ಹೊಸರಿತ್ತಿಯ ಶ್ರೀರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಗುರುರಾಜರ ಏಕಾಂತಭಕ್ತರು ವಿಭೂತಿ ಪುರುಷರೆನಿಸಿದ ಸುಶೀಲೇಂದ್ರತೀರ್ಥರ ಆರಾಧನಾ ಶತಮಾನೋತ್ಸವ ಅಂಗವಾಗಿ ಮಂತ್ರಾಲಯದ ರಾಘವೇಂದ್ರಸ್ವಾಮಿಗಳವರ ಮಠದ ಪ್ರಸ್ತುತ ಪೀಠಾಧಿಪತಿಗಳಾದ ಸುಬುಧೇಂದ್ರತೀರ್ಥರ ಅಮೃತಹಸ್ತದಿಂದ ಧೀರೇಂದ್ರತೀರ್ಥರ ಹಾಗೂ ಸುಶೀಲೇಂದ್ರತೀರ್ಥರ ಮೂಲ ಬೃಂದಾವನಗಳಿಗೆ ಸುವರ್ಣಕವಚಗಳನ್ನು ಶುಕ್ರವಾರ ಸರ್ಮಪಿಸಿದರು.

ಗುತ್ತಲ: ಸಮೀಪದ ಹೊಸರಿತ್ತಿಯ ಶ್ರೀರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಗುರುರಾಜರ ಏಕಾಂತಭಕ್ತರು ವಿಭೂತಿ ಪುರುಷರೆನಿಸಿದ ಸುಶೀಲೇಂದ್ರತೀರ್ಥರ ಆರಾಧನಾ ಶತಮಾನೋತ್ಸವ ಅಂಗವಾಗಿ ಮಂತ್ರಾಲಯದ ರಾಘವೇಂದ್ರಸ್ವಾಮಿಗಳವರ ಮಠದ ಪ್ರಸ್ತುತ ಪೀಠಾಧಿಪತಿಗಳಾದ ಸುಬುಧೇಂದ್ರತೀರ್ಥರ ಅಮೃತಹಸ್ತದಿಂದ ಧೀರೇಂದ್ರತೀರ್ಥರ ಹಾಗೂ ಸುಶೀಲೇಂದ್ರತೀರ್ಥರ ಮೂಲ ಬೃಂದಾವನಗಳಿಗೆ ಸುವರ್ಣಕವಚಗಳನ್ನು ಶುಕ್ರವಾರ ಸರ್ಮಪಿಸಿದರು.

ಸುಬುಧೇಂದ್ರತೀರ್ಥರ ತಮ್ಮ ಭಕ್ತರಿಂದ ಪಡೆದ ಕಾಣಿಕೆಗಳಿಗೆ ಸ್ವತಃ ಧೀರೇಂದ್ರತೀರ್ಥರ ಹಾಗೂ ಸುಶೀಲೇಂದ್ರತೀರ್ಥರ ಮೂಲ ಬೃಂದಾವನಗಳಿಗೆ ಸುವರ್ಣಕವಚಗಳನ್ನು ತಯಾರಿಸಿ ಅವರ ಅಮೃತ ಹಸ್ತದಿಂದ ಸರ್ಮಪಿಸಿದರು. ಇದನ್ನು ಕಣ್ಣಾರೇ ಕಾಣಲೆಂದು ಸಹ್ರಸಾರು ಭಕ್ತರು ಮಠದ ಆವರದಲ್ಲಿ ನೆರದಿದ್ದರು.

ಶುಕ್ರವಾರ ಮಧ್ಯಾರಾಧನೆ ಅಂಗವಾಗಿ ಬೆಳಗ್ಗೆ 6 ಗಂಟೆಗೆ ಸುಪ್ರಭಾತ ಸೇವೆ ನಡೆಯಿತು. ಬೆಳಗ್ಗೆ 8 ಗಂಟೆಗೆ ಅಷ್ಟೋತ್ತರ ಸಹಿತ ಪಂಚಾಮೃತ ಅಭಿಷೇಕ, ಮಧ್ಯಾಹ್ನ 12 ಗಂಟೆಗೆ ಸಂಸ್ಥಾನ ಪೂಜೆ, ಅಲಂಕಾರ, ಹಸ್ತೋದಕ ನಂತರ ತೀರ್ಥಪ್ರಸಾದ, ಸಂಜೆ 7 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ರಜತ ರಥೋತ್ಸವ ಜರುಗಿತು ನಂತರ ಮಹಾಮಂಗಳಾರತಿ ನೇರವೇರಿತು.

ಶನಿವಾರ ಹೊಸರಿತ್ತಿಯಲ್ಲಿ ಶೋಭಾ ಯಾತ್ರೆ ಜರುಗುವುದು. ಇದೇ ಸಂದರ್ಭದಲ್ಲಿ ಸುಬುಧೇಂದ್ರತೀರ್ಥರಿಗೆ ನಾಣ್ಯಗಳು ಹಾಗೂ ದವಸ ಧಾನ್ಯಗಳಿಂದ ತುಲಾಭಾರ ನೆರವೇರುವುದು. ಇದಕ್ಕೂ ಮುನ್ನ ಉತ್ತರಾಧನೆ ಅಂಗವಾಗಿ ಬೆಳಗ್ಗೆ 6 ಗಂಟೆಗೆ ಸುಪ್ರಭಾತ ಸೇವೆ, ಬೆಳಗ್ಗೆ 8 ಗಂಟೆಗೆ ಪಂಚಾಮೃತ ಅಭಿಷೇಕ, ಬೆಳಗ್ಗೆ 10 ಗಂಟೆಗೆ ಪಾದಪೂಜೆ ಹಾಗೂ ಕನಕಾಭಿಷೇಕ, ಮಧ್ಯಾಹ್ನ 12 ಗಂಟೆಗೆ ಸಂಸ್ಥಾನ ಪೂಜೆ, ಅಲಂಕಾರ, ಹಸ್ತೋದಕ ನಂತರ ತೀರ್ಥಪ್ರಸಾದ, ಸಂಜೆ 7 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಮಹಾಮಂಗಳಾರತಿ ನಡೆಯುವುದು.