ಐತಿಹಾಸಿಕ ಬಸವೇಶ್ವರ ಜಾತ್ರೆಗೆ ಅದ್ಧೂರಿ ಚಾಲನೆ

| Published : Aug 12 2025, 12:32 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ ಪಟ್ಟಣದ ಆರಾಧ್ಯದೈವ ಮೂಲನಂದೀಶ್ವರನ ಐತಿಹಾಸಿಕ ಜಾತ್ರಾಮಹೋತ್ಸವಕ್ಕೆ ಸೋಮವಾರ ಸಾಂಪ್ರದಾಯಿಕ ಬಸವೇಶ್ವರ ಪಲ್ಲಕ್ಕಿ ಉತ್ಸವಕ್ಕೆ ಅಪಾರ ಜನಸ್ತೋಮ ಹಾಗೂ ಬಸವ ಜಯಘೋಷಗಳೊಂದಿಗೆ ಚಾಲನೆ ನೀಡಲಾಯಿತು. ಪಲ್ಲಕ್ಕಿ ಉತ್ಸವವು ಭಕ್ತಿ ಭಾವ ಮತ್ತು ಸಡಗರದಿಂದ ಜರುಗಿತು.

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿಪಟ್ಟಣದ ಆರಾಧ್ಯದೈವ ಮೂಲನಂದೀಶ್ವರನ ಐತಿಹಾಸಿಕ ಜಾತ್ರಾಮಹೋತ್ಸವಕ್ಕೆ ಸೋಮವಾರ ಸಾಂಪ್ರದಾಯಿಕ ಬಸವೇಶ್ವರ ಪಲ್ಲಕ್ಕಿ ಉತ್ಸವಕ್ಕೆ ಅಪಾರ ಜನಸ್ತೋಮ ಹಾಗೂ ಬಸವ ಜಯಘೋಷಗಳೊಂದಿಗೆ ಚಾಲನೆ ನೀಡಲಾಯಿತು. ಪಲ್ಲಕ್ಕಿ ಉತ್ಸವವು ಭಕ್ತಿ ಭಾವ ಮತ್ತು ಸಡಗರದಿಂದ ಜರುಗಿತು.

ದೇವಸ್ಥಾನದಲ್ಲಿ ಮೂಲನಂದೀಶ್ವರನಿಗೆ ಬೆಳಗ್ಗೆಯೇ ರುದ್ರಾಭಿಷೇಕ ನಡೆಸಲಾಯಿತು. ಬೆಳ್ಳಿ ಅಲಂಕಾರ, ವಿಶೇಷ ಪೂಜೆಯನ್ನು ಅರ್ಚಕರಾದ ಗೌರಿಶಂಕರ ಚರಂತಿಮಠ, ವಿಶ್ವನಾಥ ಕಾಳಹಸ್ತೇಶ್ವರಮಠ ನೆರವೇರಿಸಿದರು. ವಿವಿಧ ಭಾಗಗಳಿಂದ ಜಾತ್ರೆಗೆ ಭಕ್ತರು ಆಗಮಿಸಿದ್ದು, ನಸುಕಿನಿಂದಲೇ ಪೂಜಾ ಕೈಂಕರ್ಯಗಳಲ್ಲಿ ಭಾಗವಹಿಸಿದ್ದರು. ಹರಕೆಗಳನ್ನು ಹೊತ್ತಿದ್ದ ಭಕ್ತರು ದೀಡ ನಮಸ್ಕಾರ, ಉರುಳು ಸೇವೆ ಮಾಡಿ ಹರಕೆ ಪೂರೈಸಿದರು.

ಸಂಪ್ರದಾಯದಂತೆ ಜಾತ್ರಾ ಉತ್ಸವ ಸಮಿತಿ ಪದಾಧಿಕಾರಿಗಳು ಸಿದ್ದಲಿಂಗ ಸ್ವಾಮೀಜಿ, ಶಿವಾನಂದ ಈರಕಾರ ಮುತ್ಯಾ ಅವರನ್ನು ದೇವಸ್ಥಾನಕ್ಕೆ ಮೆರವಣಿಗೆ ಮೂಲಕ ವಿವಿಧ ವಾದ್ಯಮೇಳದೊಂದಿಗೆ ಸ್ವಾಗತಿಸಿದರು. ಸಿದ್ದಲಿಂಗ ಸ್ವಾಮೀಜಿ ಸಾನಿಧ್ಯದಲ್ಲಿ ಸಚಿವ ಶಿವಾನಂದ ಪಾಟೀಲ ಅವರು ಬೆಳ್ಳಿ ನಂದಿ ಉತ್ಸವ ಮೂರ್ತಿಯ ಪಲ್ಲಕ್ಕಿಯನ್ನು ಹೊತ್ತು ಹೆಜ್ಜೆ ಹಾಕಿದರು. ಅಲ್ಲದೇ, ಅಲಂಕೃತ ಬೆಳ್ಳಿ ಪಲ್ಲಕ್ಕಿಯಲ್ಲಿ ಬೆಳ್ಳಿ ಉತ್ಸವ ನಂದಿ ಮೂರ್ತಿಯನ್ನು ಪ್ರತಿಷ್ಠಾಪಿಸಿದ ನಂತರ ಪಲ್ಲಕ್ಕಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಸಚಿವ ಶಿವಾನಂದ ಪಾಟೀಲ ದೇವಸ್ಥಾನದ ಕೆಲಹೊತ್ತು ಪಲ್ಲಕ್ಕಿ ಹೊತ್ತು ಸಾಗಿದರು. ನಂತರ ಶಿವಪ್ಪ ಮೋದಿ ಅವರ ಮನೆಗೆ ತೆರಳಿ ಐತಿಹಾಸಿಕ ಹೋರಿಮಟ್ಟಿ ಗುಡ್ಡದ ದೇವಸ್ಥಾನದ ಕಳಸಕ್ಕೆ ಪೂಜೆ ಸಲ್ಲಿಸಿದ ನಂತರ ನಿಡಗುಂದಿ ಮನೆತನದವರು ಕಳಸ ಹೊತ್ತು ಮೆರವಣಿಗೆಯು ಹೋರಿಮಟ್ಟಿ ಗುಡ್ಡಕ್ಕೆ ತೆರಳಿತು. ಗುಡ್ಡದಲ್ಲಿ ಶಿವಾನಂದ ಈರಕಾರ ಮುತ್ಯಾ ಅವರಿಗೆ ಈ ವರ್ಷದ ಹೇಳಿಕೆಗಳು ನಡೆದವು.

