ಎಕ್ಸಿಟ್ ಪೋಲ್ ನಂಬಲ್ಲ ಗೆದ್ದೇ ಗೆಲ್ಲುತ್ತೇವೆ

| Published : Nov 22 2024, 01:15 AM IST

ಸಾರಾಂಶ

ಬಿಪಿಎಲ್, ಎಪಿಎಲ್‌ ಕಾರ್ಡ್‌ಗಳ ಬಗ್ಗೆ ಯಾರೂ ಆತಂಕಪಡುವ ಅವಶ್ಯಕತೆ ಇಲ್ಲ ಎಂದು ಗೃಹಮಂಡಳಿ ಅಧ್ಯಕ್ಷ ಕೆ.ಎಂ.ಶಿವಲಿಂಗೇಗೌಡ ತಿಳಿಸಿದ್ದಾರೆ. ಅರಸೀಕೆರೆಯಲ್ಲಿ ಒಂದು ಲಕ್ಷ ಕುಟುಂಬಗಳಿವೆ, ಆದರೆ ಒಂದು ಲಕ್ಷದ ಹತ್ತು ಸಾವಿರ ಕಾರ್ಡ್‌ಗಳಿವೆ. ಇದೇ ರೀತಿ ರಾಜ್ಯದಲ್ಲಿ ಪರಿಶೀಲನೆ ಮಾಡಿದಾಗ ಗೊತ್ತಾಗಿದೆ. ಟ್ಯಾಕ್ಸ್ ಪೇ ಮಾಡುತ್ತಿರುವವರು, ಸರ್ಕಾರಿ ನೌಕರರು ಇರುವುದು ಗೊತ್ತಾಗಿದೆ. ಐಎ‌ಎಸ್, ಐಪಿಎಸ್ ಅಧಿಕಾರಿಗಳ ಮನೆಗೆ ಬಿಪಿಎಲ್ ಕಾರ್ಡ್ ಹೋಗಿದೆ ಎಂದರು.

ಕನ್ನಡಪ್ರಭ ವಾರ್ತೆ ಹಾಸನ

ಬಿಪಿಎಲ್, ಎಪಿಎಲ್‌ ಕಾರ್ಡ್‌ಗಳ ಬಗ್ಗೆ ಯಾರೂ ಆತಂಕಪಡುವ ಅವಶ್ಯಕತೆ ಇಲ್ಲ ಎಂದು ಗೃಹಮಂಡಳಿ ಅಧ್ಯಕ್ಷ ಕೆ.ಎಂ.ಶಿವಲಿಂಗೇಗೌಡ ತಿಳಿಸಿದ್ದಾರೆ.

ಅರಸೀಕೆರೆಯಲ್ಲಿ ಬಿಪಿಎಲ್ ಕಾರ್ಡ್ ರದ್ದತಿ ವಿಚಾರಕ್ಕೆ ಪ್ರತಿಕ್ರಿಯಿಸಿ, ಕೆಲವು ಜನ ಬಹಳ ವರ್ಷಗಳಿಂದ ಬಿಪಿಎಲ್ ಮಾನದಂಡಗಳನ್ನು ಉಲ್ಲಂಘನೆ ಮಾಡಿ ಬಿಪಿಎಲ್ ಕಾರ್ಡ್ ಪಡೆದಿದ್ದಾರೆ. ಅವರ ಪ್ರಮಾಣ ಜಾಸ್ತಿ ಆಯ್ತು. ಇದೊಂದು ದೊಡ್ಡ ಹಗರಣ, ಸ್ಕ್ಯಾಂಡಲ್ ಇದು. ಅರಸೀಕೆರೆಯಲ್ಲಿ ಒಂದು ಲಕ್ಷ ಕುಟುಂಬಗಳಿವೆ, ಆದರೆ ಒಂದು ಲಕ್ಷದ ಹತ್ತು ಸಾವಿರ ಕಾರ್ಡ್‌ಗಳಿವೆ. ಇದೇ ರೀತಿ ರಾಜ್ಯದಲ್ಲಿ ಪರಿಶೀಲನೆ ಮಾಡಿದಾಗ ಗೊತ್ತಾಗಿದೆ. ಟ್ಯಾಕ್ಸ್ ಪೇ ಮಾಡುತ್ತಿರುವವರು, ಸರ್ಕಾರಿ ನೌಕರರು ಇರುವುದು ಗೊತ್ತಾಗಿದೆ. ಐಎ‌ಎಸ್, ಐಪಿಎಸ್ ಅಧಿಕಾರಿಗಳ ಮನೆಗೆ ಬಿಪಿಎಲ್ ಕಾರ್ಡ್ ಹೋಗಿದೆ. ಬಿಪಿಎಲ್ ಕಾರ್ಡ್‌ದಾರರಿಗೆ ಹೆಚ್ಚಿನ ಸೌಲಭ್ಯ ಕೊಡಲಿ. ಟ್ಯಾಕ್ಸ್ ಕಟ್ಟುವವನು, ಸರ್ಕಾರಿ ನೌಕರನು, ಬಡವರು ಒಂದೇನಾ?. ಬಿಜೆಪಿಯವರು ಏಕೆ ಈ ರೀತಿ ಮುಗಿ ಬೀಳುತ್ತಿದ್ದಾರೆ ಗೊತ್ತಿಲ್ಲ ಎಂದರು.

