ಕುಶಾಲನಗರ: ಕುಶಾಲನಗರ ಕೊಪ್ಪ ಗಡಿ ಭಾಗದ ಕಾವೇರಿ ಸೇತುವೆ ಬಳಿ ಕುಶಾಲನಗರ ಪುರಸಭೆ ವತಿಯಿಂದ ಹೈ ಮಾಸ್ಟ್ ವಿದ್ಯುತ್ ದೀಪಗಳ ಗೋಪುರಕ್ಕೆ ಕುಶಾಲನಗರ ಪುರಸಭೆ ಮುಖ್ಯಾಧಿಕಾರಿ ಟಿ.ಎಸ್. ಗಿರೀಶ್ ಚಾಲನೆ ನೀಡಿದರು.
ಅರಣ್ಯ ತಪಾಸಣಾ ಗೇಟ್ ಬಳಿ ನಿರ್ಮಾಣಗೊಂಡ ಹೈಮಾಸ್ಟ್ ಗೋಪುರದ ದೀಪಗಳು ಕೆಟ್ಟು ನಿಂತಿದ್ದು, ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿಯ ಮನವಿ ಮೇರೆಗೆ ಗೋಪುರವನ್ನು ಸ್ಥಳಾಂತರಗೊಳಿಸಿ ನಿರ್ವಹಣೆ ಮಾಡುವ ಮೂಲಕ ಜಿಲ್ಲೆಯ ಗಡಿ ಭಾಗದಲ್ಲಿ ಅರಣ್ಯ ತಪಾಸಣಾ ಕೇಂದ್ರದ ಸಿಬ್ಬಂದಿಗೆ ಹಾಗೂ ಕಾವೇರಿ ನದಿ ಹಳೆಯ ಸೇತುವೆ ಮೇಲೆ ನಿರ್ಮಾಣಗೊಂಡಿರುವ ಕಾವೇರಿ ರೋಟರಿ ಉದ್ಯಾನವನಕ್ಕೆ ರಾತ್ರಿ ವೇಳೆ ಹೆಚ್ಚಿನ ಬೆಳಕು ಕಲ್ಪಿಸುವಲ್ಲಿ ಸಹಕಾರಿಯಾಗಿದೆ ಎಂದು ಮುಖ್ಯ ಅಧಿಕಾರಿ ಗಿರೀಶ್ ತಿಳಿಸಿದರು.ಈ ಸಂದರ್ಭ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಂಚಾಲಕ ಎಂ.ಎನ್. ಚಂದ್ರಮೋಹನ್, ರೋಟರಿ ಸಂಸ್ಥೆ ಪ್ರಮುಖರಾದ ಉಲ್ಲಾಸ್, ಕೃಜ್ವೆಲ್ ಕೋಟ್ಸ್ ಅರಣ್ಯ ಇಲಾಖೆಯ ಸಾಯಬಾನ್ ತಳವಾರ್, ಗುತ್ತಿಗೆದಾರ ಚಂದ್ರು ಮತ್ತಿತರರು ಇದ್ದರು.