ಮಾಜಿ ದೇವದಾಸಿಯರ ನೋವುಗಳಿಗೆ ಧ್ವನಿಯಾಗುವೆ: ಡಾ. ಶ್ರೀನಿವಾಸ್

| Published : Sep 19 2025, 01:01 AM IST

ಮಾಜಿ ದೇವದಾಸಿಯರ ನೋವುಗಳಿಗೆ ಧ್ವನಿಯಾಗುವೆ: ಡಾ. ಶ್ರೀನಿವಾಸ್
Share this Article
  • FB
  • TW
  • Linkdin
  • Email

ಸಾರಾಂಶ

ಬಡತನ, ಆರ್ಥಿಕ ಹಿಂದುಳಿಯುವಿಕೆ, ಶಿಕ್ಷಣ ಕೊರತೆಯಿಂದಾಗಿ ನಮ್ಮ ನಾಡಿನ ತಾಯಂದಿರು ಯಾರದೊ ತಪ್ಪಿಂದ ದೇವದಾಸಿಯರಾಗುವ ದುಸ್ಥಿತಿ ಬಂದಿದ್ದು ಮಾಜಿ ದೇವದಾಸಿಯರ ಬದುಕಿನ ಕಷ್ಟ, ನೋವುಗಳಿಗೆ ನಾನು ಧ್ವನಿಯಾಗುವ ಕೆಲಸ ಮಾಡುವೆ.

ಮಾಜಿ ದೇವದಾಸಿಯರ ಪುನರ್ ಸರ್ವೇಗೆ ಶಾಸಕ ಡಾ. ಎನ್.ಟಿ. ಶ್ರೀನಿವಾಸ್ ಚಾಲನೆಕನ್ನಡಪ್ರಭ ವಾರ್ತೆ ಕೂಡ್ಲಿಗಿ

ಬಡತನ, ಆರ್ಥಿಕ ಹಿಂದುಳಿಯುವಿಕೆ, ಶಿಕ್ಷಣ ಕೊರತೆಯಿಂದಾಗಿ ನಮ್ಮ ನಾಡಿನ ತಾಯಂದಿರು ಯಾರದೊ ತಪ್ಪಿಂದ ದೇವದಾಸಿಯರಾಗುವ ದುಸ್ಥಿತಿ ಬಂದಿದ್ದು ಮಾಜಿ ದೇವದಾಸಿಯರ ಬದುಕಿನ ಕಷ್ಟ, ನೋವುಗಳಿಗೆ ನಾನು ಧ್ವನಿಯಾಗುವ ಕೆಲಸ ಮಾಡುವೆ ಎಂದು ಶಾಸಕ ಡಾ. ಎನ್.ಟಿ. ಶ್ರೀನಿವಾಸ್ ಹೇಳಿದರು.

ಪಟ್ಟಣದ ಪ್ರವಾಸಿಮಂದಿರದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಯೋಜಿಸಿದ್ದ ಮಾಜಿ ದೇವದಾಸಿಯರ ಪುನರ್ ಸರ್ವೇ ಹಾಗೂ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಅಭಿವೃದ್ಧಿಯ ಸರ್ವೇ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಂತರ ಮಾತನಾಡಿದರು.

ದೇವದಾಸಿ ಪದ್ಧತಿ ನಮ್ಮ ಸಮಾಜಕ್ಕೆ ಅಂಟಿದ ಜಾಡ್ಯವಾಗಿದ್ದು, ಇದನ್ನು ಶಿಕ್ಷಣ, ಆರ್ಥಿಕ ಸಬಲೀಕರಣದ ಮೂಲಕ ಹೋಗಲಾಡಿಸಬೇಕಿದೆ ಎಂದರು. ಇಂದು ಮಾಜಿ ದೇವದಾಸಿಯರ ಮಕ್ಕಳು ಶೈಕ್ಷಣಿಕ, ಆರ್ಥಿಕವಾಗಿ ಮುಂದೆ ಬರುತ್ತಿರುವುದ್ದರಿಂದ ಮುಂದಿನ ದಿನಗಳಲ್ಲಿ ಅನಿಷ್ಠ ಪದ್ಧತಿಗೆ ಪುಲ್ ಸ್ಟಾಪ್ ಆಗುವ ಆಶಾಭಾವನೆ ಇದೆ. ಕೂಡ್ಲಿಗಿ ತಾಲೂಕಿನಲ್ಲಿ ಮಾಜಿ ದೇವದಾಸಿಯರ ಕುಟುಂಬ ಸರ್ವೇ ಆದನಂತರ ಅವರಿಗೆ ವಸತಿ ನೀಡಲು ಈಗಾಗಲೇ ನಿವೇಶನ ಗುರುತಿಸಲಾಗಿದೆ ಮುಂದಿನ ದಿನಗಳಲ್ಲಿ ವಸತಿಗೃಹಗಳನ್ನು ನೀಡಲು ಪ್ರಾಮಾಣಿಕ ಪ್ರಯತ್ನ ಮಾಡುವೆ ಎಂದು ಶಾಸಕರು ಭರವಸೆ ನೀಡಿದರು.

ಸಿಡಿಪಿಒ ಮಾಲುಂಬೀ ಮಾತನಾಡಿ, ಮಾಜಿ ದೇವದಾಸಿಯರು ಕಚೇರಿಗೆ ಬಂದು ತಮ್ಮ ಮಾಹಿತಿಯನ್ನು ಡಿಜಿಟಲೀಕರಣ ಮಾಡಲು ಸಹಕರಿಸಬೇಕು, ಈಗ ಮಾಡುವ ಸರ್ವೇ ಆಧಾರ್ ಕಾರ್ಡ್ ಆಧರಿಸಿ ಮಾಡುತ್ತಿರುವುದರಿಂದ ದೇವದಾಸಿಯರ ಸಂಪೂರ್ಣ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಮಾಹಿತಿ ಲಭ್ಯವಾಗಲಿದ್ದು ಪಾರದರ್ಶಕವಾಗಿ ಸರ್ಕಾರದ ಸೌಲಭ್ಯ ನೀಡಲಾಗುವುದು ಎಂದರು.

ಇದೇ ಸಂದರ್ಭದಲ್ಲಿ ಸಿದ್ದೇಶ್ ಕಾತ್ರಿಕೆಹಟ್ಟಿ ಸಂಗ್ರಹಿಸಿದ ಕೂಡ್ಲಿಗಿ ತಾಲೂಕಿನ ಮಾಜಿ ದೇವದಾಸಿಯರ ವಿವರ ಪಟ್ಟಿಯ ಪುಸ್ತಕ ಬಿಡುಗಡೆ ಮಾಡಲಾಯಿತು.

ಈ ಸಂದರ್ಭ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಕೆ.ನರಸಪ್ಪ, ಕೂಡ್ಲಿಗಿ ತಹಶೀಲ್ದಾರ್‌ ವಿ.ಕೆ. ನೇತ್ರಾವತಿ, ಮಹಿಳಾ ಮುಖಂಡರಾದ ಯಂಕಮ್ಮ, ಸ್ನೇಹ ಸಂಸ್ಥೆಯ ಸರೋಜಾ ಹವಳದ, ದಲಿತ ಯುಮ ಮುಖಂಡರಾದ ಸಂತೋಷ್ ಕುಮಾರ್, ಸಾಲುಮನಿ ರಾಘವೇಂದ್ರ ಮುಂತಾದವರಿದ್ದರು.