ಕರ್ನಾಟಕ ಸೇರಿ ಕೇವಲ ಮೂರು ರಾಜ್ಯಗಳಲ್ಲಿ ಅಧಿಕಾರಿದಲ್ಲಿರುವ ಕಾಂಗ್ರೆಸ್ ಸರ್ಕಾರ ರಾಜ್ಯಗಳ ಅಭಿವೃದ್ಧಿ ಹಾಗೂ ರಾಜ್ಯದ ಜನಹಿತ ಮರೆತ್ತಿವೆ.

ಯಲಬುರ್ಗಾ: ಜನಹಿತ ಕಾರ್ಯಗಳಿಗೆ ಕಾಂಗ್ರೆಸ್ಸಿಗರು ಸದಾ ವಿರೋಧ ಮಾಡುತ್ತಾ ಬಂದಿದ್ದಾರೆ. ಅವರಿಗೆ ಜನರ ವಿಕಾಸ ಬೇಕಿಲ್ಲ. ಜನರನ್ನು ದಾರಿ ತಪ್ಪಿಸುವ ಕಾರ್ಯ ಕೈ ಬಿಡಬೇಕು.ಇಲ್ಲದಿದ್ದರೇ ರಾಜ್ಯದಲ್ಲೂ ಸಹ ಜನ ಅವರನ್ನು ಕೈ ಬಿಡುವುದರಲ್ಲಿ ಸಂಶಯವಿಲ್ಲ ಎಂದು ಮಾಜಿ ಸಚಿವ ಹಾಲಪ್ಪ ಆಚಾರ್ ಹೇಳಿದರು.

ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಬುಧವಾರ ವಿಬಿ ಜಿ ರಾಮ್‌ ಜಿ ಯೋಜನೆ ಕುರಿತು ಜರುಗಿದ ಕಾರ್ಯಾಗಾರ ಉದ್ದೇಶಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಜನರ ಕಲ್ಯಾಣಕ್ಕೆ ಮಹತ್ತರ ಯೋಜನೆಯನ್ನು ಪರಿಷ್ಕೃತ ಮಾಡಿ ಜನರಿಗೆ ಸದುಪಯೋಗವಾಗುವ ಕಾರ್ಯ ಕೈಗೊಂಡಿದೆ. ಆದರೆ ಯೋಜನೆಯ ಲಾಭ ಅರಿಯದೆ ಕಾಂಗ್ರೆಸ್ಸಿಗರು ಯೋಜನೆ ಟೀಕಿಸುವ ಕೆಲಸ ಮಾಡುತ್ತಿದ್ದಾರೆ. ಜನರಿಗೂ ಯೋಜನೆಯ ಲಾಭದ ಬಗ್ಗೆ ಅರಿವಿದೆ. ಅವರನ್ನು ದಾರಿ ತಪ್ಪಿಸುವ ಕುತಂತ್ರಕ್ಕೆ ಕಾಂಗ್ರೆಸ್ ಪ್ರಯತ್ನಿಸುತ್ತಿದೆ. ರಾಜ್ಯದಲ್ಲೂ ಜನ ಈ ಕಾಂಗ್ರೆಸ್ ಅನ್ನು ಕೈ ಬಿಡುವುದರಲ್ಲಿ ಸಂಶಯವಿಲ್ಲ ಎಂದರು.

ಕರ್ನಾಟಕ ಸೇರಿ ಕೇವಲ ಮೂರು ರಾಜ್ಯಗಳಲ್ಲಿ ಅಧಿಕಾರಿದಲ್ಲಿರುವ ಕಾಂಗ್ರೆಸ್ ಸರ್ಕಾರ ರಾಜ್ಯಗಳ ಅಭಿವೃದ್ಧಿ ಹಾಗೂ ರಾಜ್ಯದ ಜನಹಿತ ಮರೆತ್ತಿವೆ.ವಿಬಿ ಜಿ ರಾಮ್‌ ಜಿ ಯೋಜನೆ ಬಗ್ಗೆ ಅಪಪ್ರಚಾರ ಮಾಡುತ್ತಿವೆ. ದೇಶದ ಇತರೆ ರಾಷ್ಟ್ರಗಳು ಈ ಯೋಜನೆ ಸ್ವಾಗತಿಸಿದ್ದು, ಯಾರೂ ಅಪಪ್ರಚಾರಕ್ಕೆ ಕಿವಿಗೊಡಬಾರದು ಎಂದರು.ಖಾಲಿ ಕೈ:

