ಧಾರ್ಮಿಕ ಕಾರ್ಯಗಳಿಂದ ಸುಖ, ನೆಮ್ಮದಿ

| Published : Apr 04 2024, 01:01 AM IST

ಸಾರಾಂಶ

ಬೈಲಹೊಂಗಲ:ಸಕಲರೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದರಿಂದ ಸುಖ, ನೆಮ್ಮದಿ ಸಭಿಸುವ ಮೂಲಕ ಜೀವನ ಸುಗಮವಾಗಲಿದೆ ಎಂದು ಬಾಳೇಹೊನ್ನೂರು ರಂಭಾಪುರಿ ಪೀಠದ ಜಗದ್ಗುರು ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯರು ನುಡಿದರು.

ಕನ್ನಡಪ್ರಭ ವಾರ್ತೆ ಬೈಲಹೊಂಗಲಸಕಲರೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದರಿಂದ ಸುಖ, ನೆಮ್ಮದಿ ಸಭಿಸುವ ಮೂಲಕ ಜೀವನ ಸುಗಮವಾಗಲಿದೆ ಎಂದು ಬಾಳೇಹೊನ್ನೂರು ರಂಭಾಪುರಿ ಪೀಠದ ಜಗದ್ಗುರು ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯರು ನುಡಿದರು.

ವಣ್ಣೂರು ಗ್ರಾಮದಲ್ಲಿ ನಡೆದ ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವ, ಶ್ರೀ ಜಗದ್ಗುರು ವಿಶ್ವಾರಾಧ್ಯ, ಶ್ರೀ ಪ್ರಭುದೇವರ ಮೂರ್ತಿ ಪ್ರತಿಷ್ಠಾಪನೆ, ಅಡ್ಡಪಲ್ಲಕ್ಕಿ ಮಹೋತ್ಸವ, ಧರ್ಮಸಭೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ಯುವಕರು ಕೆಟ್ಟ ಚಟಗಳ ದಾಸರಾಗಿರುವದರಿಂದ ಸಮಾಜದಲ್ಲಿ ಸ್ವಾಸ್ಥ್ಯ ಹದಗೆಡುತ್ತಿದೆ. ಇಂದಿನ ಯುವಕರು ಆದರ್ಶಗಳನ್ನು ರೂಢಿಸಿಕೊಂಡು ಸನ್ಮಾರ್ಗದಲ್ಲಿ ಮುನ್ನಡೆಯಬೇಕು ಎಂದು ಯುವಕರಿಗೆ ಕಿವಿಮಾತು ಹೇಳಿದರು.

ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಇಂದು ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗಬೇಕು ಎಂದು ಸಲಹೆ ನೀಡಿದರು.

ರಾಯಣ್ಣ ಸಂಗೊಳ್ಳಿಯ ಹಿರೇಮಠದ ಗುರುಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಜಾತ್ರಾ ಮಹೋತ್ಸವಗಳು ಜನರಲ್ಲಿ ಉತ್ತಮ ಬಾಂಧವ್ಯ ಮೂಡಿಸಲಿದ್ದು, ಎಲ್ಲ ಸಮುದಾಯಗಳು ಒಂದುಗೂಡಿ ದೇಶವನ್ನು ಅಭಿವೃದ್ದಿಯೆಡೆಗೆ ಕೊಂಡೊಯ್ಯಲು ಪ್ರಯತ್ನಿಸಬೇಕು ಎಂದರು.

ವಣ್ಣೂರು ಗ್ರಾಮದಲ್ಲಿ ವಿಶ್ವಾರಾಧ್ಯರ ಮತ್ತು ಪ್ರಭುದೇವರ ಮೂರ್ತಿಗಳ ಮೆರವಣಿಗೆ ಅದ್ಧೂರಿಯಾಗಿ ನಡೆಯಿತು. ಮೂರ್ತಿಗಳ ಪ್ರತಿಷ್ಠಾಪನೆ, ವೀರಭದ್ರೇಶ್ವರರ ಪಲ್ಲಕ್ಕಿ ಉತ್ಸವ, ಅಯ್ಯಾಚಾರ ದೀಕ್ಷಾ ಕಾರ್ಯಕ್ರಮ, ಬಾಳೇಹೊನ್ನೂರಿನ ರಂಭಾಪೂರಿ ಶ್ರೀಗಳ ಅಡ್ಡ ಪಲ್ಲಕ್ಕಿ ಉತ್ಸವಗಳು ವಿವಿಧ ಬೀದಿಗಳಲ್ಲಿ ನಡೆದವು.

