ಸರ್ಕಾರ ನೀಡುತ್ತಿರುವ ಉತ್ತಮ ಶಿಕ್ಷಣ ಪಡೆದುಕೊಳ್ಳಿ: ದೊಡ್ಡಸ್ವಾಮಿಗೌಡ

| Published : Feb 10 2024, 01:48 AM IST

ಸರ್ಕಾರ ನೀಡುತ್ತಿರುವ ಉತ್ತಮ ಶಿಕ್ಷಣ ಪಡೆದುಕೊಳ್ಳಿ: ದೊಡ್ಡಸ್ವಾಮಿಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಶಾಲೆಯಲ್ಲಿ ಮಕ್ಕಳಿಗೆ ಶಿಕ್ಷಣ ನೀಡಿ ವರ್ಗಾವಣೆಗೊಂಡ ಶಿಕ್ಷಕರನ್ನು ಮರೆತು ಬಿಡುವ ಈ ದಿನಗಳಲ್ಲಿ ಅಂತಹ ಶಿಕ್ಷಕರನ್ನು ಶಾಲೆಗೆ ಕರೆಸಿ ಅವರನ್ನು ಗೌರವಿಸುವ ಕೆಲಸ ಮಾಡಿ, ಅವರಿಗೆ ಈ ಕ್ಷೇತ್ರದಲ್ಲಿ ಗೌರವ ಮತ್ತು ಜವಾಬ್ದಾರಿ ಹೆಚ್ಚುಸುವ ಕೆಲಸವನ್ನು ಶಾಲೆಯ ಆಡಳಿತ ಮಂಡಳಿ ಜೊತೆಗೆ ಗ್ರಾಮಸ್ಥರು ಮಾಡಿರುವುದನ್ನು ಅವರು ಶ್ಲಾಘಿನೀಯ.

ಕನ್ನಡಪ್ರಭ ವಾರ್ತೆ ಸಾಲಿಗ್ರಾಮ

ಸರ್ಕಾರ ಗ್ರಾಮಾಂತರ ಮಕ್ಕಳಿಗೆ ಬಿಸಿ ಊಟ ಮತ್ತು ಉಚಿತ ಸಮವಸ್ತ್ರ ನೀಡುವುದರ ಜೊತೆಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ಶ್ರಮಿಸುತ್ತಿದ್ದು, ಇದನ್ನು ಸದ್ಬಳಕೆ ಮಾಡಿಕೊಂಡು ಉತ್ತಮ ಶಿಕ್ಷಣ ಪಡೆದುಕೊಳ್ಳಿ ಎಂದು ಮಕ್ಕಳಿಗೆ ಕೆಪಿಸಿಸಿ ಕಾರ್ಯಕಾರಿಣಿ ಸದಸ್ಯ ದೊಡ್ಡಸ್ವಾಮಿಗೌಡ ಹೇಳಿದರು.

ಸಾಲಿಗ್ರಾಮ ತಾಲೂಕಿನ ಸಾಲುಕೊಪ್ಪಲು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಾಲಾ ವಾರ್ಷಿಕೋತ್ಸವ ಮತ್ತು ಶಾರದ ಪೂಜಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸರ್ಕಾರಿ ಶಾಲೆಯಲ್ಲಿ ಓದಿದರೇ ಸಾಲದು ಓದಿ ಉನ್ನತ ಸ್ಥಾನಕ್ಕೆ ಹೋದಾಗ ತಾವು ಓದಿದ ಶಾಲೆಗಳನ್ನು ಮರೆಯದೇ ಶಾಲೆಗಳ ಅಭಿವೃದ್ಧಿಗೆ ಕೊಡುಗೆ ನೀಡಿದಾಗ ಶಾಲೆಗಳು ಉನ್ನತವಾಗಿ ಅಭಿವೃದ್ಧಿ ಹೊಂದುತ್ತವೆ ಎಂದರು.

ಶಾಲೆಯಲ್ಲಿ ಮಕ್ಕಳಿಗೆ ಶಿಕ್ಷಣ ನೀಡಿ ವರ್ಗಾವಣೆಗೊಂಡ ಶಿಕ್ಷಕರನ್ನು ಮರೆತು ಬಿಡುವ ಈ ದಿನಗಳಲ್ಲಿ ಅಂತಹ ಶಿಕ್ಷಕರನ್ನು ಶಾಲೆಗೆ ಕರೆಸಿ ಅವರನ್ನು ಗೌರವಿಸುವ ಕೆಲಸ ಮಾಡಿ, ಅವರಿಗೆ ಈ ಕ್ಷೇತ್ರದಲ್ಲಿ ಗೌರವ ಮತ್ತು ಜವಾಬ್ದಾರಿ ಹೆಚ್ಚುಸುವ ಕೆಲಸವನ್ನು ಶಾಲೆಯ ಆಡಳಿತ ಮಂಡಳಿ ಜೊತೆಗೆ ಗ್ರಾಮಸ್ಥರು ಮಾಡಿರುವುದನ್ನು ಅವರು ಶ್ಲಾಘಿಸಿದರು.

ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿದ ಶಿಕ್ಷಕರಾದ ರಾಜಣ್ಣ, ವೆಂಕಟೇಗೌಡ, ಗೀತಾ, ರಘುನಾಥ್, ರಘು, ಸುಬ್ಬೇಗೌಡ, ಸಿ.ಆರ್.ಪಿ.ಮಹೇಶ್ ಮಾತನಾಡಿದರು.

ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಹರೀಶ್, ತಾಪಂ ಮಾಜಿ ಸದಸ್ಯ ಚಂದ್ರಶೇಖರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉದಯ್, ಕಾಂಗ್ರೆಸ್ ಮುಖಂಡ ಸಾಲಿಗ್ರಾಮ ಪ್ರಭಾಕರ್, ಗ್ರಾಪಂ ಸದಸ್ಯ ರಂಗಸ್ವಾಮಿ, ಕುಮಾರ್, ಉಪಾಧ್ಯಕ್ಷೆ ಕಾಂತಮಣಿ, ಸದಸ್ಯರಾದ ಸ್ವಾಮೀಗೌಡ, ಚಂದ್ರೇಗೌಡ, ಸಂಜೀವ್, ಪ್ರಕಾಶ್, ಮುಖ್ಯಶಿಕ್ಷಕಿ ಕೆ. ಜಯಂತಿ, ಶಿಕ್ಷಕರಾದ ಎಸ್.ಕೆ. ಕಿಶೋರ್ ಇದ್ದರು.