ಅಪರಿಚಿತ ಪ್ರಾಣಿ ದಾಳಿಯಿಂದ ಜಾನುವಾರುಗಳ ಸಾವು

| Published : Apr 04 2024, 01:01 AM IST

ಸಾರಾಂಶ

ಅಪರಿಚಿತ ಪ್ರಾಣಿ ದಾಳಿ ಮಾಡಿ ತಾಲೂಕಿನಲ್ಲಿ ಒಂದು ವಾರದಲ್ಲಿ ಹಸುವಿನ ಹಾಗೂ ಎಮ್ಮೆ ಕರು ಸೇರಿ ಆರು ಜಾನುವಾರುಗಳನ್ನು ತಿಂದು ಹಾಕಿದ ಪ್ರಕರಣ ತಾಲೂಕಿನ ಮದಗುಣಿ ಗ್ರಾಮದಲ್ಲಿ ನಡೆದಿದೆ.

ಕನ್ನಡಪ್ರಭ ವಾರ್ತೆ ಆಳಂದ

ಅಪರಿಚಿತ ಪ್ರಾಣಿ ದಾಳಿ ಮಾಡಿ ತಾಲೂಕಿನಲ್ಲಿ ಒಂದು ವಾರದಲ್ಲಿ ಹಸುವಿನ ಹಾಗೂ ಎಮ್ಮೆ ಕರು ಸೇರಿ ಆರು ಜಾನುವಾರುಗಳನ್ನು ತಿಂದು ಹಾಕಿದ ಪ್ರಕರಣ ತಾಲೂಕಿನ ಮದಗುಣಿ ಗ್ರಾಮದಲ್ಲಿ ನಡೆದಿದೆ.

ಇದಲ್ಲದೆ ಚಲಗೇರಾ, ಝಳಕಿ ದರ್ಗಾಶಿರೂರ ಗ್ರಾಮದಲ್ಲಿನ ಕರುಗಳನ್ನು ಅಪರೀಚಿತ ಪ್ರಾಣಿ ತಿಂದುಹಾಕಿದ ಬಗ್ಗೆ ವರದಿಯಾಗಿದೆ.

ಮದಗುಣಿ ಗ್ರಾಮದ ಈರಣ್ಣಾ ರಾಚಪ್ಪ ಸಣ್ಣಮನಿ ಆಕಳು ಕುರು, ಪರಮೇಶ್ವರ ಶಿವಲಿಂಗಪ್ಪ ಮಡವಾಳ ಎಮ್ಮೆ ಕರು, ಸಂಜುಕುಮಾರ ಬೋಜರಾಜ ಸಣ್ಣಮನಿ ಎಮ್ಮೆ ಕರು, ವಿಶ್ವನಾಥ ಶಿವಶರಣಪ್ಪ ವಾಲಿ ಅವರಿಗೆ ಸೇರಿದ ಎಮ್ಮೆ ಕರು, ರಮೇಶ ಆಳಂದ ಆಕಳು ಕರು, ಸುರೇಶ ಕಲ್ಯಾಣಿ ಸಣ್ಣಮನಿ ಆಕಳು ಕರು ಸೇರಿ ಆಕಳು ಮತ್ತು ಎಮ್ಮೆ ಆರು ಕರುಗಳನ್ನು ರಾತ್ರಿ ಹೊತ್ತಿನಲ್ಲಿ ಸಾವನ್ನಪ್ಪಿವೆ. ಅವುಗಳ ದೇಹವೂ ಸಿಗದಂತೆ ತಿಂದು ಹಾಕಲಾಗಿದೆ ಎಂದು ರೈತರು ಹೇಳಿದ್ದಾರೆ.

ನಾಯಿ ಮಾದರಿಯಲ್ಲಿ ಅಥವಾ ತೋಳದ ಮಾದರಿಯಲ್ಲಿ ತಿಂದುಹಾಕುತ್ತಿರುವ ಪ್ರಾಣಿ ಇದೇ ಎಂದು ನೆರೆ ಹೊರೆಯ ರೈತರು ಶಂಕೆವ್ಯಕ್ತಪಡಿಸಿದ್ದಾರೆ. ಘಟನಾ ಸ್ಥಳಕ್ಕೆ ಮಾದನಹಿಪ್ಪರಗಾ ಪಶು ವೈದ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮದಗುಣಕಿ ಗ್ರಾಮದಲ್ಲಿ ಜಾನುವಾರುಗಳ ಮೇಲೆ ರಾತ್ರಿ ಸಮಯದಲ್ಲಿ ಯಾವುದೋ ಪ್ರಾಣಿಯು ದಾಳಿ ಮಾಡಿ ರೈತರ ದನಕರು ತಿಂದು ಹಾಕುತ್ತಿರುವುದು ಭಯದ ವಾತಾವರಣ ಸೃಷ್ಟಿಯಾಗಿದೆ. ಈ ಕೂಕಡಲೇ ಸಂಬಂಧಿತ ಅರಣ್ಯ ಅಧಿಕಾರಿಗಳು ಕ್ರಮ ಜರುಗಿಸಬೇಕು ಎಂದು ನಮ್ಮ ಕರ್ನಾಟನೆ ಸೇನೆ ತಾಲೂಕು ಅಧ್ಯಕ್ಷ ಮಹಾಂತೇಶ ಸಣ್ಣಮನಿ ಅವರು ಒತ್ತಾಯಿಸಿದ್ದಾರೆ.ಕರುಗಳು ತಿಂದುಹಾಕಿರುವ ಬಗ್ಗೆ ಗಮನಕ್ಕೆ ಬಂದಿದೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಪ್ರದೇಶದಲ್ಲಿ ನಿಗಾವಹಿಸಿ ಯಾವ ಪ್ರಾಣಿ ದಾಳಿಮಾಡಿ ಕರುಗಳನ್ನು ತಿಂದುಹಾಕುತ್ತಿದೆ ಎಂಬುದು ಪತ್ತೆ ಹಚ್ಚುವ ಕಾರ್ಯ ಕೈಗೊಳ್ಳಲಾಗುತ್ತಿದೆ.

ರೈತರು ಈ ಕುರಿತು ದಾಳಿ ಮಾಡುತ್ತಿರುವ ಶಂಕಿತ ಕಾಡು ಪ್ರಾಣಿಗಳ ಮಾಹಿತಿ ಗೊತ್ತಾದರೆ ನೀಡುವಂತೆ ಆಗಿರುವ ಜಾನುವಾರು ಹಾನಿಗೆ ನಿಯಮದಂತೆ ಪರಿಹಾರ ಒದಗಿಸಲು ಮೇಲಾಧಿಕಾರಿಗಳಿಗೆ ಮನವಿ ಕಳುಹಿಸಿಕೊಡಲಾಗುತ್ತದೆ ಎಂದು ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ಜಗನಾಥ ಕೊರಳ್ಳಿ ಆಳಂದ ಹೇಳಿದ್ದಾರೆ.