ಸಂಜೆ ಪಲ್ಲಕ್ಕಿಯು ಪಟ್ಟಣದ ಕಂಬಿಕಟ್ಟೆಗೆ ಆಗಮಿಸುತ್ತಿದ್ದಂತೆ ಅಪಾರ ಸಂಖ್ಯೆ ಭಕ್ತಸಮೂಹ ಬಸವ ಜಯಘೋಷದೊಂದಿಗೆ ಭವ್ಯವಾಗಿ ಸ್ವಾಗತಿಸಿದರು. ಶಾಲಾ ಆವರಣದಲ್ಲಿ ಆಕರ್ಷಕ ಸಿಡಿಮದ್ದುಗಳು ಸ್ಫೋಟಗೊಂಡವು. ಬಸವನಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರದಿಂದ ಅಕ್ಕನಾಗಮ್ಮ ಸರ್ಕಾರಿ ಪಪೂ ಕಾಲೇಜಿನ ಆವರಣದಲ್ಲಿ ಭಕ್ತರಿಗೆ ದಾಸೋಹ ವ್ಯವಸ್ಥೆ ಮಾಡಲಾಗಿತ್ತು.

ಕಲಾತಂಡಗಳ ಮೆರಗುಃ ಪಲ್ಲಕ್ಕಿ ಉತ್ಸವದಲ್ಲಿ ಭಟ್ಕಳದ ಚಂಡೆಮದ್ದಳೆ ಮೇಳ, ಆಲಗೂರಿನ ಮ್ಯೂಜಿಕಲ್ ಬ್ಯಾಂಡ್, ಮಸಬಿನಾಳದ ಮ್ಯೂಜಿಕಲ್ ಪಾರ್ಟಿ, ಕೊಣ್ಣೂರಿನ ಮಹಿಳಾ ಕಲಾತಂಡದ ಡೊಳ್ಳು, ಸುಟ್ಟಟ್ಟಿಯ ಝಾಂಜ್‌ ಮೇಳ, ಸಾರವಾಡದ ಗೊಂಬೆ, ಕರಡಿಮಜಲು, ಬಸವನಬಾಗೇವಾಡಿಯ ಬ್ಯಾಂಡ್, ವನಹಳ್ಳಿಯ ಕುದರೆಕುಣಿತ ಸೇರಿದಂತೆ ವಿವಿಧ ಕಲಾತಂಡಗಳು, ಗಜರಾಜ ಉತ್ಸವಕ್ಕೆ ಮೆರಗು ನೀಡಿದವು.ಪಲ್ಲಕ್ಕಿ ಉತ್ಸವದಲ್ಲಿ ತಹಸೀಲ್ದಾರ ವೈ.ಎಸ್.ಸೋಮನಕಟ್ಟಿ, ಕಂದಾಯ ಇಲಾಖೆಯ ಅಧಿಕಾರಿ ರಾಜು ಇವಣಗಿ, ಬಸವೇಶ್ವರ ಸೇವಾ ಸಮಿತಿ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ, ಬಸವೇಶ್ವರ ಬ್ಯಾಂಕಿನ ಅಧ್ಯಕ್ಷ ಲೋಕನಾಥ ಅಗರವಾಲ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಹಾರಿವಾಳ, ಜಾತ್ರಾ ಉತ್ಸವ ಸಮಿತಿ ಅಧ್ಯಕ್ಷ ರವಿ ರಾಠೋಡ, ಪುರಸಭೆ ಅಧ್ಯಕ್ಷೆ ಜಗದೇವಿ ಗುಂಡಳ್ಳಿ, ಉಪಾಧ್ಯಕ್ಷ ಅಶೋಕ ಹಾರಿವಾಳ, ವಿಡಿಸಿಸಿ ಬ್ಯಾಂಕ್‌ ನಿರ್ದೇಶಕ ಚಂದ್ರಶೇಖರಗೌಡ ಪಾಟೀಲ, ಬಸವಸೈನ್ಯ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ, ಜೆಡಿಎಸ್ ಮುಖಂಡ ಅಪ್ಪುಗೌಡ ಪಾಟೀಲ, ವಿವಿಧ ಸಂಘ-ಸಂಸ್ಥೆಯ ಭರತು