ಸಾರಾಂಶ
ತಿಪಟೂರು: ದಲಿತ ಸಮುದಾಯವು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ತುಮಕೂರು ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಎಸ್.ಪಿ.ಮುದ್ದಹನುಮೇಗೌಡರನ್ನು ಬೆಂಬಲಿಸುವಂತೆ ಆದಿಜಾಂಬವ ಸಂಘದ ಅಧ್ಯಕ್ಷರಾದ ಪೆದ್ದಿಹಳ್ಳಿ ನರಸಿಂಹಯ್ಯ ತಿಳಿಸಿದರು. ನಗರದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರಳ, ಸಜ್ಜನಿಕೆ ವ್ಯಕ್ತಿಯಾಗಿರುವ ಮುದ್ದಹನುಮೇಗೌಡರು ಕಳೆದ ಲೋಕಸಭಾ ಸದಸ್ಯರಾಗಿದ್ದಾಗ ಉತ್ತಮ ಕೆಲಸ ಕಾರ್ಯಗಳನ್ನು ಮಾಡಿದ್ದು ಮುಂದೆಯೂ ಆಯ್ಕೆಯಾದರೆ ಜಿಲ್ಲೆಯ ಮತ್ತಷ್ಟ ಅಭಿವೃದ್ಧಿಗೆ ಮುಂದಾಗಲಿದ್ದಾರೆ. ಹಾಗೆಯೇ ದಲಿತ, ಹಿಂದುಳಿದ ಸಮಾಜದ ಅಭಿವೃದ್ಧಿಗೆ ಶ್ರಮಿಸಲಿದ್ದಾರೆ. ಆದ್ದರಿಂದ ಜಿಲ್ಲೆಯ ದಲಿತ ಸಮುದಾಯವು ಈ ಬಾರಿ ಮುದ್ದಹನುಮೇ ಗೌಡರನ್ನು ಬೆಂಬಲಿಸಬೇಕೆಂದು ಒತ್ತಾಯಿಸಿದರು. ಚುನಾವಣೆಯ ನಂತರ ಸರ್ಕಾರದ ನಾಮಿನಿಗಳನ್ನು ಮಾದಿಗ ಸಮುದಾಯಕ್ಕೆ ನೀಡುವಂತೆ ಶಾಸಕರಿಗೆ ಹಾಗೂ ಜಿಲ್ಲೆ ಮುಖಂಡರುಗಳಿಗೆ ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಸಮಾಜದ ಮುಖಂಡರಾದ ಕೆಂಪಯ್ಯ, ಸೋಮಶೇಖರ್, ಕೃಷ್ಣಮೂರ್ತಿ, ಶಿವಲಿಂಗಯ್ಯ, ರಂಗಸ್ವಾಮಿ, ನಾಗರಾಜ್, ಸುರೇಶ್, ರಮೇಶ್, ರಂಗಸ್ವಾಮಿ ಮತ್ತಿತರರಿದ್ದರು.