ಕನ್ನಡಪ್ರಭ ವಾರ್ತೆ ಮಡಿಕೇರಿ

ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಮಡಿಕೇರಿ ತಾಲೂಕು ಕೊಂಡಂಗೇರಿ ಗ್ರಾಮಕ್ಕೆ ಶಾಸಕರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ಭೇಟಿ ನೀಡಿದರು.

ಕೊಂಡಂಗೇರಿ ಗ್ರಾಮದಲ್ಲಿ ಶ್ರೀ ದೇವಿ ವೈದ್ಯಕೀಯ ಕೇಂದ್ರದ ವತಿಯಿಂದ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿತ್ತು.

ಶಿಬಿರ ಉದ್ಘಾಟಿಸಿ ಮಾತನಾಡಿದ ಶಾಸಕರು, ಆರೋಗ್ಯವನ್ನು ಕಾಪಾಡಿಕೊಳ್ಳುವುದು ಪ್ರತಿಯೊಬ್ಬ ನಾಗರಿಕರ ಇಂದಿನ ಅವಶ್ಯಕತೆಯಾಗಿದೆ. ಸಮಾಜದ ಬಡ ಜನರಿಗೆ ದುಬಾರಿ ಆಸ್ಪತ್ರೆಗೆ ತೆರಳಿ ವೈದ್ಯಕೀಯ ಚಿಕಿತ್ಸೆ ಹಾಗೂ ತಪಾಸಣೆ ಮಾಡಿಕೊಳ್ಳುವುದು ದುಷ್ಪರ ಎಂದು ಮನಗಂಡು, ಸ್ಥಳೀಯ ಜನರ ಅನುಕೂಲತೆಗೆಂದು ಇಂತಹ ಶಿಬಿರಗಳನ್ನು ಏರ್ಪಡಿಸಲಾಗುತ್ತದೆ. ನಾಗರಿಕರು ಇದರ ಸದುಪಯೋಗವನ್ನು ಪಡೆದುಕೊಂಡು ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಕರೆ ನೀಡಿದರು.

ಪಂಚಾಯಿತಿ ಸದಸ್ಯರು ಅಂದಾಯಿ, ಡಾಕ್ಟರ್ ಅಮೀನ್, ಗ್ರಾಮ ಪಂಚಾಯಿತಿ ಸದಸ್ಯ ಅಂದಾಯಿ, ಮಾಜಿ ಸದಸ್ಯರಾದ ಮೂಸಾನ್ ಕೆ ಎಮ್ ಸಾಧುಲಿ, ನೌಶಾದ್ ಅನಿಫ್ ಮುಂತಾದವರಿದ್ದರು.