ಯಾರೇ ಸರ್ಕಾರ ನಡೆಸಲಿ, ಇದು ಅನ್ಯಾಯ ಆಗಿದೆ. ಸ್ಕ್ಯಾಂಡಲ್ ಆಗಿದೆ. ನಿಷ್ಪಕ್ಷಪಾತವಾಗಿ ಅಕ್ರಮ ಕಾರ್ಡ್‌ಗಳನ್ನು ತೆಗೆಯಬೇಕು. ಎಲ್ಲಾ ಪಕ್ಷದವರು ಇದಕ್ಕೆ ಸಹಕಾರ ಕೊಡಬೇಕು. ಬಡವರು ಕಾರ್ಡ್‌ ರದ್ದಾದರೆ ಪ್ರಾಣ ತೆಗೆದುಕೊಳ್ಳುತ್ತೇವೆ. ಶಾಸಕರು ಇನ್ನೂ ಇದ್ದೇವೆ, ನಾವೇನೂ ಅಗಿಲ್ಲ. ಒಬ್ಬ ಬಡವನ ಕಾರ್ಡ್ ರದ್ದಾದರೆ ತಾಲೂಕು ಪಂಚಾಯತ್‌ ಎದುರೇ ನಾವೇ ಮೊಕ್ಕಾಂ ಹಾಕಿ ಕೊಡಿಸುತ್ತೇವೆ. ಐಟಿ ಕಟ್ಟುವವರು ಸರ್ಕಾರಿ ನೌಕರರು ಇದ್ದಾರೆ. ಡಿ ಗ್ರೂಪ್ ನೌಕರರಿಗೆ ಸಾರಾ ಸೆಟ್ ಬಿಪಿಎಲ್ ಕಾರ್ಡ್ ಕೊಡಿ. ಸರ್ಕಾರಿ ನೌಕರರಾದರೂ ಅವರಿಗೆ ಕೊಡಿ, ಅವರು ಪಾಪ ಕಷ್ಟದಲ್ಲಿದ್ದಾರೆ. ಇವತ್ತಿನ ದಿನಗಳಲ್ಲಿ ಅವರಿಗೆ ಸಂಬಳ ಸಾಕಾಗುತ್ತಿಲ್ಲ. ಯಾರ್ಯಾರು ಅರ್ಹರಿದ್ದಾರೆ ಅವರಿಗೆ ಕೊಡಿ. ದೊಡ್ಡ, ದೊಡ್ಡ ಕುಳಗಳೆಲ್ಲಾ ಬಿಪಿಎಲ್‌ ಕಾರ್ಡ್ ತಗೊಂಡ್ರೆ ಹೇಗೆ. ಬ್ಯಾಂಕ್‌ನವರ ತಪ್ಪು ಇದೆ, ಬ್ಯಾಂಕ್‌ನವರು ಯಾರಿಗೆ ಐಟಿ ರಿಟರ್ನ್ ಕೇಳಬೇಕು. ತಿನ್ನಲು ಅನ್ನ ಇರಲ್ಲ ಸಿಬಿಲ್ ಸ್ಕೋರ್‌ ಕೇಳ್ತಾರೆ. ಓಲೆ ಅಡ ಇಡಲು ಹೋದರೆ ಸಿಬಿಲ್ ಸ್ಕೋರ್‌ ಏನು ಕೇಳ್ತಾರೆ. ಈ ಸರ್ಕಾರ ಒಂದು ಹೆಜ್ಜೆ ಮುಂದೆ ಇಟ್ಟಿದೆ. ಕೇಂದ್ರ ಸರ್ಕಾರ ಇದರಲ್ಲಿ ತೊಡಗಿಸಿಕೊಳ್ಳಬೇಕು. ಇಡೀ ಭಾರತ ದೇಶದಲ್ಲಿ ಸ್ವಚ್ಛತೆ ಆಗಬೇಕು. ಬಡವ ಮುಂದೆ ಬರಲು ಸವಲತ್ತು ಕೊಡಬೇಕು. ಶ್ರೀಮಂತರಿಗೆ ಸವಲತ್ತು ಕೊಟ್ಟು ಮುಂದೆ ತರುವುದಲ್ಲ. ಅದಕ್ಕೋಸ್ಕರ ನಡೆಯುತ್ತಿರುವ ಯುದ್ಧ ಇದು. ಇದನ್ನು ಕೆಣಕಿದ್ದಾರೆ, ಪಕ್ಷಾತೀತವಾಗಿ ಸಹಕಾರ ನೀಡಬೇಕು. ಅದು ಅವರ ಕರ್ತವ್ಯ. ನಾಟಕಕ್ಕೋಸ್ಕರ ಇಲ್ಲಸಲ್ಲದ ಹೇಳಿಕೆ ಕೊಡುತ್ತಿದ್ದಾರೆ. ನನ್ನ ಕ್ಷೇತ್ರದಲ್ಲಿ ನಾನು ಒಬ್ಬನೇ ಒಬ್ಬ ಬಡವನಿಗೆ ಒಂದು ಕಾರ್ಡ್ ರದ್ದಾಗದಂತೆ ನೋಡಿಕೊಳ್ಳುತ್ತೇನೆ ಎಂದು ಹೇಳಿದರು.

