ಗಾಣಿಗ ಅಭಿವೃದ್ಧಿ ಮಂಡಳಿಗೆ ಅನುದಾನ ಹೆಚ್ಚಿಸಿ

| Published : Aug 21 2024, 12:31 AM IST

ಸಾರಾಂಶ

ಗಾಣಿಗ ಸಮುದಾಯವು ಬಹಳ ಹಿಂದಿನ ಕಾಲದಿಂದಲೂ ಗಾಣದಲ್ಲಿ ಎಣ್ಣೆ ತೆಗೆದು ಎಣ್ಣೆಯನ್ನು ಮಾರಾಟ ಮಾಡುವುದರ ಮೂಲಕ ತಮ್ಮ ಜೀವನ ಸಾಗಿಸುತ್ತಿದ್ದರು ಆದರೆ ಆಧುನಿಕತೆ ಹೆಚ್ಚಿದಂತೆ ಇತ್ತೀಚಿನ ದಿನಗಳಲ್ಲಿ ಗಾಣಗಳು ಮರೆಯಾಗುತ್ತಿದೆ

ಕನ್ನಡಪ್ರಭ ವಾರ್ತೆ ಮಾಲೂರು

ಸಮಾಜದಲ್ಲಿ ಹಿಂದುಳಿದ ವರ್ಗಗಳ ಅತಿ ಸೂಕ್ಷ್ಮ ಜಾತಿಗಳಲ್ಲಿ ಒಂದಾದ ಗಾಣಿಗ ಸಮುದಾಯದ ಸಂಘದ ಸದಸ್ಯರು ಒಗ್ಗಟ್ಟಾಗಿ ಸಮಾಜದ ಸಮಸ್ಯೆಗಳಿಗೆ ಸ್ಪಂದಿಸಿ ಸರ್ಕಾರದಿಂದ ಸಿಗುವ ಸವಲತ್ತುಗಳ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ಗಾಣಿಗ ಸಮಾಜವನ್ನು ಕಟ್ಟುವ ಕೆಲಸ ಮಾಡಲಾಗುವುದು ಎಂದು ತಾಲೂಕು ಗಾಣಿಗರ ಸಂಘದ ಅಧ್ಯಕ್ಷ ಎಸ್.ಎಂ.ರಮೇಶ್ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲೂಕು ಗಾಣಿಗರ ಸಂಘದ ಸಭೆಯಲ್ಲಿ ಮಾತನಾಡಿದ ಅವರು, ನಮ್ಮ ಸಮುದಾಯವು ಬಹಳ ಹಿಂದಿನ ಕಾಲದಿಂದಲೂ ಗಾಣದಲ್ಲಿ ಎಣ್ಣೆ ತೆಗೆದು ಎಣ್ಣೆಯನ್ನು ಮಾರಾಟ ಮಾಡುವುದರ ಮೂಲಕ ತಮ್ಮ ಜೀವನ ಸಾಗಿಸುತ್ತಿದ್ದರು ಆದರೆ ಆಧುನಿಕತೆ ಹೆಚ್ಚಿದಂತೆ ಇತ್ತೀಚಿನ ದಿನಗಳಲ್ಲಿ ಗಾಣಗಳು ಮರೆಯಾಗುತ್ತಿದೆ ಎಂದರು.

ನಿಮಗಮಕ್ಕೆ ಹಣದ ಕೊರತೆ

ನಮ್ಮ ಸಮಾಜದ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ದೇವರಾಜ್ ಅರಸ ಅಭಿವೃದ್ಧಿ ನಿಗಮ ಮಂಡಳಿ ಹಲವು ರೀತಿಯ ಸವಲತ್ತುಗಳನ್ನು ಒದಗಿಸಿದೆ. ಆದರೆ ಅದು ಸಾಕಾಗುತ್ತಿಲ್ಲ. ಈ ನಿಟ್ಟಿನಲ್ಲಿ ಬಿಜೆಪಿ ಸರ್ಕಾರ ಗಾಣಿಗ ಅಭಿವೃದ್ಧಿ ನಿಗಮ ಮಂಡಲ ಸ್ಥಾಪನೆ ಮಾಡಿದ್ದಷ್ಟೇ ಸರಿ ಆದರೆ ಸಮರ್ಪಕವಾದ ಅನುದಾನ ನೀಡಿ ನಿಗಮ ಮಂಡಳಿಗೆ ಜೀವ ತುಂಬಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಮುದಾಯದ ದಾನಿಗಳು ಹಾಗೂ ಸಂಘದ ಸದಸ್ಯರುಗಳ ಸಹಕಾರದಿಂದ ಸೆಪ್ಟೆಂಬರ್ ಮೊದಲ ವಾರದಲ್ಲಿ ಗಾಣಿಗರ ಸಮಾವೇಶ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಸಹ ಹಮ್ಮಿಕೊಳ್ಳಲಾಗಿದೆ ಎಂದರು.

ಈ ಸಂದರ್ಭದಲ್ಲಿ ತಾಲೂಕು ಗಾಣಿಗರ ಸಂಘದ ಉಪಾಧ್ಯಕ್ಷ ವೆಂಕಟಸ್ವಾಮಿ, ಪ್ರಧಾನ ಕಾರ್ಯದರ್ಶಿ ಜಿ ಸುರೇಶ್, ಖಜಾಂಚಿ ವಿಎನ್ ಮೂರ್ತಿ, ಕಾರ್ಯದರ್ಶಿ ಎಸ್ ನಾರಾಯಣಸ್ವಾಮಿ, ಸಂಚಾಲಕರಾದ ವಿ ಮಂಜುನಾಥ್, ಎ ಎನ್ ಮಂಜುನಾಥ್, ಸದಸ್ಯರುಗಳಾದ ಮರಿಯಪ್ಪ, ಜಿ ಜಿ ಶ್ರೀನಿವಾಸ್, ಮುನಿಕೃಷ್ಣಪ್ಪ, ಗುರಪ್ಪ, ಇನ್ನಿತರರು ಹಾಜರಿದ್ದರು,