ಯುನೆಸ್ಕೋ ವಿಶ್ವ ಪರಂಪರೆ ಪಟ್ಟಿಗೆ ಸೇರಿದ ತಾಣವಾಗಿ ಬೇಲೂರಿನ ಶ್ರೀ ಚನ್ನಕೇಶವ ದೇಗುಲ ಪಾತ್ರವಾಗಿದೆ. ಆದರೆ ದೇಗುಲದ ಮುಂಭಾಗ ಮನಸ್ಸಿಗೆ ಬಂದಂತೆ ಪ್ರವಾಸಿಗರು ಸಾರ್ವಜನಿಕರು ತಮ್ಮ ವಾಹನವನ್ನು ನಿಲುಗಡೆ ಮಾಡಿ ತೆರಳುತ್ತಿದ್ದರು. ಇದರಿಂದ ದೇಗುಲ ಸೌಂದರ್ಯಕ್ಕೆ ಧಕ್ಕೆಯಾಗುತ್ತಿತ್ತು. ಪಾರ್ಕಿಂಗ್ ಗುತ್ತಿಗೆದಾರರು ದೇಗುಲದ ಮುಂಭಾಗಲ್ಲಿ ಸುಂಕ ವಸುಲಾತಿ ಮಾಡುತ್ತಿದ್ದು ಇದರಿಂದ ವಾಹನ ದಟ್ಟಣೆ ಉಂಟಾಗಿ ಪ್ರವಾಸಿಗರು ಭಕ್ತರು ಕಿರಿಕಿರಿ ಅನುಭವಿಸುವಂತಾಗಿತ್ತು. ಜಿಲ್ಲಾಧಿಕಾರಿಗಳ ಆದೇಶದಂತೆ ಶ್ರೀ ಚನ್ನಕೇಶವ ದೇವಾಲಯದ ಮುಂಭಾಗ ಪ್ರವಾಸಿಗರ ಹಾಗೂ ಸಾರ್ವಜನಿಕರ ಎಲ್ಲಾ ರೀತಿಯ ವಾಹನಗಳ ನಿಲುಗಡೆಗೆ ಕಡಿವಾಣ ಹಾಕುವ ನಿರ್ಧಾರ ಸರಿಯಾಗಿದ್ದರೂ, ಈ ಆದೇಶ ಪಾಲನೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವವರು ಯಾರು ಎಂಬುದು ಯಕ್ಷ ಪ್ರಶ್ನೆಯಾಗಿದೆ.
ಕನ್ನಡಪ್ರಭ ವಾರ್ತೆ ಬೇಲೂರು ಜಿಲ್ಲಾಧಿಕಾರಿಗಳ ಆದೇಶದಂತೆ ಶ್ರೀ ಚನ್ನಕೇಶವ ದೇವಾಲಯದ ಮುಂಭಾಗ ಪ್ರವಾಸಿಗರ ಹಾಗೂ ಸಾರ್ವಜನಿಕರ ಎಲ್ಲಾ ರೀತಿಯ ವಾಹನಗಳ ನಿಲುಗಡೆಗೆ ಕಡಿವಾಣ ಹಾಕುವ ನಿರ್ಧಾರ ಸರಿಯಾಗಿದ್ದರೂ, ಈ ಆದೇಶ ಪಾಲನೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವವರು ಯಾರು ಎಂಬುದು ಯಕ್ಷ ಪ್ರಶ್ನೆಯಾಗಿದೆ.