ಕಾಂಗ್ರೆಸ್ಸಿಗರದು ರಾಜ್ಯದಲ್ಲಿ ಖಾಲಿ ಕೈ ಆಗಿದೆ. ಹಾಗಾಗಿ ಭ್ರಷ್ಟಾಚಾರ, ಲೂಟಿಯಲ್ಲಿ ಮುಂದಾಗಿದ್ದಾರೆ. ಮುಡಾ ಹಗರಣ, ಅಬಕಾರಿ ಇಲಾಖೆ ಲೂಟಿ, ವಾಲ್ಮೀಕಿ ನಿಗಮದ ಹಣ ದುರ್ಬಳಕೆ ಹೀಗೆ ಸಾಲು ಸಾಲು ಲೂಟಿ ಮಾಡಲು ಕಾಂಗ್ರೆಸ್ಸಿಗರು ಮುಂದಾಗಿದ್ದಾರೆ. ಅಭಿವೃದ್ಧಿ ಮರೆತು ಬರೀ ಗ್ಯಾರಂಟಿಯಲ್ಲಿ ಕಾಲ ಹಗರಣ ಆಗುತ್ತಿದೆ. ರಾಜ್ಯ ಸರ್ಕಾರದ ಖಜಾನೆ ಸಂಪೂರ್ಣ ಖಾಲಿಯಾಗಿದೆ. ಹೀಗಾಗಿ ಯೋಜನೆಗೆ ಅನುದಾನ ನೀಡಲು ಆಗದೇ ಪ್ರತಿಭಟನೆ ಮಾಡುವ ಮೂಲಕ ಕಾಲಹರಣ ಮಾಡುವುದಕ್ಕೆ ಮುಂದಾಗಿದ್ದು, ನಾಚಿಕೆಗೇಡಿನ ಸಂಗತಿ. ರಾಜ್ಯದಲ್ಲಿ ಅಭಿವೃದ್ಧಿ ಪರ ಕೆಲಸ ನಡೆಯುತ್ತಿಲ್ಲ. ಗ್ಯಾರಂಟಿ ನೆಪದಲ್ಲಿ ಮುಂದಿನ ೨೦ ವರ್ಷದ ಅಭಿವೃದ್ಧಿ ವೇಗ ಹಿಂದಕ್ಕೆ ಬಿದ್ದಿದೆ ಎಂದರು.

ಪ್ರಧಾನಿ ನರೇಂದ್ರ ಮೋದಿ ಬಂದ ಮೇಲೆ ನರೇಗಾ ಯೋಜನೆಯ ಅನುದಾನ ಹಣ ಹೆಚ್ಚಳವಾಗಿದೆ. ಮನಮೋಹನ್ ಸಿಂಗ್ ಅವಧಿಯಲ್ಲಿ ಬರೀ ₹40 ಸಾವಿರ ಕೋಟಿ ಹಣ ಮಾತ್ರ ಮೀಸಲಿತ್ತು. ಅದನ್ನು ಅಭಿವೃದ್ಧಿಪಡಿಸಿದ್ದು ಬಿಜೆಪಿ ಸರ್ಕಾರ ಪ್ರಧಾನಿ ನರೇಂದ್ರ ಮೋದಿ ಅವರಿಂದ ಭಾರತ ವಿಶ್ವಗುರು ಆಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಸ್ವಚ್ಛ ಹಾಗೂ ಸ್ವಸ್ಥ್ಯ ಆಡಳಿತದಿಂದ ಕಾಂಗ್ರೆಸ್ಸಿನಲ್ಲಿ ಎಲ್ಲಿಯೂ ಸ್ಥಾನ ಸಿಗುತ್ತಿಲ್ಲ ಎಂದರು.

