ಸಾರಾಂಶ
ವೀರಯೋಧರು ತಮ್ಮ ತ್ಯಾಗ ಬಲಿದಾನದಿಂದ ದೇಶದ ರಕ್ಷಣೆ ಮಾಡುತ್ತಿರುವರು.
ಗದಗ: ನಮ್ಮ ದೇಶದ ಸೈನಿಕರಿಗೆ ಧೈರ್ಯ ತುಂಬುವುದು ಹಾಗೂ ಅವರ ಸಾಹಸವನ್ನು ಮೆಚ್ಚುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ತೋಟಪ್ಪ(ರಾಜು) ಕುರುಡಗಿ ಹೇಳಿದರು.
ನಗರದಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ 26ನೇ ಕಾರ್ಗಿಲ್ ವಿಜಯೋತ್ಸವದ ಅಂಗವಾಗಿ ಕಾರ್ಗಿಲ್ ಯುದ್ಧದಲ್ಲಿ ಪಾಲ್ಗೊಂಡು ನಿವೃತ್ತ ಯೋಧರಾದ ಈರಪ್ಪ ಬಸಪ್ಪ ಪಡೇಸೂರ ಹಾಗೂ ಚನ್ನವೀರಪ್ಪ ಸೊನ್ನದ ಅವರನ್ನು ಸನ್ಮಾನಿಸಿ, ಅವರು ಮಾತನಾಡಿದರು.ವೀರಯೋಧರು ತಮ್ಮ ತ್ಯಾಗ ಬಲಿದಾನದಿಂದ ದೇಶದ ರಕ್ಷಣೆ ಮಾಡುತ್ತಿರುವರು. ಕಾರ್ಗಿಲ್ ಎಂಬ ಹಿಮ ಬೀಳುವ ಪ್ರದೇಶದಲ್ಲಿ ಯುದ್ಧ ಮಾಡುವದು ಅಷ್ಟು ಸುಲಭವಲ್ಲ. ಅಂತಹ ಜಾಗದಲ್ಲಿ 1999ರಲ್ಲಿ ಪಾಕಿಸ್ತಾನವನ್ನು ಹಿಮ್ಮೆಟ್ಟಿಸಿ ವಿಜಯ ಪತಾಕೆ ಹಾರಿಸಿದ ಜು.26ನ್ನು ಕಾರ್ಗಿಲ್ ವಿಜಯೋತ್ಸವವಾಗಿ ದೇಶಾದ್ಯಂತ ಆಚರಿಸಲಾಗುತ್ತಿದೆ ಎಂದರು.ಹಿರಿಯರಾದ ಎಂ.ಎಸ್.ಕರೀಗೌಡ್ರರ ಮಾತನಾಡಿ, ಅಟಲ್ ಬಿಹಾರಿ ವಾಜಪೇಯಿ ಅವರ ನೇತೃತ್ವದಲ್ಲಿ ಅಂದಿನ ಸರ್ಕಾರ ಪಾಕಿಸ್ತಾನಕ್ಕೆ ದಿಟ್ಟ ಉತ್ತರ ನೀಡಿತ್ತು. ಇಂದು ಭಾರತ ಬಲಿಷ್ಠ ರಾಷ್ಟ್ರವಾಗಿದೆ. ಪಾಕಿಸ್ತಾನ ಎಷ್ಟೇ ಬಾರಿ ನಮ್ಮ ಮೇಲೆ ಆಕ್ರಮಣ ಮಾಡಿದರೂ ಅದನ್ನು ಕೆಲವೇ ನಿಮಿಷಗಳಲ್ಲಿ ಹಿಮ್ಮೆಟ್ಟಿಸುವ ಧೈರ್ಯ ನಮ್ಮ ಸೈನಿಕರಲ್ಲಿದೆ ಎಂದರು.ಈ ವೇಳೆ ಬಿಜೆಪಿ ಜಿಲ್ಲಾ ವಕ್ತಾರ ಎಂ.ಎಂ.ಹಿರೇಮಠ, ಸುರೇಶ ಮರಳಪ್ಪನವರ ಮಾತನಾಡಿದರು.
ಅನೀಲ ಅಬ್ಬಿಗೇರಿ, ಅಶೋಕ ಸಂಕಣ್ಣವರ, ಸಂತೋಷ ಅಕ್ಕಿ, ಶಂಕರ ಕಾಕಿ, ಶಂಕರ ಕರಿಬಿಷ್ಠಿ, ಸುಧೀರ ಕಾಟಿಗರ, ಶಿವಪ್ಪ ಮುಳ್ಳಾಳ, ರಮೇಶ ಕುರ್ತಕೋಟಿ, ಬಸವರಾಜ ಜಕ್ಕಲಿ, ರಮೇಶ ಸಜ್ಜಗಾರ, ದೇವೆಂದ್ರಪ್ಪ ಹೂಗಾರ, ರಾಚಯ್ಯ ಹೊಸಮಠ, ಗೈಬುಸಾಬ ಕಲೇಬಾಯಿ, ವಿಜಯಕುಮಾರ ಹಿರೇಮಠ, ನಿರ್ಮಲಾ ಕೊಳ್ಳಿ, ಸ್ವಾತಿ ಅಕ್ಕಿ, ವಿಜಯ ಹಿರೇಮಠ, ಕುಮಾರ ಪಾಟೀಲ, ವಿನಾಯಕ ಕಾಟ್ವಾ, ವಿನಾಯಕ ಹೊರಕೇರಿ, ಮಂಜು ದೂನವರ ಹಾಗೂ ಪ್ರಮುಖರು ಇದ್ದರು.