಶ್ರಮಿಸಲಾಗುವುದು ಎಂದರು.

ಈ ವೇಳೆ ತಾಲೂಕು ಅಧ್ಯಕ್ಷ ಸ್ಥಾನದ ಅಭ್ಯರ್ಥಿ ವಕೀಲ ವಿ.ಎಸ್.ಧನಂಜಯಕುಮಾರ್, ಜಿಲ್ಲಾ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ತಾಳಶಾಸನ ಆನಂದ, ನಿರ್ದೇಶಕ ಸ್ಥಾನದ ಅಭ್ಯರ್ಥಿ ಬಸವಲಿಂಗಪ್ಪ, ಉಮೇಶ್, ಕುಮಾರ್, ದೊಡ್ಡರಾಮಪ್ಪ, ಕುಮಾರ್, ನಿಂಗರಾಜಪ್ಪ, ಮಹದೇವಪ್ಪ, ರೇವಣ್ಣ, ವೀರಭದ್ರಪ್ಪ, ಶಿವಪ್ಪ, ಡಿ.ಎ. ಶಿವಪ್ಪ, ಶಿವಮೂರ್ತಿ, ಸೋಮಪ್ಪ, ಪವಿತ್ರ, ಮಂಜುಳಾ, ಮೀನಾಕ್ಷಿ, ಲೀಲಾವತಿ, ಯಶೋಧ, ರಾಜಮಣಿ, ಮುಖಂಡಅಶೋಕ್, ಡೈರಿ ಮಹೇಶ್, ಕೇಬಲ್ ಗುಂಡ, ಪ್ರಕಾಶ್, ಕುಮಾರ್, ಮಹದೇವು ಭಾಗವಹಿಸಿದ್ದರು.