ಗೆದ್ದೇ ಗೆಲ್ಲುತ್ತೇವೆ: ಎಕ್ಸಿಟ್ ಪೋಲ್ ವಿಚಾರಕ್ಕೆ ಪ್ರತಿಕ್ರಿಯಿಸಿ, ಕಳೆದ ಬಾರಿ ಎಕ್ಸಿಟ್ ಪೋಲ್ ಫೇಲ್ ಆಗಿದ್ದಾವೆ. ಎನ್‌ಡಿಎಗೆ 400 ಸೀಟ್ ಅಂದ್ರು‌ 240 ಬಂದವು. ಇನ್ನೊಂದು ಇಪ್ಪತ್ತು ನೆಗೆದಿದ್ದರೆ ಮೋದಿ ಕಥೆ ಮುಗಿದು ಹೋಗುತ್ತಿತ್ತು. ಇತ್ತೀಚೆಗೆ ಎಕ್ಸಿಟ್ ಪೋಲ್ ಫೇಲ್ ಆಗಿವೆ. ನಾನು ಎಕ್ಸಿಟ್ ಪೋಲ್ ನಂಬಲ್ಲ. ಎರಡು ದಿನದಲ್ಲಿ ರಿಸಲ್ಟ್ ಬರುತ್ತೆ. ಜನ ಏನು ತೀರ್ಪು ಕೊಟ್ಟಿದ್ದಾರೆ ಅದನ್ನು ಒಪ್ಪಿಕೊಳ್ಳಲೇಬೇಕು. ಎಕ್ಸಿಟ್ ಪೋಲ್ ಬಗ್ಗೆ ನನಗೇನು ನಂಬಿಕೆ ಇಲ್ಲ. ಚನ್ನಪಟ್ಟಣದಲ್ಲಿ ಅಲ್ಪ ಮತಗಳಲ್ಲಾಗಲಿ, ಐದರಿಂದ ಹತ್ತು ಸಾವಿರದೊಳಗಾಗಲಿ ನಾವು ಗೆಲ್ತೀವಿ.

ಗೆದ್ದೇ ಗೆಲ್ತೇವೆ ಅನ್ನುವ ಭರವಸೆ ಇದೆ. ನಮ್ಮ ಅಭ್ಯರ್ಥಿ ಯಾವ ಅರ್ಥದಲ್ಲಿ ನಿರಾಶಾದಾಯಕವಾಗಿದ್ದಾರೋ ಗೊತ್ತಿಲ್ಲ. ನಾನು ಆ ಚುನಾವಣೆಯಲ್ಲಿ ಭಾಗವಹಿಸಿದ್ದೇನೆ. ನನ್ನ ಅಭಿಪ್ರಾಯದ ಪ್ರಕಾರ ಜನ ಬಹಳ ಉತ್ಸುಕರಾಗಿದ್ದರು. ನನ್ನ ಪ್ರಕಾರ ಗೆದ್ದೇ ಗೆಲ್ತೀವಿ ಅನ್ನುವ ಭರವಸೆ ಇದೆ.

ಫೊಟೋಗೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಫೋಟೊ ಬಳಸುವುದು.