ಜಿರಾಮ್‌ಜಿ ಯೋಜನೆಯ ಜಿಲ್ಲಾ ಸಂಚಾಲಕ ಕೆ.ಮಹೇಶ ಮಾತನಾಡಿ, ಜಿರಾಮ್ ಜಿ ಯೋಜನೆಯಿಂದ 40 % ಹಣ ರಾಜ್ಯ ಸರ್ಕಾರ ಕಟ್ಟಬೇಕು. ಆ ಹಣ ಕಟ್ಟಲು ಆಗದೆ ಅಪಪ್ರಚಾರ ಕಾರ್ಯ ನಡೆದಿದೆ. ಯೋಜನೆ ಸಂಪೂರ್ಣ ಅರಿಯುವ ಕಾರ್ಯ ಸಹ ಕಾಂಗ್ರೆಸ್ಸಿಗರು ಮಾಡುತ್ತಿಲ್ಲ. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯ ಫಲ ಗ್ರಾಮೀಣ ಮಟ್ಟದಲ್ಲೂ ತಲುಪಿಸಬೇಕು. ಜನರಿಗೆ ಈ ಯೋಜನೆಯ ಲಾಭ ತಲುಪಬೇಕು ಎಂದರು.

ಬಿಜೆಪಿ ಮಂಡಲದ ಅಧ್ಯಕ್ಷ ಮಾರುತಿ ಹೊಸಮನಿ ಮಾತನಾಡಿ, ಭ್ರಷ್ಟತೆಗೆ ವಿಬಿ ಜಿ ರಾಮ್ ಜಿ ಯೋಜನೆಯಿಂದ ಕಡಿವಾಣ ಬೀಳುತ್ತದೆ. ಕೇಂದ್ರದ ಯೋಜನೆಗಳು ಸದಾ ಕಾಲ ಜನರಿಗೆ ನೆರವಾಗಿ ತಲುಪುತ್ತವೆ. ಆ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಯೋಜನೆ ಕೈಗೊಳ್ಳುತ್ತಾರೆ ಎಂದರು.

ವಕ್ತಾರ ವೀರಣ್ಣ ಹುಬ್ಬಳ್ಳಿ ಮಾತನಾಡಿ, ರಾಜ್ಯ ಸರ್ಕಾರ ಅಭಿವೃದ್ಧಿ ಕಾರ್ಯ ಮಾತನಾಡದೆ ಸುಳ್ಳುಗಳ ಸರಮಾಲೆ ಸ್ಥಳೀಯ ಶಾಸಕರು ಮಾತನಾಡುತ್ತಾರೆ ಎಂದು ದೂರಿದರು.

ಈ ಸಂದರ್ಭದಲ್ಲಿ ಬಸಲಿಂಗಪ್ಪ ಭೂತೆ, ಕೆ.ಮಹೇಶ, ಅರವಿಂದಗೌಡ ಪಾಟೀಲ್,ವೀರಣ್ಣ ಹುಬ್ಬಳ್ಳಿ, ಶರಣಪ್ಪ ಈಳಿಗೇರ, ರತನ್ ದೇಸಾಯಿ, ಸಂತೋಷಿಮಾ ಜೋಶಿ, ಶಕುಂತಲಾದೇವಿ ಮಾಲಿಪಾಟೀಲ್, ಅಮರೇಶ ಹುಬ್ಬಳ್ಳಿ, ಅಯ್ಯನಗೌಡ ಕೆಂಚಮ್ಮನವರ, ಬಸವರಾಜ ಗುಳಗುಳಿ, ಸುರೇಶಗೌಡ ಶಿವನಗೌಡ್ರ, ಶಿವಪ್ಪ ವಾದಿ, ಲಕ್ಷಣ ಕಾಳಿ, ನಾಗರಾಜ ಹಾಲಳ್ಳಿ, ಪ್ರಕಾಶ ತಹಸೀಲ್ದಾರ್, ರವಿ ಕಲಬುರಗಿ, ಸುರೇಶ ಹೊಸಳ್ಳಿ ಹಾಗೂ ಕಾರ್ಯಕರ್ತರಿದ್ದರು.