ಸಾರಾಂಶ
ಕಮಲನಗರ: ನಿಸ್ವಾರ್ಥ ಸೇವೆ, ದಾಸೋಹಕ್ಕೆ ಶಿವಶರಣೆ ಹೆಮರೆಡ್ಡಿ ಮಲ್ಲಮ್ಮ ಉತ್ತಮ ನಿರ್ದೇಶನ ಎಂದು ವೈದ್ಯಾಧಿಕಾರಿ ಡಾ. ಸಂದೀಪ ಮಾಳಕೆ ಹೇಳಿದರು.ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಶನಿವಾರ ಶಿವಶರಣೆ ಹೆಮರೆಡ್ಡಿ ಮಲ್ಲಮ್ಮ ಅವರ 603ನೇ ಜಯಂತಿ ಉತ್ಸವದ ನಿಮಿತ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಹೇಮರೆಡ್ಡಿ ಮಲ್ಲಮ್ಮ ಸಾಮಾನ್ಯ ವರ್ಗದ ಕುಟುಂಬದಲ್ಲಿ ಜನಿಸಿದರು. ಬಾಲ್ಯದಿಂದಲೂ ಶ್ರೀಶೈಲ ಮಲ್ಲಿಕಾರ್ಜುನ ಸ್ವಾಮಿಯನ್ನು ಆರಾಧಿಸುತಿದ್ದರು ಎಂದರು.ಮಲ್ಲಿಕಾರ್ಜುನನ ಅನುಗ್ರಹದಿಂದ ಆದರ್ಶ ಶರಣೆಯಾಗಿ ರೂಪುಗೊಂಡರು. ಜೀವನದ ಕಡೆಯಲ್ಲಿ ದೇವರನ್ನೆ ಸಾಕ್ಷಾತ್ಕಾರಿಸಿಕೊಂಡರು. ಅವರು ಆಧ್ಯಾತ್ಮಿಕ ಕ್ಷೇತ್ರದ ಧ್ರುವತಾರೆ. ಮಲ್ಲಮ್ಮನ ಜೀವನದ ತತ್ವ, ಚಿಂತನೆಗಳು ಎಲ್ಲರಿಗೂ ಆದರ್ಶನೀಯ ಎಂದರು.ಈ ಸಂದರ್ಭದಲ್ಲಿ ಸಿಬ್ಬಂದಿ ಮಹೇಶ ಶಿಂಧೆ, ಅನಿಲ ಗಾಯಕವಾಡ, ಶಾಮಲಾಬಾಯಿ ಸಂದೀಪ ಮುಂತಾದವರು ಹಾಜರಿದ್ದರು.--ಚಿತ್ರ 10ಬಿಡಿಆರ್51ಕಮಲನಗರ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಶಿವಶರಣೆ ಹೆಮರೆಡ್ಡಿ ಮಲ್ಲಮ್ಮ ಭಾವ ಚಿತ್ರಕ್ಕೆ ವೈದ್ಯಾಧಿಕಾರಿ ಡಾ. ಸಂದೀಪ ಮಾಳಕೆ ಅವರು ಪೂಜೆ ಸಲ್ಲಿಸಿ ಮಾತನಾಡಿದರು.--