ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ 2024 ರಿಂದ 2025ರವಗಿನ ಆಯ-ವ್ಯಯದಲ್ಲಿ ಸಂಘಕ್ಕೆ ₹40,721 ಉಳಿತಾಯವಾಗಿದೆ ಎಂದು ಸಂಘದ ಜಗಳೂರು ತಾಲೂಕು ಅಧ್ಯಕ್ಷ ಚಿದಾನಂದ ಜಿ.ಎಸ್. ಹೇಳಿದ್ದಾರೆ.

- 2024-25ನೇ ಸಾಲಿನ ಆಯವ್ಯಯ ಮಂಡನೆ-ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷ ಚಿದಾನಂದ ಮಾಹಿತಿ

- - -

ಕನ್ನಡಪ್ರಭ ವಾರ್ತೆ ಜಗಳೂರು

ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ 2024 ರಿಂದ 2025ರವಗಿನ ಆಯ-ವ್ಯಯದಲ್ಲಿ ಸಂಘಕ್ಕೆ ₹40,721 ಉಳಿತಾಯವಾಗಿದೆ ಎಂದು ಸಂಘದ ಜಗಳೂರು ತಾಲೂಕು ಅಧ್ಯಕ್ಷ ಚಿದಾನಂದ ಜಿ.ಎಸ್. ಹೇಳಿದರು.

ಪಟ್ಟಣದ ಪತ್ರಿಕಾ ಭವನದಲ್ಲಿ 2024-25ನೇ ಸಾಲಿನ ವಾರ್ಷಿಕ ಕೊನೆಯ ಆಯಾವ್ಯಯ ಮಂಡನೆಯ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು. 2024ರ ನ.1ರಿಂದ 2025ರ ನ.30 ರವರೆಗಿನ ಅವಧಿಯ ಉಳಿತಾಯ ಇದಾಗಿದೆ. ಸಂಘಕ್ಕೆ ಪತ್ರಿಕಾಗೋಷ್ಠಿ ಸೇರಿದಂತೆ ಸಂಘದಲ್ಲಿ ಖರ್ಚು- ವೆಚ್ಚಗಳನ್ನು ಪಾರದರ್ಶಕವಾಗಿ ಲಿಖಿತ ರೂಪದಲ್ಲಿ ಲೆಕ್ಕಪತ್ರ ನಿರ್ವಹಣೆ ಮಾಡಲಾಗಿದೆ. ನವೆಂಬರ್ ಅಂತ್ಯಕ್ಕೆ ಸರ್ವ ಸದ್ಯಸರ ಸಮ್ಮುಖ ಆಯವ್ಯಯದ ಮಾಹಿತಿ ಮಂಡಿಸಲಾಗಿದೆ ಎಂದರು.

ಸಂಘದ ಸದಸ್ಯರ ಸಹಕಾರದಿಂದ ತಮ್ಮ ಅಧ್ಯಕ್ಷತೆಯಲ್ಲಿ ಸಂಘವು ಉತ್ತಮವಾಗಿ ನಡೆದುಬಂದಿದೆ. ವಿವಿಧ ಚಟುವಟಿಕೆಗಳಲ್ಲಿ ಸಂಘವು ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿರುವುದು ಹೆಮ್ಮೆಯ ಸಂಗತಿ. ಆದರೆ ಪತ್ರಕರ್ತರಿಗೆ ನಿವೇಶನ, ಪತ್ರಕರ್ತರ ಭವನ ಪೂರ್ಣಗೊಳ್ಳುವ ಭರವಸೆ ಈಡೇರಿಸಲಾಗಿಲ್ಲ ಎಂದು ಬೇಸರಿಸಿದರು.

ತಮ್ಮನ್ನು ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯನನ್ನಾಗಿ ಆಯ್ಕೆಗೊಳಿಸಿದ ಸರ್ವ ಸದಸ್ಯರಿಗೆ ಅಭಿನಂದನೆಗಳು. ಮುಂಬರುವ ಅವಧಿಯ ಅಧ್ಯಕ್ಷರು, ಪದಾಧಿಕಾರಿಗಳು, ತಾಲೂಕು ಸಂಘದ ನಿಯಮಾವಳಿಗಳಿಗೆ ಬದ್ಧರಾಗಿ ನಡೆದುಕೊಳ್ಳಬೇಕು. ಸಂಘಕ್ಕೆ ಯಾವುದೇ ಚ್ಯುತಿ ಬಾರದಂತೆ ನೋಡಿಕೊಳ್ಳಬೇಕು. ಈ ಹಿಂದೆ ಮೂರು ಬಾರಿ ಯಾವ ರೀತಿ ಅಧ್ಯಕ್ಷರ ಹಾಗೂ ಸರ್ವ ಪದಾಧಿಕಾರಿಗಳ ಅವಿರೋಧ ಆಯ್ಕೆಯಾಗಿದೆಯೋ ಅದೇ ರೀತಿ ಅವಿರೋಧ ಆಯ್ಕೆ ಮಾಡೋಣ ಎಂದರು.