ಬೈಲಹೊಂಗಲ ತಾಲೂಕಿನ ಹಣಬರಹಟ್ಟಿಯ ಕೆಳದಿ ಹಿರೇಮಠದ ಬಸವಲಿಂಗ ಶಿವಾಚವಾರ್ಯ ಸ್ವಾಮೀಜಿ, ಸವದತ್ತಿ ಮೂಲಿಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ದೊಡವಾಡದ ಹಿರೇಮಠದ ಜಡಿಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ಮಲ್ಲಾಪೂರದ ಗಾಳೇಶ್ವರ ಮಠದ ಚಿದಾನಂದ ಸ್ವಾಮೀಜಿ, ಸುತಗಟ್ಟಿಯ ಹಿರೇಮಠದ ಸಿದ್ದಲಿಂಗ ದೇವರು, ಕಳಸದ ಹಿರೇಮಠದ ವೇ.ಮೂ.ವೀರಭದ್ರಶಾಸ್ತ್ರಿಗಳು, ರಾಣೇಬೆಣ್ಣೂರಿನ ಹಿರೇಮಠದ ವೇ.ಮೂ.ಪುನೀತ ಶಾಸ್ತ್ರಿಗಳು, ಸುತಗಟ್ಟಿಯ ಹಿರೇಮಠದ ವೇ.ಮೂ.ಚನ್ನಬಸಯ್ಯ ಶಾಸ್ತ್ರಿಗಳು, ಕಾಗತಿಯ ಶಿವಪೂಜಿ ಮಠದ ರಾಚಯ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ನಿಪ್ಪಾಣಿಯ ಶ್ರೀ ಹಾಲಸಿದ್ದನಾಥ ಸಹಕಾರಿ ಸಕ್ಕರೆ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ಶಿವು ಕುಲಕರ್ಣಿ, ಚನ್ನಮ್ಮನ ಕಿತ್ತೂರು ಶಾಸಕ ಬಾಬಾಸಾಹೇಬ ಪಾಟೀಲ, ಬಿಜೆಪಿ ಮುಖಂಡ ನಿಂಗನಗೌಡ ದೊಡಗೌಡರ, ಗುತ್ತಿಗೆದಾರ ಎಂ.ಬಿ.ಹಿರೇಮಠ, ಮದ್ಯಪಾನ ಸಂಯಮ ಮಂಡಳಿ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ತುಬಾಕಿ, ಈರಣ್ಣ ಬಡಿಗೇರ, ತಾತಾಸಾಹೇಬ ದೇಸಾಯಿ, ಬಾಳಾಸಾಹೇಬ ದೇಸಾಯಿ, ನಿಂಗಪ್ಪ ಪೋತಲಿ, ಎಸ್.ಎಫ್.ನಾಯಕ, ಹಣಮಂತ ದೊಡ್ಡನ್ನವರ, ಮನೋಜ ಕೆಳಗೇರಿ,ಗುತ್ತಿಗೆದಾರ ಬಸವರಾಜ ಹೊಸಮನಿ ಸೇರಿದಂತೆ ಹಲವರು ಇದ್ದರು.

ವೇ.ಮೂ.ಚಂದ್ರಯ್ಯ ಹಿರೇಮಠ ಸ್ವಾಗತಿಸಿದರು. ಡಾ.ಗುರುಪಾದಯ್ಯ ಸಾಲಿಮಠ ನಿರೂಪಿಸಿದರು. ಮನೋಜ ಕೆಳಗೇರಿ ವಂದಿಸಿದರು. ಬೆಂಗಳೂರಿನ ಪತ್ರಯ್ಯ ಶಾಸ್ತ್ರಿ ಹಾಗೂ ಗದಗ ಶ್ರೀ ವೀರೇಶ್ವರ ಪುಣ್ಯಾಶ್ರಮದ ಶಶಿಕುಮಾರ ಕಲಬುರಗಿ ಕಲಾ ತಂಡದಿಂದ ಸಂಗೀತ ಸೇವೆ ಹಮ್ಮಿಕೊಳ್ಳಲಾಗಿತ್ತು.