ಸಾರಾಂಶ
ಖಾತೆ ಅದಾಲತ್ ಮಾಡುವ ಮೂಲಕ ನೇರವಾಗಿ ಫಲಾನುಭವಿಗೆ ವಿತರಣೆ ಮಾಡಬೇಕು. ಇದೊಂದು ಇಳ್ಳೆಯ ಪದ್ದತಿ. ಮಧ್ಯವರ್ತಿಗಳಿಗೆ ಕಡಿವಾಣ ಹಾಕಿದಂತಾಗುತ್ತದೆ. ನೇರವಾಗಿ ಅರ್ಜಿ ಸಲ್ಲಸಬಹುದು. 45 ದಿನಗಳೊಳಗೆ ಖಾತೆಗಳು ಸಿದ್ದವಾಗುತ್ತವೆ.
ಕನ್ನಡಪ್ರಭ ವಾರ್ತೆ ಗೌರಿಬಿದನೂರು
ನಗರಸಭೆಯಲ್ಲಿ ಇ ಖಾತೆ ಮಾಡಿಸಿಕೊಡಲು ದಳ್ಳಾಳಿಗಳ ಹಾವಳಿ ವಿಪರೀತವಾಗಿದೆ ಎಂಬ ದೂರುಗಳು ವ್ಯಾಪಕವಾಗಿ ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ, ದಳ್ಳಾಳಿಗಳ ಹಾವಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ನಗರಸಭೆ ಆಯುಕ್ತರಿಗೆ ಹಾಗೂ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದ್ದೇನೆ ಎಂದು ಶಾಸಕ ಕೆಎಚ್.ಪುಟ್ಟಸ್ವಾಮಿಗೌಡರು ತಿಳಿಸಿದರು.ನಗರಸಭೆಯಲ್ಲಿ ಹಮ್ಮಿಕೊಂಡಿದ್ದ ಇ-ಸ್ವತ್ತು ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಗರದ ಸಾರ್ವಜನಿಕರಿಗೆ ಸಕಾಲಕ್ಕೆ ಸರಿಯಾಗಿ ಖಾತೆಗಳು ಹಾಗು ನಗರಸಭೆಯಲ್ಲಿ ಕೆಲಸಗಳು ಅಗಬೇಕು. ಸಾರ್ವಜನಿಕರು ನೀಡುವ ಅರ್ಜಿಗಳಿಗೆ ಇಂತಿಷ್ಟು ಕಾಲಾವಕಾಶ ಎಂದು ಕಡ್ಡಾಯವಾಗಿ ಹಿಂಬರಹವನ್ನು ನೀಡಬೇಕು ಎಂದರು.ಮಧ್ಯವರ್ತಿಗೆ ಅವಕಾಶ ಬೇಡ
ಅಗತ್ಯ ದಾಖಲೆಗಳ ಬಗ್ಗೆ ಅರ್ಜಿದಾರರಿಗೆ ಅಧಿಕಾರಿಗಳು ಮಾಹಿತಿ ನೀಡಬೇಕು. ಯಾವುದೇ ಕಾರಣಕ್ಕೂ ಖಾತೆ ವಿಚಾರವಾಗಿ ಮಧ್ಯವರ್ತಿಗಳಿಗೆ ಅವಕಾಶ ನೀಡಬಾರದು. ಅರ್ಹ ಫಲಾನುಭವಿಗಳೇ ನೇರವಾಗಿ ಕಛೇರಿ ಅಥವಾ ಆನ್ ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು ಎಂದು ಸಾರ್ವಜನಿಕರಿಗೆ ಸಲಹೆ ನೀಡಿದರು.ಅದಾಲತ್ ಮೂಲಕ ವಿತರಿಸಿ
, ಈ ಹಿನ್ನೆಲೆಯಲ್ಲು ಖಾತೆ ಅದಾಲತ್ ಮಾಡುವ ಮೂಲಕ ನೇರವಾಗಿ ಫಲಾನುಭವಿಗೆ ವಿತರಣೆ ಮಾಡಬೇಕೆಂದು ಸೂಚನೆ ನೀಡಿದ್ದೇನೆ. ಆ ಸೂಚನೆಯಂತೆ ಆಯುಕ್ತರು ಕೆಲಸ ಮಾಡುತ್ತಿದ್ದಾರೆ. ಇದೊಂದು ಇಳ್ಳೆಯ ಪದ್ದತಿ ಮಧ್ಯವರ್ತಿಗಳಿಗೆ ಕಡಿವಾನ ಹಾಕಿದಂತಾಗುತ್ತದೆ. ಫಲಾನುಭವಿಗಳು ನೇರವಾಗಿ ಬಂದು ಅರ್ಜಿ ಸಲ್ಲಸಬಹುದು. 45 ದಿನಗಳೊಳಗೆ ಅಣತರ್ಜಾಲದ ಮೂಲಕ ಖಾತೆಗಳು ಸಿದ್ದವಾಗುತ್ತದೆ ಎಂದ ಶಾಸಕರು ಹೇಳಿದರು.ಅಧಿಕಾರಿಗಳು ಖಾತೆಹೆ ಸಂಬಂಧಪಟ್ಟಂತೆ ಅರ್ಜಿದಾರರಿಂದ ಹಣ ಪಡೆಯುವ ವಿಷಯ ಕೇಳಿಬಂದಲ್ಲಿ ಅಮಾನತುಗೊಳಿಸಲು ಶಿಫಾರಸ್ಸು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ ಶಾಸಕರು, ಸುಮಾರು ಎಂಬತ್ತಕ್ಕೂ ಹೆಚ್ಚು ಇ-ಖಾತೆಗಳನ್ನು ಸಾರ್ವಜನಿಕರಿಗೆ ವಿತರಿಸಿದರು.
ಈ ಸಂಧರ್ಭದಲ್ಲಿ ನಗರಸಭೆ ಆಯುಕ್ತೆ ಗೀತಾ, ನರಗಸಭೆ ಸಿಬ್ಬಂಧಿ ಹೇಮಚಂದ್ರ, ಎಂ.ಸಿ.ನಾರಾಯಣಪ್ಪ, ನಗರಸಭೆ ಮಾಜಿ ಅಧ್ಯಕ್ಷ ಎಂ.ನರಸಿಂಹಮೂರ್ತಿ, ನಗರಸಭೆ ಸದಸ್ಯರಾದ ಪುಣ್ಯವತಿ ಜಯಣ್ಣ, ಹಾಗೂ ಇನ್ನಿತರರು ಉಪಸ್ಥಿತರಿದ್ದರು.