ಹೈ ಮಾಸ್ಕ್ ಸೋಲಾರ್ ದೀಪ ಲೋಕಾರ್ಪಣೆ

| Published : Feb 14 2025, 12:32 AM IST

ಸಾರಾಂಶ

ಪಂಚಾಯಿತಿ ವ್ಯಾಪ್ತಿಯ ಮಾರುಕಟ್ಟೆಯ ಬಳಿ ನೂತನವಾಗಿ ಅಳವಡಿಸಿರುವ ಹೈ ಮಾಸ್ಕ್‌ ಸೋಲಾರ್‌ ದೀಪವನ್ನು ಶಾಸಕ ಎ.ಎಸ್‌. ಪೊನ್ನಣ್ಣ ಲೋಕಾರ್ಪಣೆ ಮಾಡಿದರು.

ಕನ್ನಡಪ್ರಭ ವಾರ್ತೆ ನಾಪೋಕ್ಲು

ಪಂಚಾಯಿತಿ ವ್ಯಾಪ್ತಿಯ ಮಾರುಕಟ್ಟೆ ಬಳಿ ನೂತನವಾಗಿ ಅಳವಡಿಸಿರುವ ಹೈ ಮಾಸ್ಕ್ ಸೋಲಾರ್ ದೀಪವನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಶಾಸಕ ಎ ಎಸ್ ಪೊನ್ನಣ್ಣ ಮಂಗಳವಾರ ಸಂಜೆ ಲೋಕಾರ್ಪಣೆ ಮಾಡಿದರು.

ಈ ಭಾಗದಲ್ಲಿ, ಹಲವು ಕಾಲದಿಂದ ರಾತ್ರಿ ಹೊತ್ತು ಸಂಚಾರಕ್ಕೆ ತೊಂದರೆಯಾಗುತ್ತಿದ್ದು, ಇದನ್ನು ಗಮನಿಸಿ ಪಂಚಾಯಿತಿ ವತಿಯಿಂದ ಮೂರು ಲಕ್ಷ ರು. ವೆಚ್ಚದಲ್ಲಿ 3 ಹೈ ಮಾಸ್ಕ್ ಸೋಲಾರ್ ದೀಪ ವ್ಯವಸ್ಥೆ ಕಲ್ಪಿಸಿರುವುದು ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

ಈ ಸಂದರ್ಭ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವನಜಾಕ್ಷಿ ರೇಣುಕೇಶ್, ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎ.ಇಸ್ಮಾಯಿಲ್ , ಕಾಂಗ್ರೆಸ್ ವಲಯ ಅಧ್ಯಕ್ಷರಾದ ಮಾಚೇಟಿರ ಕುಸು ಕುಶಾಲಪ್ಪ, ಕಾಂಗ್ರೆಸ್ ಪ್ರಮುಖ ಬಿದ್ದಾತಂಡ ತಮ್ಮಯ್ಯ, ಸದಸ್ಯರಾದ ಕುಲ್ಲೇಟಿರ ಅರುಣ್ ಬೇಬ, ಹೇಮಾ ಅರುಣ್, ಬಿ ಆರ್ ಗಂಗಮ್ಮ ನಾಯಕಂಡ ಕುಞ್ಞಣ್ಣ, ಎಲ್ತಂಡ ಶಾಂತಿ ಸೇರಿದಂತೆ ಇನ್ನಿತರರು ಹಾಜರಿದ್ದರು.