ಮಂಗಳೂರು: ಅಯೋಧ್ಯೆಯ ಶ್ರೀರಾಮ ಮಂದಿರದ ಕಾಣಿಕೆ ಹಣ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ, ಪ್ರಜಾಪ್ರಭುತ್ವದ ದೇಗುಲವೆನಿಸಿಕೊಂಡ ಸಂಸತ್ ಆವರಣದಲ್ಲಿ ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ನಡೆಸಿದ ಪ್ರತಿಭಟನೆ ಹಿಂದೂ ವಿರೋಧಿ ಮನಸ್ಥಿತಿಯನ್ನು ಹೊರಹಾಕಿದೆ ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಭಾರತೀಯ ಪರಂಪರೆಯನ್ನು ಅವಮಾನಿಸುವುದು, ಸಂತ ಶ್ರೇಷ್ಠರನ್ನು ಅಪಹಾಸ್ಯ ಮಾಡುವುದು, ಹಿಂದು ಧಾರ್ಮಿಕ ನಂಬಿಕೆಗಳಿಗೆ ಧಕ್ಕೆಯುಂಟು ಮಾಡುವುದು ಇವೆಲ್ಲಾ ಕಾಂಗ್ರೆಸ್ ನಂತಹ ಬೂಟಾಟಿಕೆಯ ಸೆಕ್ಯುಲರ್ ಪಕ್ಷಕ್ಕೆ ರಕ್ತದಲ್ಲೇ ಬಂದಿದೆ. ರಾಹುಲ್ ಗಾಂಧಿಯ ವರ್ತನೆಯಂತೂ ಇನ್ನೂ ಮಂದ ಬುದ್ಧಿ ಹೋಗಿಲ್ಲ ಎಂಬುದನ್ನು ತೋರಿಸುತ್ತಿದೆ. ಕಾಂಗ್ರೆಸಿಗರಿಗೆ ಹಿಂದೂ ಧರ್ಮವೆಂದರೆ ಅಸಡ್ಡೆಯಿರಬಹುದು, ಆದರೆ ನಮಗೆ ಅದು ಪರಮ ಪವಿತ್ರ. ಕೂಡಲೇ ಅವರೆಲ್ಲರೂ ಸಮಸ್ತ ಹಿಂದೂ ಸಮಾಜದ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು.ಇತರ ಮತಗಳ ಧಾರ್ಮಿಕ ಸಂಸ್ಥೆಗಳಲ್ಲೂ ಅವ್ಯವಹಾರ ನಡೆದಿರುವ ಅನೇಕ ಉದಾಹರಣೆಗಳಿವೆ. ಆಗ ಅವರ ಧಾರ್ಮಿಕ ಗುರುಗಳ ವೇಷ ಧರಿಸಿ ವ್ಯಂಗ್ಯವಾಡುವ ಧೈರ್ಯ ಕಾಂಗ್ರೆಸ್ ಹಾಗೂ ಮಿತ್ರಪಕ್ಷಕ್ಕೆ ಯಾಕಿರಲಿಲ್ಲ? ಹಿಂದೂ ಸಮಾಜದ ತಾಳ್ಮೆ ದೌರ್ಬಲ್ಯವಲ್ಲ ಎಂಬುದನ್ನು ಕಾಂಗ್ರೆಸ್ ನೆನಪಿಟ್ಟುಕೊಳ್ಳಲಿ. ಇಂತಹ ಹಿಂದೂ ವಿರೋಧಿ ನೀತಿಯಿಂದಲೇ ದೇಶಾದ್ಯಂತ ನಿರ್ನಾಮವಾಗುತ್ತಿರುವ ಕಾಂಗ್ರೆಸ್ ಕೆಲವೇ ವರ್ಷಗಳಲ್ಲಿ ಇತಿಹಾಸದ ಪುಟ ಸೇರಿದರೂ ಅಚ್ಚರಿಯಿಲ್ಲ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸಂಸತ್ ಬಳಿ ಸನಾತನ ಪರಂಪರೆಗೆ ಅವಮಾನ: ಶಾಸಕ ಕಾಮತ್ ಖಂಡನೆ
ಅಯೋಧ್ಯೆಯ ಶ್ರೀರಾಮ ಮಂದಿರದ ಕಾಣಿಕೆ ಹಣ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ, ಪ್ರಜಾಪ್ರಭುತ್ವದ ದೇಗುಲವೆನಿಸಿಕೊಂಡ ಸಂಸತ್ ಆವರಣದಲ್ಲಿ ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ನಡೆಸಿದ ಪ್ರತಿಭಟನೆ ಹಿಂದೂ ವಿರೋಧಿ ಮನಸ್ಥಿತಿಯನ್ನು ಹೊರಹಾಕಿದೆ ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.