ಸಾರಾಂಶ
ಪಾಂಡವಪುರ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ, ಖಜಾಂಚಿ ಹಾಗೂ ರಾಜ್ಯ ಪರಿಷತ್ ಸದಸ್ಯ ಸ್ಥಾನಕ್ಕೆ ನ.16 ರಂದು ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಎಂ.ಜಯರಾಮು, ವೇಣುಗೋಪಾಲ್ ಹಾಗೂ ಎಚ್.ಎನ್.ರಾಮಕೃಷ್ಣೇಗೌಡ ಬುಧವಾರ ಚುನಾವಣಾಧಿಕಾರಿ ಎಚ್.ಸಿ.ಶಿವಪ್ಪ ಅವರಿಗೆ ನಾಮಪತ್ರ ಸಲ್ಲಿಸಿದರು.
ಕನ್ನಡಪ್ರಭ ವಾರ್ತೆ ಪಾಂಡವಪುರ
ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ, ಖಜಾಂಚಿ ಹಾಗೂ ರಾಜ್ಯ ಪರಿಷತ್ ಸದಸ್ಯ ಸ್ಥಾನಕ್ಕೆ ನ.16 ರಂದು ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಎಂ.ಜಯರಾಮು, ವೇಣುಗೋಪಾಲ್ ಹಾಗೂ ಎಚ್.ಎನ್.ರಾಮಕೃಷ್ಣೇಗೌಡ ಬುಧವಾರ ಚುನಾವಣಾಧಿಕಾರಿ ಎಚ್.ಸಿ.ಶಿವಪ್ಪ ಅವರಿಗೆ ನಾಮಪತ್ರ ಸಲ್ಲಿಸಿದರು.ನಾಮಪತ್ರ ಸಲ್ಲಿಸಲು ನ.7 ಕೊನೆ ದಿನವಾಗಿದ್ದು, ಅಧ್ಯಕ್ಷ ಸ್ಥಾನಕ್ಕೆ ಜಯರಾಮು, ಖಜಾಂಚಿ ಸ್ಥಾನಕ್ಕೆ ವೇಣುಗೋಪಾಲ್ ಹಾಗೂ ರಾಜ್ಯ ಪರಿಷತ್ ಸದಸ್ಯ ಸ್ಥಾನಕ್ಕೆ ಎಚ್.ಎನ್.ರಾಮಕೃಷ್ಣೇಗೌಡ ಆಕಾಂಕ್ಷಿತ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದರು.
ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಎಂ.ಜಯರಾಮು ಮಾತನಾಡಿ, ನ.16ರಂದು ಚುನಾವಣೆ ನಡೆಯಲಿದ್ದು, ಮೂವರು ನಾಮಪತ್ರ ಸಲ್ಲಿಸಿದ್ದೇವೆ. ಸರ್ಕಾರಿ ನೌಕರರ ನಮ್ಮ ತಂಡಕ್ಕೆ ಹೆಚ್ಚಿನ ಮತಕೊಟ್ಟು ಗೆಲ್ಲಿಸಲಿದ್ದಾರೆ ಎನ್ನುವ ವಿಶ್ವಾಸವಿದೆ ಎಂದರು.ಸರ್ಕಾರಿ ನೌಕರರ ಸಂಘಕ್ಕೆ ಹೊಸ ಕಾಯಕಲ್ಪಕೊಡುವ ಜತೆಗೆ ನೌಕರರ ಆರೋಗ್ಯ ಸಂಜೀವಿನಿ, ವೇತನ ಸಮಸ್ಯೆ, ಎನ್‌ಪಿಎಸ್ ಬಗೆಹರಿಸುವುದು, ನೌಕರ ಸಮಸ್ಯೆಗಳ ವಿರುದ್ಧ ಹೋರಾಡುವುದರ ಜತೆಗೆ ನೌಕರರ ಧ್ವನಿಯಾಗಿ ಕೆಲಸ ಮಾಡುತ್ತೇನೆ ಭರವಸೆ ನೀಡಿದರು.ಈ ವೇಳೆ ನಿರ್ದೇಶಕರಾದ ಕೆ.ಯುವರಾಜ್, ಕರುಣಕುಮಾರ, ಪ್ರೌಡ ಸಹ ಶಿಕ್ಷಕ ಸಂಘದ ಅಧ್ಯಕ್ಷ ಕೇಶವಮೂರ್ತಿ, ಎಂ.ರಮೇಶ್, ಗಡ್ಡ ಚಂದ್ರಶೇಖರ್, ದೇವೇಗೌಡನಕೊಪ್ಪಲು ಚಂದ್ರಶೇಖರ್, ರವಿಕುಮಾರ್, ವಿಜಯ್‌ಕುಮಾರ್, ಯತೀಂದ್ರಕುಮಾರ್ ಸೇರಿದಂತೆ ಉಪನ್ಯಾಸಕರು, ಶಿಕ್ಷಕರು ಇದ್ದರು.