ಸಾರಾಂಶ
ಜಮ್ಮು- ಕಾಶ್ಮೀರದಲ್ಲಿ ಪದೇ ಪದೇ ಉಗ್ರಗಾಮಿಗಳಿಂದ ಹಿಂದೂಗಳ ಮೇಲೆ ದಾಳಿಗಳು ನಡೆಯುತ್ತಲೇ ಇವೆ.
ಕನ್ನಡಪ್ರಭ ವಾರ್ತೆ ಮೈಸೂರು
ಜಮ್ಮು ಕಾಶ್ಮೀರದ ಪಹಲ್ಗಾಮ್ ನಲ್ಲಿ ಭಯೋತ್ಪಾದಕರು ಹಿಂದೂ ಪ್ರವಾಸಿಗರ ಮೇಲೆ ನಡೆಸಿರುವ ಹತ್ಯಾಕಾಂಡ ಖಂಡಿಸಿ ಕರ್ನಾಟಕ ಸೇನಾ ಪಡೆಯವರು ಕಪ್ಪು ಪಟ್ಟಿ ಧರಿಸಿ ನಗರದ ಹಳೆ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಸೋಮವಾರ ಪ್ರತಿಭಟಿಸಿದರು.ಜಮ್ಮು- ಕಾಶ್ಮೀರದಲ್ಲಿ ಪದೇ ಪದೇ ಉಗ್ರಗಾಮಿಗಳಿಂದ ಹಿಂದೂಗಳ ಮೇಲೆ ದಾಳಿಗಳು ನಡೆಯುತ್ತಲೇ ಇವೆ. ಇದನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿ, ಉಗ್ರಗಾಮಿಗಳು ಯಾವುದೇ ಬಿಲದಲ್ಲಿ ಅಡಗಿ ಕುಳಿತಿದ್ದರೂ ಅವರನ್ನು ನಿರ್ನಾಮ ಮಾಡಬೇಕು. ಮತ್ತೊಮ್ಮೆ ಯಾವ ಉಗ್ರರು ನಮ್ಮ ದೇಶದೊಳಗೆ ನುಸುಳದಂತೆ, ಇಂತಹ ಘಟನೆಗಳು ಮರುಕಳಿಸದಂತೆ ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಕ್ರಮವಹಿಸಬೇಕು ಎಂದು ಅವರು ಒತ್ತಾಯಿಸಿದರು.
ಪ್ರಪಂಚದಲ್ಲಿ ಕ್ರೈಸ್ತರಿಗೆ ನೂರಾರು ದೇಶಗಳಿವೆ. ಹಾಗೆಯೇ ಮುಸ್ಲಿಮರಿಗೂ ಹಲವಾರು ದೇಶಗಳಿವೆ. ಆದರೆ, ಹಿಂದೂಗಳಿಗೆ ಇರುವುದೊಂದೇ ದೇಶ ಭಾರತ. ಪ್ರಧಾನಿ ಮೋದಿ ಈ ಕೂಡಲೇ ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಘೋಷಿಸಬೇಕು ಎಂದು ಅವರು ಒತ್ತಾಯಿಸಿದರು.ಸೇನಾಪಡೆಯ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ, ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ರಾಜ್ಯಾಧ್ಯಕ್ಷ ಸಿ.ಜಿ. ಗಂಗಾಧರ್, ಮುಖಂಡರಾದ ಲತಾ ರಂಗನಾಥ್, ಗೋವಿಂದೇಗೌಡ, ಶಿವಲಿಂಗಯ್ಯ, ಚರಣ್ ರಾಜ್, ಮಂಜುನಾಥ್, ಲಿಂಗಪ್ಪ, ಪ್ರಭುಶಂಕರ, ನೇಹಾ, ಕೆ.ಪಿ. ನಾಗಣ್ಣ, ಮಧುವನ ಚಂದ್ರು, ಯಶ್ವಂತ್, ಪದ್ಮಾ, ರಘುರಾಂ, ಸುಶೀಲಾ ನಂಜಪ್ಪ, ಭಾಗ್ಯಮ್ಮ, ಜಗದೀಶ್, ದೀಪಕ್ ಗೌಡ, ಶಿಲ್ಪಾ, ಪ್ರಮೀಳಾ, ಸಿದ್ದೇಗೌಡ, ಪ್ರಜೀಶ್, ಹನುಮಂತಯ್ಯ, ತ್ಯಾಗರಾಜ್, ಕುಮಾರ್, ರವೀಶ್, ನಾಗರಾಜು ಮೊದಲಾದವರು ಇದ್ದರು.