ಪ್ರತಿ ಕುಟುಂಬ ತಲುಪುತ್ತಿವೆ ಗ್ಯಾರಂಟಿ ಯೋಜನೆ: ಶಾಸಕ ಹಿಟ್ನಾಳ

| Published : Feb 19 2025, 12:47 AM IST

ಪ್ರತಿ ಕುಟುಂಬ ತಲುಪುತ್ತಿವೆ ಗ್ಯಾರಂಟಿ ಯೋಜನೆ: ಶಾಸಕ ಹಿಟ್ನಾಳ
Share this Article
  • FB
  • TW
  • Linkdin
  • Email

ಸಾರಾಂಶ

ಕಾಂಗ್ರೆಸ್‌ ರ್ಕಾರದಲ್ಲಿನ ಯೋಜನೆಗಳು ಪ್ರತಿಯೊಂದು ಕುಟುಂಬಕ್ಕೂ ತಲುಪುತ್ತಿವೆ. ಗ್ಯಾರಂಟಿ ಯೋಜನೆಗಳಿಂದ ಸಮ ಸಮಾಜದ ಕನಸು ನನಸಾಗುತ್ತಿದೆ. ಆದ್ದರಿಂದ ಗ್ಯಾರಂಟಿ ಯೋಜನೆಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ.

ಕೊಪ್ಪಳ:

ಗ್ಯಾರಂಟಿ ಯೋಜನೆಗಳ ಮೂಲಕ ಸರ್ಕಾರದ ಯೋಜನೆಗಳು ಪ್ರತಿಯೊಬ್ಬರ ಮನೆಗೂ ತಲುಪುತ್ತಿವೆ ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದ್ದಾರೆ. ಕೊಪ್ಪಳ ವಿಧಾನಸಭ ಕ್ಷೇತ್ರದ ಲೇಬಗೇರಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ನರೇಗಲ್, ಹುಚ್ಚೇಶ್ವರ ಕ್ಯಾಂಪ್, ಯತ್ನಟ್ಟಿ ಹಾಗೂ ಓಜನಹಳ್ಳಿ ಗ್ರಾಮಗಳಲ್ಲಿ ₹ 3.25 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗಳ ಅಡಿಗಲ್ಲು ನೆರವೇರಿಸಿ, ಮಾತನಾಡಿದರು.

ಕಾಂಗ್ರೆಸ್‌ ರ್ಕಾರದಲ್ಲಿನ ಯೋಜನೆಗಳು ಪ್ರತಿಯೊಂದು ಕುಟುಂಬಕ್ಕೂ ತಲುಪುತ್ತಿವೆ. ಗ್ಯಾರಂಟಿ ಯೋಜನೆಗಳಿಂದ ಸಮ ಸಮಾಜದ ಕನಸು ನನಸಾಗುತ್ತಿದೆ. ಆದ್ದರಿಂದ ಗ್ಯಾರಂಟಿ ಯೋಜನೆಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ ಎಂದರು.

ಕೊಪ್ಪಳ ವಿಧಾನಸಭ ಕ್ಷೇತ್ರದ 103 ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿ ಶೇ.60ರಷ್ಟು ಮುಗಿದಿದ್ದು, ಉಳಿದ ಕಾಮಗಾರಿ ಕೂಡ ಪ್ರಗತಿಯಲ್ಲಿದೆ ಎಂದು ಹೇಳಿದರು.

ರಸ್ತೆ ಅಭಿವೃದ್ಧಿ ಕಾಮಗಾರಿಗೆ ಅಡಿಗಲ್ಲು:

ಕೊಪ್ಪಳ-ಭಾಗ್ಯನಗರ-ಓಜನಹಳ್ಳಿ ರಸ್ತೆಯಿಂದ ಕ್ಯಾದಿಗುಪ್ಪ ರಸ್ತೆ ಅಭಿವೃದ್ಧಿಗೆ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ₹ 1 ಕೋಟಿ ವೆಚ್ಚದಲ್ಲಿ ಕಾಮಗಾರಿಯ ಅಡಿಗಲ್ಲು ನೆರವೇರಿಸಿದರು. ಕ್ಷೇತ್ರದಲ್ಲಿನ ರಸ್ತೆಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿದ್ದು ಎಲ್ಲ ರಸ್ತೆಗಳ ಅಭಿವೃದ್ಧಿಗೆ ಅನುದಾನ ಮಂಜೂರು ಮಾಡಿಸುವ ಕೆಲಸ ಮಾಡುತ್ತಿದ್ದೇವೆ. ಸದ್ಯ ಕ್ಷೇತ್ರದಲ್ಲಿ ₹ 100 ಕೋಟಿಗೂ ಹೆಚ್ಚಿನ ಅನುದಾನದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯುತ್ತಿವೆ ಎಂದರು.

ಈ ವೇಳೆ ಮಾಜಿ ಜಿಪಂ ಸದಸ್ಯರಾದ ಪ್ರಸನ್ನ ಗಡಾದ, ರಾಮಣ್ಣ ಚೌಡ್ಕಿ,ಗ್ಯಾರಂಟಿ ಸಮಿತಿ ಅಧ್ಯಕ್ಷ ಬಾಲಚಂದ್ರನ್ ಮುನಿರಬಾದ, ಅಮರೇಶ ಉಪಲಾಪುರ, ದೇವಪ್ಪ ಓಜನಹಳ್ಳಿ, ಬಸಣ್ಣ ಓಜನಹಳ್ಳಿ, ಯಮನೂರಪ್ಪ ನಾಯಕ, ಮುಕ್ಕಣ್ಣ ಚಿಲವಾಡಗಿ, ಉಡಚಪ್ಪ ಟನಕನಕಲ್, ಯಲ್ಲಪ್ಪ ಹಳೇಮನಿ,ಚಂದಪ್ಪ ನರೇಗಲ್, ವೀರನಗೌಡ, ತಹಸೀಲ್ದಾರ್ ವಿಠ್ಠಲ್ ಚೌಗಲೇ, ತಾಪಂ ಇಒ ದುಂಡೇಶ ತುರಾದಿ ಸೇರಿದಂತೆ ಇತರರು ಉಪಸ್ಥಿತರಿದ್ದರು.