ಸಾರಾಂಶ
ಬಾಗಲಕೋಟೆ ನಗರದಲ್ಲಿ ನಡೆದ ಈದ್ ಮಿಲಾದ್ ಮೆರವಣಿಗೆ ವೇಳೆ ಪಂಕಾ ಮಸೀದಿ ಬಳಿಯ ಕಟೌಟ್‌ನಲ್ಲಿ ಹಮಾಸ್ ಲೀಡರ್‌ಗಳ ಭಾವಚಿತ್ರಗಳು ಕಂಡು ಬಂದಿದ್ದು, ಇದಕ್ಕೆ ನಗರದ ಹಿಂದೂಪರ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿದ್ದು, ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ನಗರದಲ್ಲಿ ನಡೆದ ಈದ್ ಮಿಲಾದ್ ಮೆರವಣಿಗೆ ವೇಳೆ ಪಂಕಾ ಮಸೀದಿ ಬಳಿಯ ಕಟೌಟ್‌ನಲ್ಲಿ ಹಮಾಸ್ ಲೀಡರ್‌ಗಳ ಭಾವಚಿತ್ರಗಳು ಕಂಡು ಬಂದಿದ್ದು, ಇದಕ್ಕೆ ನಗರದ ಹಿಂದೂಪರ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿದ್ದು, ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ.ಹಮಾಸ್ ಲೀಡರ್ ಗಳ ಭುಜದ ಮೇಲೆ ಪ್ಯಾಲಿಸ್ತೀನ್ ಧ್ವಜ ಇರುವ ಭಾವಚಿತ್ರ ಹಾಕಿದ ಕಿಡಿಗೇಡಿಗಳ ಕೃತ್ಯದ ವಿಷಯ ಗೊತ್ತಾಗುತ್ತಿದ್ದಂತೆಯೇ ಭುಜದ ಮೇಲಿನ ಪ್ಯಾಲಿಸ್ತೀನ್ ಧ್ವಜದ ಮೇಲೆ ಹಸಿರು ಬಟ್ಟೆ ಅಂಟಿಸಲಾಗಿದೆ, ಈ ಕುರಿತು ಸ್ಟೇಟಸ್ ಕೂಡ ಕೆಲವು ಕಿಡಿಗೇಡಿಗಳು ಹಾಕಿದ್ದಾರೆ. ಕಿಡಿಗೇಡಿಗಳ ಕೃತ್ಯಕ್ಕೆ ಹಿಂದುಪರ ಸಂಘಟನೆಗಳಿಂದ ಖಂಡನೆ ವ್ಯಕ್ತವಾಗಿದ್ದು, ಕಿಡಿಗೇಡಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಬಾಗಲಕೋಟೆ ನಗರ ಠಾಣೆ ಎದುರು ಹಿಂದು ಕಾರ್ಯಕರ್ತರು ಜಮಾಯಿಸಿದ್ದು, ಕಿಡಿಗೇಡಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.