ಅಗರವಾಲ, ಬಸವರಾಜ ಹಾರಿವಾಳ, ಚಂದ್ರಶೇಖರಗೌಡ ಪಾಟೀಲ, ಬಸವರಾಜ ಗೊಳಸಂಗಿ, ಶೇಖರ ಗೊಳಸಂಗಿ, ರವಿಗೌಡ ಚಿಕ್ಕೊಂಡ, ವಿನುತ ಕಲ್ಲೂರ, ಸುರೇಶಗೌಡ ಪಾಟೀಲ, ಸಂಗಣ್ಣ ಕಲ್ಲೂರ, ಸಂಗಮೇಶ ಓಲೇಕಾರ, ಅಶೋಕ ಹಾರಿವಾಳ, ಮಲ್ಲಿಕಾರ್ಜುನ ನಾಯಕ, ಜಟ್ಟಿಂಗರಾಯ ಮಾಲಗಾರ, ರವಿ ಪಟ್ಟಣಶೆಟ್ಟಿ, ಮಹಾಂತೇಶ ಹಂಜಗಿ, ಸಂಕನಗೌಡ ಪಾಟೀಲ, ರಾಜೇಂದ್ರ ಪತ್ತಾರ, ಅನಿಲ ದುಂಬಾಳಿ, ಮೀರಾಸಾಬ ಕೊರಬು, ರಮೇಶ ಯಳಮೇಲಿ, ಸಂಗಯ್ಯ ಒಡೆಯರ, ಜಗದೀಶ ಕೊಟ್ರಶೆಟ್ಟಿ, ಉಮೇಶ ಹಾರಿವಾಳ, ಬಸವರಾಜ ಕೋಟಿ, ಬಸವರಾಜ ರಾಯಗೊಂಡ, ಸಂಗಯ್ಯ ಕಾಳಹಸ್ತೇಶ್ವರಮಠ, ಶಿವಲಿಂಗಯ್ಯ ತೆಗ್ಗಿನಮಠ, ಸಂಗನಗೌಡ ಚಿಕ್ಕೊಂಡ, ಹರೀಶ ಅಗರವಾಲ, ಸಂಗನಬಸು ಪೂಜಾರಿ, ಎಂ.ಬಿ.ತೋಟದ, ಬಸವರಾಜ ಪೂಜಾರಿ, ವಿವೇಕಾನಂದ ಕಲ್ಯಾಣಶೆಟ್ಟಿ, ವಿ.ಬಿ.ಮರ್ತುರ, ರಾಮ ನಾಯಕ, ಸಿದ್ದು ಹೊಸಮಠ, ಮಲ್ಲಿಕಾರ್ಜುನ ಪಡಶೆಟ್ಟಿ ಸೇರಿ ಹಲವರು ಇದ್ದರು.

ವಿವೇಕ ಬಿಗ್ರೇಡ್, ಪವಾಡ ಬಸವೇಶ್ವರ ಗೆಳೆಯರ ಬಳಗ ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸುತ್ತಿವೆ. ಇನ್ನು, ಜಾತ್ರೆಯಲ್ಲಿ ಡಿವೈಎಸ್ಪಿ ಬಲ್ಲಪ್ಪ ನಂದಗಾವಿ, ಪಿಐ ಗುರುನಾಥ ದಾಶ್ಯಾಳ ಸೂಕ್ತ ಪೊಲೀಸ್ ಭದ್ರತೆ ನಿಯೋಜನೆಗೊಂಡಿದ್ದು, ಬಂದೋಬಸ್ತ್‌ಗೆ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದ.

ಈ ಬಾರಿಯ ಜಾತ್ರೆಯಲ್ಲಿ ಮಳಿಗೆಗಳನ್ನು ದೇವಸ್ಥಾನ ಬಳಿಯಿರುವ ಕಾಳಹಸ್ತೇಶ್ವರಮಠ ಅವರ ಜಮೀನಿಗೆ ಹೊಂದಿಕೊಂಡಿರುವ ಮುಖ್ಯರಸ್ತೆಯಲ್ಲಿ ಹಾಕಲಾಗಿದೆ. ಇದರ ಪಕ್ಕದಲ್ಲಿಯೇ ವಿವಿಧ ಮನರಂಜನಾ ಸಾಮಗ್ರಿಗಳ ವ್ಯವಸ್ಥೆ ಮಾಡಲಾಗಿದೆ. ದೇವರ ದರ್ಶನ ಪಡೆದು ನಂತರು ಜನರು ಜಾತ್ರೆಯಲ್ಲಿ ಭಅಗವಹಿಸಬಹುದಾಗಿದೆ.