ಯುನೆಸ್ಕೋ ವಿಶ್ವ ಪರಂಪರೆ ಪಟ್ಟಿಗೆ ಸೇರಿದ ತಾಣವಾಗಿ ಬೇಲೂರಿನ ಶ್ರೀ ಚನ್ನಕೇಶವ ದೇಗುಲ ಪಾತ್ರವಾಗಿದೆ. ಆದರೆ ದೇಗುಲದ ಮುಂಭಾಗ ಮನಸ್ಸಿಗೆ ಬಂದಂತೆ ಪ್ರವಾಸಿಗರು ಸಾರ್ವಜನಿಕರು ತಮ್ಮ ವಾಹನವನ್ನು ನಿಲುಗಡೆ ಮಾಡಿ ತೆರಳುತ್ತಿದ್ದರು. ಇದರಿಂದ ದೇಗುಲ ಸೌಂದರ್ಯ, ಪ್ರವಾಸಿಗರ ಭದ್ರತೆ ಮತ್ತು ಸಾಂಸ್ಕೃತಿಕ ಶಿಸ್ತಿಗೆ ಧಕ್ಕೆಯಾಗುತ್ತಿತ್ತು. ಪಾರ್ಕಿಂಗ್ ಗುತ್ತಿಗೆದಾರರು ದೇಗುಲದ ಮುಂಭಾಗಲ್ಲಿ ಸುಂಕ ವಸುಲಾತಿ ಮಾಡುತ್ತಿದ್ದು ಇದರಿಂದ ವಾಹನ ದಟ್ಟಣೆ ಉಂಟಾಗಿ ಪ್ರವಾಸಿಗರು ಭಕ್ತರು ಕಿರಿಕಿರಿ ಅನುಭವಿಸುವಂತಾಗಿತ್ತು.ದೇಗುಲ ಸಿಬ್ಬಂದಿ ಪರದಾಟ:
ಶ್ರೀ ಚನ್ನಕೇಶವ ದೇಗುಲ ಮುಂಭಾಗ ವಾಹನ ನಿಲುಗಡೆ ಮಾಡದಂತೆ ಜಿಲ್ಲಾಧಿಕಾರಿಗಳು ಆದೇಶ ಮಾಡುತ್ತಿದ್ದಂತೆ ದೇಗುಲದ ಸಿಬ್ಬಂದಿ ಪ್ರವಾಸಿಗರ ಸಾರ್ವಜನಿಕರ ವಾಹನಗಳನ್ನು ದೇಗುಲ ಹಿಂಭಾಗ ಇರುವ ನಿಲುಗಡೆ ಜಾಗಕ್ಕೆ ಕಳಿಸಲು ಹರಸಹಾಸ ಪಡುತ್ತಿದ್ದರು. ನಾವು ದೇಗುಲಕ್ಕೆ ಬಂದಾಗ ಇಲ್ಲೇ ಪಾರ್ಕಿಂಗ್ ಮಾಡುತ್ತಿದ್ದು ಈಗ ನಿಲ್ಲಿಸಬಾರದು ಎಂದು ಹೇಳಲು ನೀವು ಯಾರು ಎಂದು ಕೆಲ ಪ್ರವಾಸಿಗರು ಧಮ್ಕಿ ಹಾಕುತ್ತಿದ್ದರು. ಸಾಮಾನ್ಯ ವಸ್ತ್ರದಲ್ಲಿರುವ ದೇಗುಲ ಸಿಬ್ಬಂದಿ ದೇಗುಲ ವಾಹನ ಮುಂಭಾಗ ನಿಲುಗಡೆಗೆ ಅಡ್ಡಿಪಡಿಸಿದಾಗ ನೀವು ಯಾರು ನಮಗೆ ಹೇಳಲು ಎಂದು ಕಿಡಿಕಾರುತ್ತಿದ್ದುದು ಕಂಡುಬಂತು. ನಾಮ್‌ಕಾವಸ್ಥೆಯ ಪ್ರವಾಸಿಮಿತ್ರರು :ವಿಶ್ವವಿಖ್ಯಾತ ಶ್ರೀ ಚನ್ನಕೇಶವ ಸ್ವಾಮಿ ದೇಗುಲಕ್ಕೆ ಬರುವ ಪ್ರವಾಸಿಗರು ಹಾಗೂ ಭಕ್ತರಿಗೆ ಸೂಕ್ತ ಮಾರ್ಗದರ್ಶನ ನೀಡಲು ಮತ್ತು ದೇಗುಲದ ಶಿಲ್ಪಕಲೆಗಳ ಬಗ್ಗೆ ತೀವ್ರ ನಿಗಾವಹಿಸಲು ಪ್ರವಾಸೋದ್ಯಮ ಇಲಾಖೆಯಿಂದ '''''''' ಪ್ರವಾಸಿ ಮಿತ್ರರು '''''''' ಎಂಬ ಯೋಜನೆಯಡಿ ನಾಲ್ಕು ಮಂದಿಯನ್ನು ರಕ್ಷಣಾ ಸಿಬ್ಬಂದಿಯಾಗಿ ನೇಮಕ ಮಾಡಲಾಗಿದೆ. ಆದರೆ ಈ ನಾಲ್ಕು ಮಂದಿ ಪ್ರವಾಸಿ ಮಿತ್ರರು ದೇಗುಲಕ್ಕೆ ಭೇಟಿ ನೀಡುವವರಿಗೆ ಯಾವುದೇ ಮಾಹಿತಿ ನೀಡುವುದಿಲ್ಲ ಮತ್ತು ದೇಗುಲದ ಭದ್ರತೆ ಬಗ್ಗೆ ಅಷ್ಟಾಗಿ ಕಾಳಜಿ ವಹಿಸುತ್ತಿಲ್ಲ, ಬೆಳಗ್ಗೆಯಿಂದ ಸಂಜೆವರೆಗೂ ಚೆನ್ನಕೇಶವ , ಪದ್ಮಾವತಿ ಗರ್ಭಗುಡಿಯ ಮುಂದೆಯೇ ನಿಂತು ಕರ್ತವ್ಯ ಮುಗಿಸುತ್ತಿದ್ದಾರೆ ಎಂಬುದಾಗಿ ನಾಗರೀಕರ ಆರೋಪವಾಗಿದೆ.ಪಾರ್ಕಿಂಗ್ ನಿಯಮ ಕಟ್ಟುನಿಟ್ಟಾಗಿ ಪಾಲನೆ ಮಾಡಲಿ:
ವಾಹನ ನಿಲುಗಡೆ ಕಿರಿಕಿರಿ ತಪ್ಪಿಸುವ ನಿಟ್ಟಿನಲ್ಲಿ ಹಾಗೂ ಸಾರ್ವಜನಿಕ ಪ್ರವಾಸಿಗರ ಹಿತದೃಷ್ಟಿಯಿಂದ ಶ್ರೀ ಚನ್ನಕೇಶವ ದೇವಾಲಯದ ಮುಂಭಾಗ ಪ್ರವಾಸಿಗರ ಹಾಗೂ ಸಾರ್ವಜನಿಕರ ಎಲ್ಲಾ ರೀತಿಯ ವಾಹನಗಳ ನಿಲುಗಡೆಯನ್ನು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಲತಾಕುಮಾರಿ ಅವರು ನಿಷೇಧಿಸಿ ಆದೇಶಿಸಿರುವುದು ಸ್ವಾಗತಾರ್ಹ. ಆದರೆ ದೇಗುಲದ ಸಿಬ್ಬಂದಿಯನ್ನು ವಾಹನ ನಿಲುಗಡೆಗೆ ನೇಮಿಸಿರುವುದು ಎಷ್ಟರಮಟ್ಟಿಗೆ ಸರಿ. ಪ್ರವಾಸಿಗರು ಸಾರ್ವಜನಿಕರು ಇವರ ಮಾತಿಗೆ ಬೆಲೆ ಕೊಡುವುದಿಲ್ಲ. ಪ್ರವಾಸೋದ್ಯಮ ಇಲಾಖೆ ನೇಮಿಸಿರುವ ನಾಲ್ಕು ಮಂದಿ ಪ್ರವಾಸಿ ಮಿತ್ರರು ದೇಗುಲದ ಗರ್ಭಗುಡಿಯಲ್ಲಿ ಇರುತ್ತಾರೆ ಎಂಬ ದೂರಿದೆ . ಖಾಕಿ ಸಮವಸ್ತ್ರದಲ್ಲಿರುವ ಪ್ರವಾಸಿ ಮಿತ್ರರನ್ನು ಬಳಸಿಕೊಂಡು ದೇಗುಲ ಹಿಂಭಾಗ ವಾಹನ ನಿಲುಗಡೆ ಆದೇಶವನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಲಿ ಎಂದು ತಾಲೂಕು ಕರವೇ ಪ್ರವೀಣ್ ಶೆಟ್ಟಿ ಬಣದ ಅಧ್ಯಕ್ಷ ವಿ ಎಸ್ ಭೋಜೇಗೌಡ ಆಗ್ರಹಿಸಿದ್ದಾರೆ.