ಮರವಂಜಿ ರಸ್ತೆ ಸಂಪರ್ಕ ಕಲ್ಪಿಸುವ ₹50ಲಕ್ಷ ವೆಚ್ಚದ ಸಿಸಿ. ರಸ್ತೆ ನಿರ್ಮಾಣಕ್ಕೆ ಶಂಕುಸ್ಥಾಪನೆ

ಕನ್ನಡಪ್ರಭ ವಾರ್ತೆ, ಕಡೂರು

ಪಟ್ಟಣದ ಶ್ರೀ ಮಂಗಾರಮ್ಮನವರ ದೇವಾಲಯದ ಅಭಿವೃದ್ಧಿ ಹೆಚ್ಚಿನ ಒತ್ತುಕೊಡಲಾಗುವುದು ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.

ಪಟ್ಟಣದ ಬಿಜಿಎಸ್ ಶಾಲೆ ಹಿಂಭಾಗದಲ್ಲಿರುವ ಗ್ರಾಮ ದೇವತೆ ಶ್ರೀ ಮಂಗಾರಮ್ಮ ದೇವಾಲಯದಿಂದ ಮರವಂಜಿ ರಸ್ತೆ ಸಂಪರ್ಕ ಕಲ್ಪಿಸುವ ₹50ಲಕ್ಷ ವೆಚ್ಚದ ಸಿಸಿ. ರಸ್ತೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು. ಈ ದೇವಸ್ಥಾನಕ್ಕೆ ತೆರಳಲು ಸುಸಜ್ಜಿತ ರಸ್ತೆ ಅಗತ್ಯವಿತ್ತು. ಅದನ್ನು ಮನಗಂಡು ರಸ್ತೆ ಕಾಮಗಾರಿಗೆ ಅನುದಾನ ದೊರಕಿಸುವ ಮೂಲಕ ಕಾಮಗಾರಿಗೆ ಇಂದು ಚಾಲನೆ ನೀಡಲಾಗಿದೆ ಎಂದರು.

ಈ ಹಿಂದೆ ದೇವಸ್ಥಾನದ ಅಭಿವೃದ್ಧಿಗೆ ನನ್ನ ಶಾಸಕರ ಅನುದಾನದಲ್ಲಿ ₹10 ಲಕ್ಷ ನೀಡಲಾಗಿದೆ. ಸಿ.ಸಿ. ರಸ್ತೆ ಕಾಮಗಾರಿಯನ್ನು ಮುಂದುವರಿಸುವಂತೆ ಹೆಚ್ಚುವರಿಯಾಗಿ ₹25 ಲಕ್ಷ ಅನುದಾನ ಒದಗಿಸಲಾಗುವುದು ಎಂದು ಭರವಸೆ ನೀಡಿದರು.


ದೇವಸ್ಥಾನ ಸಮಿತಿ ಅಧ್ಯಕ್ಷ ಶರತ್ ಕೃಷ್ಣಮೂರ್ತಿ ಮಾತನಾಡಿ ಶತಮಾನಗಳಷ್ಟು ಹಳೆಯದಾದ ಮಂಗಾರಮ್ಮ ದೇವಸ್ಥಾನ ಈ ಭಾಗದ ರೈತರ ಆರಾಧ್ಯ ದೇವತೆ. ಶಿಥಿಲವಾಗಿದ್ದ ಈ ದೇವಸ್ಥಾನವನ್ನು ಪುನರ್ ನಿರ್ಮಿಸಿ ಭವ್ಯ ಶಿಲಾ ದೇವಸ್ಥಾನ ನಿರ್ಮಾಣ ಮಾಡಲಾಗಿದೆ. ಅಭಿವೃದ್ಧಿ ಹೊಂದುತ್ತಿರುವ ಈ ದೇವಾಲಯಕ್ಕೆ ಅಗತ್ಯ ಕೊಳವೆಬಾವಿ, ವಿದ್ಯುತ್ ಕಂಬಗಳು ಹಾಗೂ ಹೈಮಾಸ್ಕ್ ದೀಪ ಅಳವಡಿಕೆ ಅವಶ್ಯಕವಿದ್ದು ಶಾಸಕರು ಒದಗಿಸಿಕೊಡುವಂತೆ ಮನವಿ ಮಾಡಿದರು.

