ಸಾಗಾಣೆ ಮಾಡಲು ತಂದಿದ್ದ ಟಾಟಾ ಏಸ್ ಗಾಡಿ ಹಾಗೂ ಐವತ್ತು ಸಾವಿರ ಮೌಲ್ಯದ ಅಕ್ಕಿ ಮೂಟೆಯನ್ನು ವಶಪಡಿಸಿಕೊಳ್ಳಲಾಗಿದೆ.
ಮಾಲೂರು: ಖಚಿತ ಮಾಹಿತಿ ಮೇರೆಗೆ ಕಾರ್ಯಚರಣೆ ನಡೆಸಿದ ಸ್ಥಳೀಯ ಪೊಲೀಸರು ಪಡಿತರ ಅಕ್ಕಿ ಮೂಟೆಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಒರ್ವನನ್ನು ಬಂಧಿಸಿ ೨ ಟನ್ ಅಕ್ಕಿ ಹಾಗೂ ಟಾಟಾ ಏಸ್ ವಾಹನವನ್ನು ವಶಪಡಿಸಿಕೊಂಡಿದ್ದಾರೆ.
ಪೊಲೀಸ್ ಪೇದೆ ಆಶೋಕ್ ಕುಮಾರ್‌ಗೆ ದೊರೆತ ಮಾಹಿತಿ ಮೇರೆಗೆ ಪಿಎಸೈ ಶಾಂತಮ್ಮ ಹಾಗೂ ಪೇದೆ ರವಿಚಂದ್ರ ದಾಳಿ ನಡೆಸಿ ಹೊಸಕೋಟೆ ಪಟ್ಟಣದ ಗಾಣಿಗರ ಪೇಟೆಯ ನಿವಾಸಿ ಆಶೋಕ್ ನನ್ನು ಬಂಧಿಸಿದ್ದಾರೆ. ಸಾಗಾಣೆ ಮಾಡಲು ತಂದಿದ್ದ ಟಾಟಾ ಏಸ್ ಗಾಡಿ ಹಾಗೂ ಐವತ್ತು ಸಾವಿರ ಮೌಲ್ಯದ ಅಕ್ಕಿ ಮೂಟೆಯನ್ನು ವಶಪಡಿಸಿಕೊಳ್ಳಲಾಗಿದೆ.