ರಾಮೇಶ್ವರ ದೇಗುಲದ ಅಕ್ರಮ ವಾಟರ್‌ ಪ್ಲಾಂಟ್‌ ಸೀಜ್‌

| Published : Aug 13 2024, 12:47 AM IST

ಸಾರಾಂಶ

ಗುಂಡ್ಲುಪೇಟೆ ಪಟ್ಟಣದ ರಾಮೇಶ್ವರ ದೇವಸ್ಥಾನದಲ್ಲಿ ಅಕ್ರಮವಾಗಿ ಆರಂಭಿಸಿದ್ದ ವಾಟರ್‌ ಪ್ಲಾಂಟ್‌ನ್ನು ತಹಸೀಲ್ದಾರ್‌ ಟಿ.ರಮೇಶ್‌ ಬಾಬು ಸೀಜ್‌ ಮಾಡಿದ್ದಾರೆ. ಕನ್ನಡಪ್ರಭ ಪತ್ರಿಕೆ ವರದಿಯಿಂದ ಎಚ್ಚೆತ್ತು ಕ್ರಮ ಕೈಗೊಂಡಿದ್ದಾರೆ.

ಕನ್ನಡಪ್ರಭ ವರದಿ ಪರಿಣಾಮ । ರಾಮೇಶ್ವರ ದೇವಸ್ಥಾನಕ್ಕೆ ತಹಸೀಲ್ದಾರ್‌ ಟಿ.ರಮೇಶ್‌ ಭೇಟಿ

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಪಟ್ಟಣದ ರಾಮೇಶ್ವರ ದೇವಸ್ಥಾನದಲ್ಲಿ ಅಕ್ರಮವಾಗಿ ಆರಂಭಿಸಿದ್ದ ವಾಟರ್‌ ಪ್ಲಾಂಟ್‌ನ್ನು ತಹಸೀಲ್ದಾರ್‌ ಟಿ.ರಮೇಶ್‌ ಬಾಬು ಸೀಜ್‌ ಮಾಡಿದ್ದಾರೆ.

ಆ.12 ರಂದು ಕನ್ನಡಪ್ರಭದಲ್ಲಿ ರಾಮೇಶ್ವರ ದೇಗುಲದಲ್ಲಿ ಅಕ್ರಮ ನೀರಿನ ಘಟಕ ಎಂದು ವರದಿ ಪ್ರಕಟಗೊಂಡ ಹಿನ್ನೆಲೆ ಸೋಮವಾರ ತಹಸೀಲ್ದಾರ್‌ ಟಿ.ರಮೇಶ್‌ ಬಾಬು ರಾಮೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ವಾಟರ್‌ ಪ್ಲಾಂಟ್‌ಗೆ ಸೀಜ್‌ ಮಾಡಿದರು. ರಾಮೇಶ್ವರ ಸೇವಾ ಟ್ರಸ್ಟ್‌ ಕೆಲವರು ಇದು ಮುಜರಾಯಿ ಇಲಾಖೆಗೆ ಸೇರಿದ ದೇವಸ್ಥಾನವಲ್ಲ ಎಂದರು.

ಕನ್ನಡಪ್ರಭದೊಂದಿಗೆ ತಹಸೀಲ್ದಾರ್‌ ಟಿ.ರಮೇಶ್‌ ಬಾಬು ಮಾತನಾಡಿ, ಕೆಆರ್‌ಸಿ ರಸ್ತೆಯ ರಾಮೇಶ್ವರ ದೇವಸ್ಥಾನ ಮುಜರಾಯಿ ಇಲಾಖೆಗೆ ಸೇರಿದೆ ಎಂದು ಟ್ರಸ್ಟ್‌ಗೆ ಹಿಂದೆಯೇ ಹಿಂಬರಹ ನೀಡಿದೆ. ಟ್ರಸ್ಟ್‌ನ ಕೆಲವರು ರಾಮೇಶ್ವರ ದೇವಸ್ಥಾನ ಮುಜರಾಯಿ ಇಲಾಖೆಗೆ ಸೇರಿಲ್ಲ ಎಂದು ವಾಧಿಸಿದರು. ಆಗ ನೋಟಿಫಿಕೇಟ್‌ ಕಳುಹಿಸಿ ಕೊಟ್ಟಿದ್ದೇನೆ ಎಂದು ಸ್ಪಷ್ಪಪಡಿಸಿದರು.

ಕೇಸು ದಾಖಲಿಸಲು ಭಕ್ತರ ಆಗ್ರಹ ಗುಂಡ್ಲುಪೇಟೆ: ಪುರಾತನ ರಾಮೇಶ್ವರ ದೇವಸ್ಥಾನದಲ್ಲಿ ಅಕ್ರಮವಾಗಿ ವಾಟರ್‌ ಪ್ಲಾಂಟ್‌ ನಿರ್ಮಿಸಿದವರ ವಿರುದ್ಧ ತಾಲೂಕು ಆಡಳಿತ ಕೇಸ್‌ ದಾಖಲಿಸಬೇಕು ಎಂದು ಭಕ್ತರು ಆಗ್ರಹಿಸಿದ್ದಾರೆ.

ತಹಸೀಲ್ದಾರ್‌ ಟಿ.ರಮೇಶ್‌ ಬಾಬು ವಾಟರ್‌ ಪ್ಲಾಂಟ್‌ ಸೀಜ್‌ ಮಾಡಿದ್ದಾರೆ ಇದು ಸ್ವಾಗತಾರ್ಹ ಕ್ರಮವಾಗಿದೆ. ಆದರೆ ಮುಜರಾಯಿ ಇಲಾಖೆಗೆ ಸೇರಿದ ದೇವಸ್ಥಾನ ಅತಿಕ್ರಮವಾಗಿ ವಾಟರ್‌ ಪ್ಲಾಂಟ್‌ ಹಾಕಿದವರ ಮೇಲೆ ಎಫ್‌ಐಆರ್‌ ದಾಖಲಿಸಬೇಕು.

-ಎಂ.ಶೈಲಕುಮಾರ್‌, ಕಸಾಪ ಜಿಲ್ಲಾಧ್ಯಕ್ಷ