ಸಾರಾಂಶ
ರಾಮನಗರ: ಡಿಜಿಟಲ್ ತಂತ್ರಜ್ಞಾನ ವಾಹನ ತಯಾರಿಕೆ ಕ್ಷೇತ್ರಕ್ಕೂ ವಿಸ್ತರಣೆಯಾಗಿದೆ. ವಾಹನ ತಯಾರಿಕಾ ಸಂಸ್ಥೆಗಳು ಗ್ರಾಹಕರ ವಾಹನಗಳನ್ನು ಡಿಜಿಟಲ್ ತಂತ್ರಜ್ಞಾನದ ಮೂಲಕ ಗಮನ ಕೇಂದ್ರೀಕರಿಸಿ ತಯಾರಿಕಾ ವ್ಯವಸ್ಥೆಯಲ್ಲಿ ಸುಧಾರಣೆಗಳನ್ನು ಕಂಡುಕೊಳ್ಳುವ ದಿನಗಳು ದೂರವಿಲ್ಲ ಎಂದು ಏರೋಸ್ಪೇಸ್ ಎಂಜಿನಿಯರ್ ಹಾಗೂ ಇಸ್ರೋ ಮಾಜಿ ಅಧ್ಯಕ್ಷ ಡಾ.ಎಸ್.ಸೋಮನಾಥ ಹೇಳಿದರು.
ಬಿಡದಿ ಬಳಿಯ ಟೊಯೋಟಾ ಟೆಕ್ನಿಕಲ್ ಟ್ರೈನಿಂಗ್ ಇನ್ಸ್‌ಸ್ಟಿಟ್ಯೂಟ್ ನಲ್ಲಿ ನಡೆದ 16ನೇ ಘಟಿಕೋತ್ಸವ ಸಮಾರಂಭ ಉದ್ಘಾಟಿಸಿದ ಅವರು, ಡಿಜಿಟಲ್ ತಂತ್ರಜ್ಞಾನಕ್ಕೆ ಪೂರಕವಾಗಿ ಇತ್ತೀಚಿನ ಕಾರುಗಳಲ್ಲಿ ಸೆನ್ಸಾರ್ ವ್ಯವಸ್ಥೆ ಹೆಚ್ಚಾಗಿವೆ ಎಂದರು.ಭಾರತದಲ್ಲಿ ಜಪಾನ್ ರಾಷ್ಟ್ರದ ವಾಹನ ತಯಾರಿಕಾ ಸಂಸ್ಥೆಗಳು ಭಾರತದ ವಾಹನ ತಯಾರಿಕಾ ಕ್ಷೇತ್ರದ ಮೇಲೆ ಪ್ರಭಾವ ಬೀರಿದೆ. ಸುಜುಕಿ ಮೋಟಾರ್ ಸಂಸ್ಥೆ ಮಾರುತಿ ಬ್ರಾಂಡ್‌ನ ವಾಹನಗಳನ್ನು ಭಾರತದಲ್ಲಿ ಉತ್ಪಾದನೆ ಮಾಡಲಾರಂಭಿಸಿದ ನಂತರ ಭಾರತದ ವಾಹನ ಕ್ಷೇತ್ರದಲ್ಲಿ ಅಪಾರ ಬದಲಾವಣೆಗಳಿಗೆ ಕಾರಣವಾಯಿತು ಎಂದು ತಿಳಿಸಿದರು.
ತದನಂತರ ಜಪಾನ್ ಮೂಲಕ ಮತ್ತೊಂಡು ಸಂಸ್ಥೆ ಟೊಯೋಟಾ ಭಾರತದಲ್ಲಿ ವಾಹನಗಳ ತಯಾರಿಕೆ ಆರಂಭಿಸಿ, ಗುಣಮಟ್ಟವನ್ನು ಕಾಯ್ದುಕೊಂಡಿವೆ. ಹೀಗಾಗಿಯೆ ಈ ಸಂಸ್ಥೆಯ ಉತ್ಪನ್ನಗಳು ಹೆಸರು ಗಳಿಸಿವೆ. ಭಾರತದ ಕೈಗಾರಿಕಾ ಕ್ರಾಂತಿಯಲ್ಲೂ ಭಾಗಿಯಾಗಿದೆ ಎಂದರು.ಟೊಯೋಟಾ ಕಿರ್ಲೋಸ್ಕರ್ ವಾಹನ ತಯಾರಿಕಾ ಸಂಸ್ಥೆ ಸ್ಥಾಪಿಸಿರುವ ಟೊಯೋಟಾ ತಾಂತ್ರಿಕ ತರಬೇತಿ ಸಂಸ್ಥೆಯಲ್ಲಿ (ಟಿಟಿಟಿಐ) ತರಬೇತಿ ಪಡೆಯುವ ವಿದ್ಯಾರ್ಥಿಗಳು ವಾಹನ ತಯಾರಿಕೆಯ ವಿವಿಧ ವಿಭಾಗಗಳಲ್ಲಿ ತಾಂತ್ರಿಕ ಕೌಶಲಗಳನ್ನು ರೂಢಿಸಿಕೊಳ್ಳುವುದಲ್ಲದೆ ತಮ್ಮ ಜೀವನದಲ್ಲಿ ಬದಲಾವಣೆಯನ್ನು ಕಂಡುಕೊಳ್ಳುವ ಅನುಭವವನ್ನು ಪಡೆಯುತ್ತಿದ್ದಾರೆ. ಜೀವನದಲ್ಲಿ ಶಿಸ್ತು ಮುಂತಾದ ಗುಣಗಳನ್ನು ರೂಢಿಸಿಕೊಳ್ಳಲು ಶಕ್ತರಾಗುತ್ತಾರೆ ಎಂದು ಹೇಳಿದರು.
ಟಿಟಿಟಿಐನಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಹೆಚ್ಚು ಅವಕಾಶ ಮಾಡಿಕೊಡಲಾಗುತ್ತಿದೆ. ಗ್ರಾಮೀಣ ಪ್ರದೇಶದ ಪ್ರತಿಭೆಗಳಿಗೆ ಅವಕಾಶ ಸಿಗುತ್ತಿದೆ. ಪರೋಕ್ಷವಾಗಿ ಗ್ರಾಮೀಣ ಪ್ರದೇಶದ ಆರ್ಥಿಕತೆಗೂ ಟೊಯೋಟ ಕೊಡುಗೆ ನೀಡುತ್ತಿದೆ. ತಾವು ಗಮನಿಸಿದ ಹಾಗೆ ಟಿಟಿಟಿಐನಲ್ಲಿ ಅತ್ಯಾಧುನಿಕ ಕೌಶಲ ತರಬೇತಿಯನ್ನು ನೀಡುವುದರ ಜೊತೆಗೆ ಪ್ರಕೃತಿ ಸ್ನೇಹಿತಿ ತಾಂತ್ರಿಕತೆಗೆ ಒತ್ತು ನೀಡಲಾಗುತ್ತಿದೆ ಎಂದು ಸೋಮನಾಥ ತಿಳಿಸಿದರು.ಇದೇ ವೇಳೆ ಟಿಟಿಟಿಐ ಕೌಶಲ ತರಬೇತಿ ಪಡೆದ ಸುಮಾರು 200 ವಿದ್ಯಾರ್ಥಿಗಳಿಗೆ ತರಬೇತಿ ಪ್ರಮಾಣ ಪತ್ರಗಳನ್ನು ಡಾ.ಎಸ್.ಸೋಮನಾಥ ಮತ್ತು ಗಣ್ಯರು ವಿತರಿಸಿದರು.
ರಾಜ್ಯದ ವಿವಿಧ ಐಟಿಐ ಸಂಸ್ಥೆಗಳಲ್ಲಿ ಟಿಟಿಟಿಐ ಕೌಶಲ ತರಬೇತಿಯನ್ನು ವಿಸ್ತರಿಸಲು 6 ತಾಂತ್ರಿಕ ತರಬೇತಿ ಸಂಸ್ಥೆಗಳೊಂದಿಗೆ ಮಾಡಿಕೊಂಡಿರುವ ಒಡಂಬಡಿಕೆಯನ್ನು ವಿನಿಮಯ ಮಾಡಿಕೊಳ್ಳಲಾಯಿತು.ಡೆಪ್ಯೂಟಿ ಮೇನೇಜಿಂಗ್ ಡೈರೆಕ್ಟರ್ (ಕಾರ್ಪೋರೇಟ್ ಡಿವಿಜನ್) ಸ್ಪಪ್ನೇಶ್ ಆರ್ ಮಾರು, ಟೊಯೋಟಾ ಸ್ಕಿಲ್ಸ್ ಅಕಾಡೆಮಿಯ ಅಧ್ಯಕ್ಷ ಯೊಶಿರೊ ತಹ್ಯಾಮ್, ತಡಾಸಿ ಅಸಾಜೋವಾ, ಟೊಯೋಟಾ ಕಿರ್ಲೋಸ್ಕರ್ ಮೋಟಾರ್‌ನ ಹಣಕಾಸು ಮತ್ತು ಆಡಳಿತ ವಿಭಾಗದ ಉಪಾಧ್ಯಕ್ಷ ಜಿ.ಶಂಕರ್ ಉಪಸ್ಥಿತರಿದ್ದರು.(ಈ ಕೋಟ್ ಮೇಲೆ ಪ್ಯಾನಲ್ಲೂ ಬಳಸಬಹುದು)
ಕೋಟ್ .................ಭವಿಷ್ಯದಲ್ಲಿ ಇಸ್ರೋ ಚಂದ್ರಯಾನ 5 ಯೋಜನೆಯನ್ನು ಕೈಗೆತ್ತಿಕೊಳ್ಳುತ್ತಿದೆ. ಆ ಯೋಜನೆಗಾಗಿ ಜಪಾನ್ ರಾಷ್ಟ್ರದ ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಳ್ಳುತ್ತಿದೆ.
- ಡಾ.ಎಸ್.ಸೋಮನಾಥ, ಮಾಜಿ ಅಧ್ಯಕ್ಷರು, ಇಸ್ರೋ.6ಕೆಆರ್ ಎಂಎನ್ 2.ಜೆಪಿಜಿ
ಬಿಡದಿ ಬಳಿಯ ಟೊಯೋಟಾ ಟೆಕ್ನಿಕಲ್ ಟ್ರೈನಿಂಗ್ ಇನ್ಸ್ಟಿಟ್ಯೂಟ್ ನಲ್ಲಿ ಬುಧವಾರ ನಡೆದ 16ನೇ ಘಟಿಕೋತ್ಸವ ಸಮಾರಂಭದಲ್ಲಿ ಇಸ್ರೋ ಮಾಜಿ ಅಧ್ಯಕ್ಷ ಡಾ.ಎಸ್.ಸೋಮನಾಥ ಅವರನ್ನು ಸನ್ಮಾನಿಸಲಾಯಿತು.