ರಾಣಿಬೆನ್ನೂರು: ನೇಕಾರ ಸಂತ ಆದ್ಯ ವಚನಕಾರ ದೇವರ ದಾಸಿಮಯ್ಯ ಬಸವಾದಿ ಶರಣರಗಿಂತ ಪೂರ್ವದಲ್ಲಿಯೇ ಕಾಯಕ ನಿಷ್ಠೆ ಮತ್ತು ವಚನಗಳನ್ನು ಹೇಳುವ ಮೂಲಕ ಸಮಾಜದ ಅಂಕು ಡೊಂಕು ತಿದ್ದಿದ ಮೊದಲಿಗರಾಗಿದ್ದಾರೆ ಎಂದು ತಹಸೀಲ್ದಾರ್ ಆರ್.ಎಚ್. ಭಾಗವಾನ್ ಹೇಳಿದರು.ನಗರದ ಮಿನಿ ವಿಧಾನಸೌಧ ಆವರಣದ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ಆದಿಕವಿ ನೇಕಾರ ಸಂತ ದೇವರ ದಾಸಿಮಯ್ಯ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು.

ಇಂದಿನ ಪೀಳಿಗೆಗೆ ಮೂಲ ಪುರುಷರ ಬಗ್ಗೆ ತಿಳಿಸುವ ಕಾರ್ಯವಾಗಬೇಕು. ಒಂಭತ್ತನೇ ಶತಮಾನದಲ್ಲಿ ಎರಡನೇ ಜಯಸಿಂಹ ಮಹಾರಾಜ ತಮ್ಮ ಧರ್ಮವನ್ನು ಬಿಟ್ಟು ದೇವರ ದಾಸಿಮಯ್ಯ ವಚನಗಳು ಹಾಗೂ ಕಾಯಕ ಕಂಡು ನೇಕಾರ ಸಮಾಜಕ್ಕೆ ಸೇರಿದ್ದು ಇತಿಹಾಸವಾಗಿದೆ. ಅಂತಹವರ ತತ್ವ ಸಿದ್ಧಾಂತಗಳನ್ನು ಜೀವನದಲ್ಲಿ ರೂಢಿಸಿಕೊಂಡು ಸಮಾಜ ಏಳಿಗೆಗೆ ಶ್ರಮಿಸಬೇಕು ಎಂದರು.ಪ್ರಾಚಾರ್ಯ ಡಾ. ಮೃತ್ಯುಂಜಯ ಹಿರೇಮಠ, ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಡಾ. ಬಸವರಾಜ ಕೇಲಗಾರ ಮಾತನಾಡಿದರು. ನೇಕಾರ ಒಕ್ಕೂಟದ ಜಿಲ್ಲಾಧ್ಯಕ್ಷ ಹನುಮಂತಪ್ಪ ಮುಕ್ತೇನಹಳ್ಳಿ, ರಾಜ್ಯ ಸಂಘಟನಾ ಕಾರ್ಯದರ್ಶಿ ರಮೇಶ ಗುತ್ತಲ, ದೇವರ ದಾಸಿಮಯ್ಯ ಉತ್ಸವ ಸಮಿತಿ ಅಧ್ಯಕ್ಷ ಬಸವರಾಜ ಲಕ್ಷ್ಮೇಶ್ವರ, ಕಾರ್ಯದರ್ಶಿ ಮಂಜುನಾಥ ಹೊಸಪೇಟೆ, ಮಾರುತಿ ಗರಡಿಮನಿ, ಗಿರೀಶ ಗುಳೇದಗುಡ್ಡ, ಹನುಮಂತಪ್ಪ ಕಬ್ಬಾರ, ಲಕ್ಷ್ಮಣ ಸಾಲಿ, ಅಶೋಕ ದುರ್ಗಶೀಮಿ, ಪ್ರೀತಂ ಬಜ್ಜೆ, ಕರಬಸಪ್ಪ ನೀಲಗುಂದ, ಗುಡದಯ್ಯ ನೀಲಗುಂದ, ಪ್ರಕಾಶ ಅಗಡಿ, ಮನೊಹರ ಲಕ್ಷ್ಮೇಶ್ವರ, ಪರುಶುರಾಮ ಅಗಡಿ ಮತ್ತಿತರರಿದ್ದರು.