ಪುರಸಭೆ ಮಾಜಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ ಪಟ್ಟಣ ದಿನ ಕಳೆದಂತೆ ಭೌಗೋಳಿಕವಾಗಿ ವಿಸ್ತೀರ್ಣ ಗೊಳ್ಳುತ್ತಿದ್ದು, ಭೂಮಿಯ ಬೆಲೆ ಏರಿಕೆ ಕಾಣುತ್ತಿದೆ.‌ ಈ ಭಾಗದ ರೈತರು ತಮ್ಮ ಪೂರ್ವಿಕರ ಜಮೀನು ತೋಟಗಳನ್ನು ಮಾರದಂತೆ ಉಳಿಸಿಕೊಳ್ಳುವ ಕಾರ್ಯವಾಗಬೇಕು. ಮುಖ್ಯವಾಗಿ ಮುಖ್ಯ ರಸ್ತೆಗೆ ಸಂಪರ್ಕಿಸುವ ರಸ್ತೆಗಳನ್ನು ಹೆಚ್ಚು ವಿಸ್ತೀರ್ಣಗೊಳಿಸಿದರೆ ಈ ಭಾಗದ ಪ್ರದೇಶ ಅಭಿವೃದ್ಧಿಗೊಳ್ಳಲು ಹೆಚ್ಚು ಸಹಕಾರಿಯಾಗಲಿದೆ ಎಂದರು.

ಪುರಸಭೆ ಮಾಜಿ ಉಪಾಧ್ಯಕ್ಷ ತೋಟದಮನೆ ಮೋಹನ್, ಡಿಶ್ ಮಂಜುನಾಥ್, ಈರಳ್ಳಿ ರಮೇಶ್, ತೋಟದಮನೆ ಶ್ರೀನಿವಾಸ್, ಮಾಜಿ ಸದಸ್ಯ ಮರುಗುದ್ದಿ ಮನು, ದೇವಸ್ಥಾನ ಸಮಿತಿ ಉಪಾಧ್ಯಕ್ಷ ಉಮೇಶ್, ಯರದಕೆರೆ ರಾಜಪ್ಪ, ಲಕ್ಷ್ಮೀ ತಿಪ್ಪೇಶ್, ನಂಜುಂಡಸ್ವಾಮಿ,ಕರಿಬಡ್ಡೆ ಶ್ರೀನಿವಾಸ್, ದೊಡ್ಡಿಗೌಡರ ರಮೇಶ್, ಪಂಗ್ಲಿ ಮಂಜು, ಬಾವಿಮನೆಮಧು, ವಸಂತ ಕುಮಾರ್, ವಿನಯ್, ಹರೀಶ್, ಎಂ.ಚಂದ್ರಶೇಖರ್, ಭೂಸೇನಾ ನಿಗಮದ ಅಧಿಕಾರಿ ಗಿರೀಶ್ ಮತ್ತಿತರರು ಇದ್ದರು.

6ಕೆಕೆಡಿಯು2.

ಕಡೂರಿನ ಮಂಗಾರಮ್ಮ ದೇವಾಲಯದಿಂದ ಮರವಂಜಿ ರಸ್ತೆ ಸಂಪರ್ಕದ ಸಿಸಿ ರಸ್ತೆ ಕಾಮಗಾರಿಗೆ ಶಾಸಕ ಕೆ.ಎಸ್. ಆನಂದ್ ಭೂಮಿ ಪೂಜೆ ನೆರವೇರಿಸಿದರು. ಶರತ್ ಕೃಷ್ಣಮೂರ್ತಿ, ಭಂಡಾರಿ ಶ್ರೀನಿವಾಸ್, ಮೋಹನ್ ಕುಮಾರ್, ಉಮೇಶ್ ಮತ್ತಿತರಿದ್ದರು.