ಮೇ 7ರ ಸರ್ವ ಸದಸ್ಯರ ಮಹಾ ಮಂಡಳಿ ಸಭೆ ಕುರಿತು ಪೂರ್ ಭಾವಿ ಸಭೆ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಕೇಂದ್ರ ಸರ್ಕಾರದ ಪುರಸ್ಕೃತ ಯೋಜನೆ ರಾಷ್ಟ್ರೀಯ ಅರಣ್ಯೀಕರಣ ಕಾರ್ಯಕ್ರಮ, ಫಾರೆಸ್ಟ್ ಡೆವೆಲಪ್‌ಮೆಂಟ್ ಏಜೆನ್ಸಿ ಎನ್.ಎ.ಪಿ, ಎಫ್.ಡಿ.ಎ ಯೋಜನೆಯಡಿ ಗ್ರಾಮಸ್ಥರ ಸಹ ಭಾಗಿತ್ವದೊಂದಿಗೆ ಗ್ರಾಮ ಅರಣ್ಯ ಸಮಿತಿ ಮೂಲಕ ಜಂಟಿ ಅರಣ್ಯ ಯೋಜನೆ ಮತ್ತು ನಿರ್ವಹಣೆಯನ್ನು ಕಳೆದ 20 ವರ್ಷಗಳಿಂದ ನಡೆಸಿಕೊಂಡು ಬರಲಾಗುತ್ತಿದೆ ಎಂದು ಬೆಂಗಳೂರು ಅರಣ್ಯ ಭವನದ ರಾಜ್ಯ ಮಟ್ಟದ ಸಂಪನ್ಮೂಲ ವ್ಯಕ್ತಿ ಜೆ.ನಾಗರಾಜ್ ತಿಳಿಸಿದರು.
ಬುಧವಾರ ತಾಲೂಕಿನ ನಾಗಲಾಪುರದಲ್ಲಿ ನಾಗಲಾಪುರ ಮತ್ತು ಶಿರಗಳಲೆ ಗ್ರಾಮ ಅರಣ್ಯ ಸಮಿತಿ ಸಮಗ್ರ ಪುನಶ್ಚೇತನ ತರಬೇತಿ ಕಾರ್ಯಾಗಾರ, ಸಮಗ್ರ ನಿರ್ವಹಣಾ ಯೋಜನೆ ಸರ್ವ ಸದಸ್ಯರ ಮಹಾ ಮಂಡಳಿ ಸಭೆ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಮಾತನಾಡಿದರು.ನಿಷ್ಕಿೃಯ ಗ್ರಾಮ ಅರಣ್ಯ ಸಮಿತಿ ಪನಶ್ಚೇತನ ಮಾಡಲು ಉಪ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಅಕೌಂಟೆಂಟ್ ಜನರಲ್ ಎ.ಜಿ. ರವರ ಪತ್ರದಂತೆ ಸಮಗ್ರ ಪುನಶ್ಚೇತನದಿಂದ ಸರ್ವತೋಮುಖ ಅಭಿವೃದ್ಧಿ ಮಾಡಲಾಗುತ್ತಿದೆ. ಎಲೆಮರೆ ಕಾಯಿ ಯಂತೆ ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವ ಸಾಧಕರಿಗೆ ಸಾಲುಮರದ ತಿಮ್ಮಕ್ಕ ಸದ್ಭಾವನಾ ರಾಜ್ಯ ಪ್ರಶಸ್ತಿ ಪ್ರಧಾನ ಮಾಡಲಾಗುತ್ತಿದೆ ಎಂದರು. ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ಕೆ.ರವಿ ಮಾತನಾಡಿ, ಮೇ.7 ರಂದು ಬೆಳಿಗ್ಗೆ 10 ಗಂಟೆಗೆ ನಾಗಲಾಪುರ ಗ್ರಾಮದ ಮುಂಡೊಳ್ಳಿ ಜನತಾ ಕಾಲೋನಿ ಸಮುದಾಯ ಭವನದಲ್ಲಿ ಸಮಗ್ರ ಪುನಶ್ಚೇತನ ತರಬೇತಿ ಕಾರ್ಯಾಗಾರ, ಸಮಗ್ರ ನಿರ್ವಹಣಾ ಯೋಜನೆ ಸರ್ವ ಸದಸ್ಯರ ಮಹಾ ಮಂಡಳಿ ಸಭೆಯನ್ನು ಕೊಪ್ಪ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಇ.ಶಿವಶಂಕರ್ ಉದ್ಘಾಟಿಸಲಿದ್ದಾರೆ. ಕೊಪ್ಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಬಾಬುರಾಜೇಂದ್ರಪ್ರಸಾದ್, ಚಿಕ್ಕಗ್ರಹಾರ ಆರ್.ಎಫ್.ಓ ಎಂ.ಪಿ.ಆದರ್ಶ, ಉಪ ವಲಯ ಅರಣ್ಯಾಧಿಕಾರಿ ಬೀರೇಶ್ ಹೊನ್ನಮ್ಮನವರ್, ಕರ್ನಾಟಕ ರಾಜ್ಯ ಗ್ರಾಮ ಅರಣ್ಯ ಸಮಿತಿಗಳ ಒಕ್ಕೂಟದ ಪತಂಜಲಿ ಆಡಳಿತಾಧಿಕಾರಿ ಎಂ.ಪೂವಯ್ಯ, ಪತಂಜಲಿ ಸಂಸ್ಥೆಯ ಕಲಾವಿದರಾದ ಸರಳಾವಾಸನ್, ಕಲಾವೀರೇಶ್ ಇನ್ನಿತರೆ ಗಣ್ಯರು ಆಗಮಿಸಲಿದ್ದಾರೆಂದರು. ಗ್ರಾಮ ಅರಣ್ಯ ಸಮಿತಿ ನಿರ್ದೇಶಕ ಸತೀಶ್ ಮಾತನಾಡಿ, ಸರ್ಕಾರದ ಯೋಜನೆಯಡಿ ರಚನೆಯಾದ ಗ್ರಾಮ ಅರಣ್ಯ ಸಮಿತಿಗಳ ಪುನಶ್ಚೇತನಕ್ಕೆ ಕಾರ್ಯಕಾರಿ ಸಮಿತಿ ತೀರ್ಮಾನಿಸಿದೆ. 114 ವರ್ಷ ಬದುಕಿ ಸಾರ್ಥಕ ಜೀವನ ನಡೆಸಿದ ಪರಿಸರ ಮಾತೆ ಸಾಲುಮರದ ತಿಮ್ಮಕ್ಕನವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಗುವುದೆಂದರು. ವಿಶೇಷ ಪೋಷಕ ಸದಸ್ಯ ಎಂ.ಡಿ.ಸಜಿ ಮಾತನಾಡಿ, ಅರಣ್ಯ ಪೋಷಣೆ ಮಾಡಿದರೆ ಅದರ ಪಾಲು ಗ್ರಾಮ ಅರಣ್ಯ ಸಮಿತಿಗೆ ಸಲ್ಲಬೇಕು. ಸಮಗ್ರ ನಿರ್ವಹಣಾ ಯೋಜನೆ ಮತ್ತು ಆಡಿಟ್ ಮಾಡಿ ಸರ್ಕಾರದ ಆದೇಶದಂತೆ ಪುನಶ್ಚೇತನ ಮಾಡುವ ಸಂಕಲ್ಪ ದೊಂದಿಗೆ ಕಾರ್ಯಪ್ರವೃತ್ತರಾಗಿದ್ದೇವೆ ಎಂದರು. ಇದೇ ಸಂದರ್ಭದಲ್ಲಿ ಆಹ್ವಾನ ಪತ್ರಿಕೆ ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ ಕಾರ್ಯಕಾರಿ ಸಮಿತಿ ನಿರ್ದೇಶಕರಾದ ಬಲರಾಮ, ಕೆ.ಎಸ್.ಸರ್ವಮಂಗಳ, ಆರ್.ಲತಾ, ಕಾವ್ಯರಂಗ ಸ್ವಾಮಿ, ಕೆ.ಡಿ.ಜೇಮ್ಸ್, ಉಪೇಂದ್ರಗೌಡ, ಕೆ.ಎಸ್.ಅನ್ನಪೂರ್ಣ,ಜೆ.ಮಮತ, ಗಸ್ತು ಅರಣ್ಯ ಪಾಲಕ ಎಂ.ಡಿ.ನಾಗರಾಜ್ ಉಪಸ್ಥಿತರಿದ್ದರು.