ಸಾರಾಂಶ
ತೋಕೂರು ಸರ್ಕಾರಿ ಹಿರಿಯ ಪ್ರಾಥಮಿಕ ಹಿಂದುಸ್ಥಾನಿ ಶಾಲೆ ವಿದ್ಯಾರ್ಥಿಗಳಿಗೆ ಜೆರ್ಸಿ ಮತ್ತು ಪ್ಯಾಂಟ್ ವಿತರಣಾ ಕಾರ್ಯಕ್ರಮ ನಡೆಯಿತು.
ಕನ್ನಡಪ್ರಭ ವಾರ್ತೆ ಮೂಲ್ಕಿ
ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪಾಠದ ಜೊತೆಗೆ ಪಠ್ಯೇತರ ಚಟುವಟಿಕೆಗಳೊಂದಿಗೆ ಕ್ರೀಡೆ ಕೂಡ ಮುಖ್ಯ ಎಂದು ಬೈಕಂಪಾಡಿ ರೋಟರಿ ಕ್ಲಬ್ ನ ಅಧ್ಯಕ್ಷ ಹರೀಶ್ ಬಿ ಶೆಟ್ಟಿ ಹೇಳಿದರು.ತೋಕೂರು ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್ ಆಶ್ರಯದಲ್ಲಿ ಬೈಕಂಪಾಡಿ ರೋಟರಿ ಕ್ಲಬ್ ಸಹಕಾರದಲ್ಲಿ ತೋಕೂರು ಸರ್ಕಾರಿ ಹಿರಿಯ ಪ್ರಾಥಮಿಕ ಹಿಂದುಸ್ಥಾನಿ ಶಾಲೆ ವಿದ್ಯಾರ್ಥಿಗಳಿಗೆ ಶಾಲೆಯಲ್ಲಿ ಜರುಗಿದ ನೂತನ ಜೆರ್ಸಿ ಮತ್ತು ಪ್ಯಾಂಟ್ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ರೋಟರಿಯ ವಲಯ ಸೇನಾನಿ ಗಣೇಶ್ ಎಂ ಅವರು ವಿದ್ಯಾರ್ಥಿಗಳಿಗೆ ನೂತನ ಜೆರ್ಸಿ ಮತ್ತು ಪ್ಯಾಂಟ್ ವಿತರಿಸಿದರು. ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್ ನ ಅಧ್ಯಕ್ಷ ದೀಪಕ್ ಸುವರ್ಣ, ರೋಟರಿ ಕ್ಲಬ್ ನ ಶ್ರೀಕಾಂತ್ ಶೆಟ್ಟಿ, ಅಶೋಕ ಎನ್, ಗಂಗಾಧರ ಕುಳಾಯಿ, ಯೋಗೀಶ್ ನಾಯಕ್, ಸರ್ಕಾರಿ ಹಿರಿಯ ಪ್ರಾಥಮಿಕ ಹಿಂದುಸ್ಥಾನಿ ಶಾಲೆಯ ಮುಖ್ಯ ಶಿಕ್ಷಕಿ ವನಿತಾ, ಸಹ ಶಿಕ್ಷಕಿ ಸಿಲ್ವಿಯಾ ಕುಟಿನ್ಹ, ಗೌರವ ಶಿಕ್ಷಕಿ ಪ್ರೇಮಲತಾ ಎಸ್.ಶೆಟ್ಟಿಗಾರ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಸಾವಿತ್ರಿ , ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್ ನ ಸದಸ್ಯರಾದ ರಮೇಶ್ ಕರ್ಕೇರ, ಸಚಿನ್ ಆಚಾರ್ಯ, ಮಹಿಳಾ ಕಾರ್ಯಾಧ್ಯಕ್ಷೆ ಯಶೋಧ ದೇವಾಡಿಗ ಉಪಸ್ಥಿತರಿದ್ದರು.ಶಾಲಾ ಮುಖ್ಯ ಶಿಕ್ಷಕಿ ವನಿತಾ ಸ್ವಾಗತಿಸಿದರು. ಗೌರವ ಶಿಕ್ಷಕಿ ಪ್ರೇಮಲತಾ ಎಸ್. ಶೆಟ್ಟಿಗಾರ್ ವಂದಿಸಿದರು. ಸಹ ಶಿಕ್ಷಕಿ ಸಿಲ್ವಿಯಾ ಕುಟಿನ್ಹ ಕಾರ್ಯಕ್ರಮ ನಿರೂಪಿಸಿದರು.