ಹಿರೇನಲ್ಲೂರಲ್ಲಿ ಡಾ.ಬಿ.ಆರ್. ಅಂಬೇಡ್ಕರ್, ದಿ. ಬಿ. ಬಸವಲಿಂಗಪ್ಪ ಜನ್ಮ ದಿನಾಚರಣೆ
ಕನ್ನಡಪ್ರಭ ವಾರ್ತೆ ಕಡೂರುಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಪ್ರಬುದ್ಧ ಭಾರತದ ಪರಿಕಲ್ಪನೆಯಡಿ ಸಮಾನತೆ ಸಾರುವ ಪ್ರಪಂಚದ ಶ್ರೇಷ್ಠ ಸಂವಿಧಾನ ರಚಿಸಿಕೊಟ್ಟರು ಎಂದು ಪ್ರೊ.ಬಿ.ಕೃಷ್ಣಪ್ಪನವರ ದಸಂಸ ಜಿಲ್ಲಾ ಸಂಚಾಲಕ ಎಲ್.ಎಸ್ .ಶ್ರೀಕಾಂತ್ ಹೇಳಿದರು.
ಹಿರೇನಲ್ಲೂರಿನಲ್ಲಿ ನಡೆದ ಡಾ.ಬಿ.ಆರ್. ಅಂಬೇಡ್ಕರ್, ದಿ. ಶ್ರೀ ಬಿ. ಬಸವಲಿಂಗಪ್ಪ ಜನ್ಮ ದಿನಾಚರಣೆಯಲ್ಲಿ ಮಾತನಾಡಿ ಎಲ್ಲರಿಗೂ ಸ್ವಾತಂತ್ರ್ಯ, ಸಮಾನತೆ ಪ್ರಾತಿನಿಧ್ಯ ಕಲ್ಪಸಿ, ಎಲ್ಲರು ವಿದ್ಯಾವಂತರಾಗಲು ಶ್ರಮಿಸಿದ ಅಂಬೇಡ್ಕರ್ ವಿಚಾರಧಾರೆ ಮತ್ತು ಆದರ್ಶ ವಿಶ್ವಕ್ಕೆ ದಾರಿದೀಪ ಎಂದರು.ಆರ್ಥಿಕ ಸಾಮಾಜಿಕ ನ್ಯಾಯ ಸಿಗಲು ಪ್ರತಿಯೊಬ್ಬರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಉನ್ನತ ಹುದ್ದೆ ಅಲಂಕರಿಸುವಂತೆ ಶ್ರಮಿಸಬೇಕು ಎಂದರು. ಬಿ. ಬಸವಲಿಂಗಪ್ಪ ಅಂಬೇಡ್ಕರ್ ಚಿಂತನೆಗಳಿಂದ ಪ್ರಭಾವಿತರಾಗಿ ಕರ್ನಾಟಕ ರಾಜಕಾರಣದಲ್ಲಿ ತಮ್ಮದೇ ಆದ ವಿಶೇಷ ಸ್ಥಾನಮಾನ ಪಡೆದಿದ್ದರು. 1972 ರಲ್ಲಿ ಕ ರಾಜ್ಯ ನಗರಾಭಿವೃದ್ಧಿ ಸಚಿವರಾಗಿ ಇಡೀ ಭಾರತದಲ್ಲಿ ಪ್ರಥಮ ಭಾರಿಗೆ ಮಲ ಹೊರುವ ಅಮಾನವೀಯ ಪದ್ಧತಿ ನಿಷೇಧಿಸಿದರು. 1978 ರಲ್ಲಿ ಕರ್ನಾಟಕ ಭೂ ಸುಧಾರಣೆ ಪರಿಶಿಷ್ಟ ಜಾತಿ-ಪಂಗಡ ವರ್ಗಗಳ ಭೂಮಿ ಪರಭಾರೆ ನಿಷೇಧ. ದೇವದಾಸಿ ಪದ್ಧತಿ ಮಹಿಳಾ ಶೋಷಣೆ ಕಟುವಾಗಿ ಅಲ್ಲಗೆಳೆದು ಅವರ ಬದುಕಿಗೆ ಸೂಕ್ತ ಬದಲಾವಣೆ ತರುವಲ್ಲಿ ಮುಂದಾದರು. ಗ್ರಾಮ, ಪಟ್ಟಣ, ನಗರ, ಮಹಾನಗರ ಸ್ವಚ್ಛಗೊಳಿಸುವ ಕಾರ್ಮಿಕರಾದ ಕಾರಣ ಇನ್ನು ಮುಂದೆ ಪೌರ ಕಾರ್ಮಿಕರೆಂದು ಗುರುತಿಸಲು ಪೌರಾಡಳಿತ ಮಂತ್ರಿ ಬಸಲಿಂಗಪ್ಪ ದೇಶಕ್ಕೆ ಕೊಟ್ಟ ಈ ಕೊಡುಗೆಯಿಂದ ಅವರನ್ನು ಸ್ವಚ್ಛ ಭಾರತದ ಪಿತಾಮಹ ಎಂದು ಕರೆಯಲಾಗುತ್ತದೆ ಎಂದರು.
ಗ್ರಾಮದ ಮುಖಂಡ ನರೇಂದ್ರ, ಬಸವರಾಜ್, ಶಿಕ್ಷಕರಾದ ಮೃತ್ಯುಂಜಯಪ್ಪ. ಬಸವರಾಜಪ್ಪ. ಡಿಎಸ್ಎಸ್ ಜಿಲ್ಲಾ ಸಂಘಟನಾ ಸಂಚಾಲಕ ರವಿಶಂಕರ್, ಗ್ರಾಮಸ್ಥರಾದ ಸತೀಶ್ ಎಂ ಕೆ, ಶ್ರೀನಿವಾಸ್ ಸಾಗರ್, ಚಂದನ, ಆಕಾಶ್, ನವೀನ್, ಚೇತನ್ ಇತರರಿದ್ದರು.
1ಕೆಕೆಡಿಯು3. ಕಡೂರಿನ ಹಿರೇನಲ್ಲೂರು ಗ್ರಾಮದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಹಾಗೂ ದಿ. ಶ್ರೀ ಬಿ. ಬಸವಲಿಂಗಪ್ಪ ಜನ್ಮ ದಿನಾಚರಣೆ ನಡೆಯಿತು.