ಸಾಲಕ್ಕೆ ಹೆದರಿ ಕುಟುಂಬದ4 ಮಂದಿ ಆತ್ಯಹತ್ಯೆ ಪ್ರಯತ್ನ

| Published : Nov 01 2025, 02:00 AM IST

ಸಾಲಕ್ಕೆ ಹೆದರಿ ಕುಟುಂಬದ4 ಮಂದಿ ಆತ್ಯಹತ್ಯೆ ಪ್ರಯತ್ನ
Share this Article
  • FB
  • TW
  • Linkdin
  • Email

ಸಾರಾಂಶ

ಆರ್ಥಿಕ ಸಂಕಷ್ಟ ಹಾಗೂ ಸಾಲಗಾರರು ಬೆನ್ನತ್ತಿದ ಕಾರಣಕ್ಕೆ ಕುಟುಂಬವೊಂದು ಆತ್ಮಹತ್ಯೆಗೆ ಯತ್ನಿಸಿದ್ದು, ತಂದೆ ಹಾಗೂ ಮಗ ಮೃತಪಟ್ಟರೆ, ಅದೃಷ್ಟವಶಾತ್ ತಾಯಿ ಮತ್ತೊಬ್ಬ ಮಗ ಪ್ರಾಣಪಾಯದಿಂದ ಪಾರಾಗಿರುವ ಘಟನೆ ನಗರ ಹೊರವಲಯದಲ್ಲಿ ನಡೆದಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಆರ್ಥಿಕ ಸಂಕಷ್ಟ ಹಾಗೂ ಸಾಲಗಾರರು ಬೆನ್ನತ್ತಿದ ಕಾರಣಕ್ಕೆ ಕುಟುಂಬವೊಂದು ಆತ್ಮಹತ್ಯೆಗೆ ಯತ್ನಿಸಿದ್ದು, ತಂದೆ ಹಾಗೂ ಮಗ ಮೃತಪಟ್ಟರೆ, ಅದೃಷ್ಟವಶಾತ್ ತಾಯಿ ಮತ್ತೊಬ್ಬ ಮಗ ಪ್ರಾಣಪಾಯದಿಂದ ಪಾರಾಗಿರುವ ಘಟನೆ ನಗರ ಹೊರವಲಯದಲ್ಲಿ ನಡೆದಿದೆ.

ಹೆಗ್ಗನಹಳ್ಳಿ ನಿವಾಸಿಗಳಾದ ಕುಮಾರ್‌ (60) ಹಾಗೂ ಅವರ ಹಿರಿಯ ಪುತ್ರ ಅರುಣ್ ಕುಮಾರ್ (35) ಮೃತ ದುರ್ದೈವಿಗಳು. ಘಟನೆಯಲ್ಲಿ ಮೃತರ ಪತ್ನಿ ರಮಾ ಹಾಗೂ ಅವರ ಕಿರಿಯ ಪುತ್ರ ಅಕ್ಷಯ್ ಪ್ರಾಣಪಾಯದಿಂದ ಪಾರಾಗಿದ್ದಾರೆ. ಮನೆಯಲ್ಲಿ ಗುರುವಾರ ರಾತ್ರಿ ವಿಷ ಸೇವಿಸಿ ನಾಲ್ವರು ಆತ್ಮಹತ್ಯೆ ಯತ್ನಿಸಿದ್ದಾರೆ. ಆಗ ಮನೆಯಿಂದ ನರಳಾಟದ ಶಬ್ದ ಕೇಳಿ ಅವರ ಮನೆಗೆ ಸಂಶಯಗೊಂಡು ನೆರೆಮನೆಯವರು ತೆರಳಿದ್ದಾರೆ. ಆ ವೇಳೆ ವಿಷ ಪ್ರಾಶನದಿಂದ ನಿತ್ರಾಣರಾಗಿದ್ದ ನಾಲ್ವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಿಸದೆ ಕುಮಾರ್ ಹಾಗೂ ಅರುಣ್ ಕೊನೆಯುಸಿರೆಳೆದಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ ತಾಯಿ ಮತ್ತು ಕಿರಿಯ ಮಗ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ರಿಯಲ್ ಎಸ್ಟೇಟ್ ನಷ್ಟ:

ಕುಮಾರ್ ಅವರು ಪುರೋಹಿತರಾಗಿದ್ದರೆ, ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಅವರ ಮಕ್ಕಳಾದ ಅರುಣ್ ಮತ್ತು ಅಕ್ಷಯ್ ತೊಡಗಿದ್ದರು. ಆದರೆ ಈ ಭೂ ವ್ಯವಹಾರದಲ್ಲಿ ಅವರಿಗೆ ನಷ್ಟವಾಗಿ ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿದ್ದರು. ಕೆಲ ಸಾಲಗಾರರು ಬೆನ್ನತ್ತಿದ್ದರು. ಇದರಿಂದ ಬೇಸರಗೊಂಡು ಕುಮಾರ್ ಕುಟುಂಬ ಆತ್ಮಹತ್ಯೆಗೆ ನಿರ್ಧರಿಸಿದೆ. ಗುರುವಾರ ರಾತ್ರಿ ನಾಲ್ವರು ಒಟ್ಟಿಗೆ ವಿಷ ಸೇವಿಸಿದ್ದಾರೆ. ಆದರೆ ವಿಷ ಪ್ರಾಶನದ ಬಳಿಕ ನೇಣು ಬಿಗಿದುಕೊಂಡು ಅರುಣ್ ಆತ್ಮಹತ್ಯೆ ಶರಣಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.