ಭಾರತೀಯ ಪತ್ರಕರ್ತರ ಒಕ್ಕೂಟದ ಸದಸ್ಯ ಅಣಬೂರು ಮಠದ ಕೊಟ್ರೇಶ್ ಮಾತನಾಡಿ, ಪತ್ರಕರ್ತರ ವೃತ್ತಿ ಅತ್ಯಂತ ಮೌಲ್ಯಯುತವಾದುದು. ಇಲ್ಲಿ ಸ್ಪರ್ಧೆ, ವೃತ್ತಿ ಬದ್ಧತೆ ಸಹಜವಾಗಿದೆ. ವೈಯಕ್ತಿಕ ಒತ್ತಡಗಳ ಮಧ್ಯೆಯೂ ತಾಲೂಕು ಮಟ್ಟದಲ್ಲಿ ಸಂಘವನ್ನು ರಚನಾತ್ಮಕವಾಗಿ, ಎಲ್ಲರ ವಿಶ್ವಾಸ ಗಳಿಸಿಕೊಂಡು ಪಾರದರ್ಶಕ ಲೆಕ್ಕಪತ್ರ ನಿಭಾಯಿಸಿದ ಅಧ್ಯಕ್ಷ ಚಿದಾನಂದಪ್ಪ ಅವರ ಕಾರ್ಯ ಶ್ಲಾಘನೀಯ ಎಂದರು.

ಹಿರಿಯ ಪತ್ರಕರ್ತ ಡಿ.ಶ್ರೀನಿವಾಸ್ ಮಾತನಾಡಿ, ಸಮಾಜದಲ್ಲಿ ಪತ್ರಕರ್ತರು ಸಂವಿಧಾನದ ನಾಲ್ಕನೇ ಅಂಗದಂತೆ ಗುರುತಿಸಿಕೊಂಡಿದ್ದಾರೆ. ಸೇವೆಯಲ್ಲಿ ಸಕ್ರಿಯವಾಗಿ ನಿರಂತರ ಸುದ್ದಿ ಬರವಣಿಗೆ, ಜ್ಞಾನ ಸಂಪಾದನೆ, ವಿಭಿನ್ನ ರೀತಿಯ ಕೌಶಲ ಮೈಗೂಡಿಸಿಕೊಳ್ಳಬೇಕು. ಸುದ್ದಿಗಳ ಮಾಡದೇ ನಾನು ಪತ್ರಕರ್ತರ ಎಂದು ಹೇಳಿಕೊಳ್ಳುವರಿಗೆ ಸಂಘವು ಕಡಿವಾಣ ಹಾಕಬೇಕು ಎಂದು ಹೇಳಿದರು.

ತಾಲೂಕು ಪ್ರಧಾನ ಕಾರ್ಯದರ್ಶಿ ಲೋಕೇಶ್ ಎಂ. ಐಹೊಳೆ, ಖಜಾಂಚಿ ಕೆ.ಎಂ. ಜಗದೀಶ್, ಕಾರ್ಯದರ್ಶಿ ರವಿಕುಮಾರ್ ಜೆ.ಒ., ಕಾರ್ಯಕಾರಿ ಸಮಿತಿಯ ಸದಸ್ಯರಾದ ಒ.ಮಂಜಣ್ಣ, ಎಚ್.ಬಾಬು, ಧನ್ಯಕುಮಾರ್ ಎಚ್.ಎಂ.ಹೊಳೆ, ಮಾಜಿ ಅಧ್ಯಕ್ಷ ಎಂ.ಸಿ. ಬಸವರಾಜ್, ಸೋಮನಗೌಡ, ಮಂಜಯ್ಯ, ಶಿವಲಿಂಗಪ್ಪ, ಮಾದಿಹಳ್ಳಿ ಮಂಜಪ್ಪ, ಬಿ.ಸತೀಶ್, ಸಂದೀಪ್, ತಿಪ್ಪೇಸ್ವಾಮಿ, ಮಹಾಂತೇಶ್ ಬ್ರಹ್ಮ, ಬಿ.ಬಸವರಾಜ್, ಮಾರಪ್ಪ, ರಕೀಬ್, ಜಗಜೀವನ್ ರಾಂ, ಇತರರು ಇದ್ದರು.

- - -

(ಕೋಟ್‌) ಎರಡನೇ ಬಾರಿ ಜಿಲ್ಲಾ ಸಂಘದ ಪದಾಧಿಕಾರಿ ಚುನಾವಣೆಯಲ್ಲಿ ಉಪಾಧ್ಯಕ್ಷರನ್ನಾಗಿ ಆಯ್ಕೆಗೊಳಿಸಿದ ಸರ್ವರಿಗೂ ಆಬಾರಿ. ಸಮಾಜದಲ್ಲಿ ಪತ್ರಕರ್ತರನ್ನು ಗೌರವ ಭಾವನೆಯಿಂದ ಕಾಣುತ್ತಾರೆ. ಈ ನಿಟ್ಟಿನಲ್ಲಿ ಹಿರಿಯರ ಸಲಹೆಯಿಂದ ವೃತ್ತಿ ಗೌರವ ಕಾಪಾಡಿಕೊಂಡು ಕರ್ತವ್ಯನಿಷ್ಠೆ ಮೆರೆಯಬೇಕು.

- ಬಿ.ಪಿ. ಸುಭಾನ್, ಜಿಲ್ಲಾ ಉಪಾಧ್ಯಕ್ಷ.

- - -

-15ಜೆಜಿಎಲ್1: ಸಂಘದ ಅಧ್ಯಕ್ಷ ಚಿದಾನಂದ ಜಿ.ಎಸ್. ನೇತೃತ್ವದಲ್ಲಿ 2024-25ನೇ ಸಾಲಿನ ಸಾಮಾನ್ಯ ಸಭೆ, ಆಯ್ಯ-ವ್ಯಯ ಮಂಡನೆ ನಡೆಯಿತು.